• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Higher Education: ಐಐಟಿ, ಐಐಎಂ, ಎನ್ಐಟಿಯನ್ನು ಉನ್ನತ ಶಿಕ್ಷಣ ಆಯೋಗದ ವ್ಯಾಪ್ತಿಗೆ ತರಲು ಚಿಂತನೆ; ಏನ್ ಹೇಳುತ್ತೆ ವರದಿ?

Higher Education: ಐಐಟಿ, ಐಐಎಂ, ಎನ್ಐಟಿಯನ್ನು ಉನ್ನತ ಶಿಕ್ಷಣ ಆಯೋಗದ ವ್ಯಾಪ್ತಿಗೆ ತರಲು ಚಿಂತನೆ; ಏನ್ ಹೇಳುತ್ತೆ ವರದಿ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಬಜೆಟ್ ಮತ್ತು ಅನುದಾನಕ್ಕಾಗಿ ಯುಜಿಸಿಯಿಂದ ಅನುಮೋದನೆ ಅಗತ್ಯವಿದ್ದರೆ, ಐಐಟಿ, ಐಐಎಂ ಮತ್ತು ಎನ್ಐಟಿಯಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಧನಸಹಾಯಕ್ಕಾಗಿ ನೇರವಾಗಿ ಸಚಿವಾಲಯದೊಂದಿಗೆ ವ್ಯವಹರಿಸುತ್ತವೆ ಅಂತ ವರದಿ ತಿಳಿಸಿದೆ.

 • Share this:

ಎಲ್ಲವೂ ಕೇಂದ್ರ ಸರ್ಕಾರ ಅಂದುಕೊಂಡಂತೆ ಮತ್ತು ಅದರ ಯೋಜನೆಗನುಗುಣವಾಗಿ ನಡೆದರೆ, ದೇಶದ ಪ್ರಮುಖವಾದ ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಭಾರತದ ಇನ್ನಿತರೆ ಪ್ರಮುಖ ಶಿಕ್ಷಣ ಸಂಸ್ಥೆಗಳೆಲ್ಲವೂ ಬಹಳ ಬೇಗನೆ ಒಂದೇ ಸೂರಿನಡಿಯಲ್ಲಿ ಬಂದು ಕಾರ್ಯ ನಿರ್ವಹಿಸುತ್ತವೆ ಅಂತ ಹೇಳಬಹುದು.


ಕೇಂದ್ರ ಸರ್ಕಾರ ಮಾಡುತ್ತಿರುವ ಈ ಹೊಸ ಯೋಜನೆ ಆದ್ರೂ ಏನು ಅಂತ ತಿಳಿದುಕೊಳ್ಳಲು ಈಗ ನಿಮಗೆ ಕುತೂಹಲ ಹೆಚ್ಚಾಗಿರಬೇಕಲ್ಲವೇ? ನಿಮ್ಮ ಈ ಎಲ್ಲಾ ಕುತೂಹಲಕ್ಕೆ ಉತ್ತರ ನೀಡುತ್ತೆ ಈ ವರದಿ.


ಇದನ್ನೂ ಓದಿ: Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!


ಪ್ರಮುಖ ಸಂಸ್ಥೆಗಳು ಒಂದೇ ಸೂರಿನಡಿ


ಪ್ರಸ್ತಾವಿತ ಏಕೈಕ ಉನ್ನತ ಶಿಕ್ಷಣ ನಿಯಂತ್ರಕವಾದ ಭಾರತದ ಉನ್ನತ ಶಿಕ್ಷಣ ಆಯೋಗ ಎಂದರೆ ಎಚ್ಇಸಿಐ ಶೀಘ್ರದಲ್ಲಿಯೇ ನಮ್ಮ ಭಾರತ ದೇಶದ ಪ್ರಮುಖ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಎಜ್ಯುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ಮತ್ತು ಇತರ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳನ್ನು (ಐಎನ್ಐ) ಭಾರತದ ಉನ್ನತ ಶಿಕ್ಷಣ ಆಯೋಗದ ಅಡಿಯಲ್ಲಿ ತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆಯಂತೆ.


ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಪ್ರಕಾರ ಈ ಸಂಸ್ಥೆಗಳನ್ನು ಎಚ್ಇಸಿಐ ಅಡಿಯಲ್ಲಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಉನ್ನತ ಶಿಕ್ಷಣ ಮಂಡಳಿ ಮಸೂದೆಯನ್ನು ಎನ್‌ಡಿಎ ಸರ್ಕಾರ 2018 ರಲ್ಲಿ ಪರಿಚಯಿಸಿತು ಆದರೆ ಎನ್ಇಪಿ 2020 ರ ಅನುಷ್ಠಾನದೊಂದಿಗೆ ಅಂತಿಮಗೊಳಿಸಲಾಯಿತು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


ಕೇಂದ್ರೀಯ ವಿಶ್ವವಿದ್ಯಾಲಯಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ?


ಪ್ರಸ್ತುತ, ಭಾರತದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸ್ವತಂತ್ರವಾಗಿ ಸಂಸತ್ತಿನ ತಮ್ಮದೇ ಆದ ಕಾಯ್ದೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಈ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ ಅಥವಾ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ ಉತ್ತರದಾಯಿಗಳಲ್ಲ.


ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಬಜೆಟ್ ಮತ್ತು ಅನುದಾನಕ್ಕಾಗಿ ಯುಜಿಸಿಯಿಂದ ಅನುಮೋದನೆ ಅಗತ್ಯವಿದ್ದರೆ, ಐಐಟಿ, ಐಐಎಂ ಮತ್ತು ಎನ್ಐಟಿಯಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ಧನಸಹಾಯಕ್ಕಾಗಿ ನೇರವಾಗಿ ಸಚಿವಾಲಯದೊಂದಿಗೆ ವ್ಯವಹರಿಸುತ್ತವೆ ಅಂತ ವರದಿ ತಿಳಿಸಿದೆ.


ದೇಶದಲ್ಲಿದೆ 160 ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು


ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಐಐಟಿ, ಐಐಎಂ, ಎನ್ಐಟಿ ಮತ್ತು ಐಐಎಸ್ಇಆರ್ ನ ವಿವಿಧ ಶಾಖೆಗಳು ಸೇರಿದಂತೆ ಪ್ರಸ್ತುತ ಭಾರತದಲ್ಲಿ 160 ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಿವೆ.


ಇದನ್ನೂ ಓದಿ: Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು


ಈ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತವೆ, ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡುತ್ತವೆ, ಅಷ್ಟೇ ಅಲ್ಲದೆ ಇವುಗಳು ಸರ್ಕಾರದ ಧನಸಹಾಯವನ್ನು ಸಹ ಹೊಂದಿವೆ ಮತ್ತು ತಮ್ಮದೇ ಆದ ಗವರ್ನರ್ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತವೆ.


ಸರ್ಕಾರವು ಎಲ್ಲಾ ಐಎನ್ಐಗಳನ್ನು ಈಗ ಎಚ್ಇಸಿಐ ಅಡಿಯಲ್ಲಿ ವಿಲೀನಗೊಳಿಸಿದರೆ, ವಿಶೇಷವಾಗಿ 2017 ರಲ್ಲಿ ಐಐಎಂ ಕಾಯ್ದೆಯನ್ನು ಅಂಗೀಕರಿಸಿದ ನಂತರ ಅವುಗಳ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಲು ಐಐಎಂನಿಂದ ಪ್ರತಿರೋಧ ವ್ಯಕ್ತವಾಗುವುದನ್ನು ಈಗಾಗಲೇ ನಿರೀಕ್ಷಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

top videos  ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಶಿಕ್ಷಣ ಸಚಿವಾಲಯವು ಪ್ರಸ್ತುತ ಈ ವಿಷಯದ ಕುರಿತಾಗಿರುವ ಭಾರತದ ಉನ್ನತ ಶಿಕ್ಷಣ ಆಯೋಗದ ಅಧಿಕಾರಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸುತ್ತಿದೆ.

  First published: