ಗುವಾಹಟಿ ಐಐಟಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಹಪಾಠಿ ಬಂಧನ, ನಾಲ್ವರ ವಿಚಾರಣೆ

ಗುಜರಾತ್ ನಿವಾಸಿಯಾದ ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ, ಮಾರ್ಚ್ 29 ರಂದು ಗುವಾಹಟಿಯ ಐಐಟಿ-ಹಾಸ್ಟೆಲ್‌ನಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ  ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಪಾಠಿ ಕುಡಿಯುವ ಪಾನಿಯದಲ್ಲಿ ಏನನ್ನೊ ಬೆರೆಸಿ ನಂತರ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಗುವಾಹಟಿಯ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಸ್ (ಐಐಟಿ) ಸಹಪಾಠಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಅಲ್ಲಿನ ವಿದ್ಯಾರ್ಥಿಯನ್ನು ಅಮಾನತು ಮಾಡಿ ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಸಂಸ್ಥೆಯ ವಿದ್ಯಾರ್ಥಿ ಶಿಸ್ತು ಸಮಿತಿಯು ಶಿಫಾರಸು ಮಾಡಿದಂತೆ ವಿದ್ಯಾರ್ಥಿಯನ್ನು ಏಪ್ರಿಲ್ 4 ರಿಂದ ಅಮಾನತು ಮಾಡಲಾಗಿದೆ. ಇದು ನ್ಯಾಯಾಂಗದ ಗಂಭೀರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ, ಕೃತ್ಯ ಎಸಗಿಸದ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಗುವಾಹಟಿಯ ಐಐಟಿ ಸೋಮವಾರ ಹೇಳಿದೆ.

  ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾದ ಇತರೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಾಲ್ವರನ್ನು ಕ್ಯಾಂಪಸ್​ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಮತ್ತು ಹೆಚ್ಚಿನ ಪೊಲೀಸ್ ತನಿಖೆ ಮತ್ತು ಆಂತರಿಕ ತನಿಖೆಗಾಗಿ ವಿದ್ಯಾರ್ಥಿಗಳನ್ನು ಇಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

  "ಸಂಸ್ಥೆಯ ಒಳಗೆ ಇಂತಹ ಘೋರ ಕೃತ್ಯಗಳನ್ನು ಸಂಸ್ಥೆ ಬಲವಾಗಿ ಖಂಡಿಸುತ್ತದೆ" ಎಂದು ಸಂಸ್ಥೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. "ಕ್ಯಾಂಪಸ್​ನಲ್ಲಿ ಮಹಿಳಾ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಸಂಸ್ಥೆ ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ" ಎಂದು ಹೇಳಿದೆ.

  ಈ ಕೃತ್ಯ ಸಂಸ್ಥೆಯ ಶಿಸ್ತಿನ ನಿಯಮಗಳ ಗಂಭೀರ ಉಲ್ಲಂಘನೆಯಾಗಿದ್ದು, ವಿದ್ಯಾರ್ಥಿಗಳು, ಹಾಸ್ಟೆಲ್ ಬೋರ್ಡರ್‌ಗಳು ಮತ್ತು ಕ್ಯಾಂಪಸ್‌ನ ನಿವಾಸಿಗಳ ಸುರಕ್ಷತೆಗೆ ಧಕ್ಕೆಯುಂಟು ಮಾಡುತ್ತದೆ ಮತ್ತು ಸಂಸ್ಥೆಯ ಪರಿಸರಕ್ಕೆ ಮಾರಕವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ಸಂಸ್ಥೆ ಸುಧಾರಿತ ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಿದೆ” ಎಂದು ಸಂಸ್ಥೆ ತಿಳಿಸಿದೆ.

  ಘಟನೆ ಸಂಬಂಧ ಮಾಧ್ಯಮಗಳು ಅನಧಿಕೃತ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ಗುವಾಹಟಿ ಐಐಟಿ ಆರೋಪಿಸಿದೆ. ಗುವಾಹಟಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಸಂತ್ರಸ್ತ  ವಿದ್ಯಾರ್ಥಿನಿಯನ್ನು ವೈದ್ಯರ ಸಲಹೆ ಅನುಸರಿಸದೆ ಸಂಸ್ಥೆ ಡಿಸ್​ಚಾರ್ಜ್ ಮಾಡಿಸಿದೆ ಎಂದು ಆರೋಪ ಮಾಡಿ ಮಾಧ್ಯಮಗಳು ವರದಿ ಮಾಡಿದ್ದರ ಸಂಬಂಧ ಸಂಸ್ಥೆ ಹೀಗೆ ಪ್ರತಿಕ್ರಿಯೆ ನೀಡಿದೆ.

  ಇದನ್ನು ಓದಿ: ಮಾವೋವಾದಿಗಳ ಸೆರೆಯಾಳಾಗಿದ್ದಾರೆ ಸಿಆರ್​ಪಿಎಫ್ ಕಮಾಂಡೋ; ಸ್ಥಳೀಯ ಪತ್ರಕರ್ತರು ಹೇಳಿದ್ದೇನು?

  ಇದು ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ತುಂಬಾ ಸೂಕ್ಷ್ಮ ಹಾಗೂ ತುಂಬಾ ಸಂಕೀರ್ಣವಾದ ವಿಷಯವಾಗಿದೆ. ನಾವು ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ, ವರದಿ ಮಾಡುವಾಗ ಅಧಿಕೃತ ಮಾಹಿತಿ ಆಧರಿಸಿ ವರದಿ ಮಾಡಿ ಎಂದು ಸಂಸ್ಥೆ ಮನವಿ ಮಾಡಿಕೊಂಡಿದೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಮಾಡುವಾಗ ಆಸ್ಪತ್ರೆಯ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.

  ಮಾರ್ಚ್ 29 ರಂದು ತನ್ನ ಕಾಲೇಜು ಸಹಪಾಠಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಐಐಟಿ ವಿದ್ಯಾರ್ಥಿಯನ್ನು ಶನಿವಾರ ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಗುಜರಾತ್ ನಿವಾಸಿಯಾದ ವಿದ್ಯಾರ್ಥಿನಿ ನೀಡಿರುವ ದೂರಿನಲ್ಲಿ, ಮಾರ್ಚ್ 29 ರಂದು ಗುವಾಹಟಿಯ ಐಐಟಿ-ಹಾಸ್ಟೆಲ್‌ನಲ್ಲಿ ಹೋಳಿ ಆಚರಣೆಯ ಸಂದರ್ಭದಲ್ಲಿ  ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಪಾಠಿ ಕುಡಿಯುವ ಪಾನಿಯದಲ್ಲಿ ಏನನ್ನೊ ಬೆರೆಸಿ ನಂತರ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿರುವುದಾಗಿ ತಿಳಿಸಿದ್ದಾರೆ.
  Published by:HR Ramesh
  First published: