• Home
 • »
 • News
 • »
 • national-international
 • »
 • Prosthetic Leg: ವಿಶಿಷ್ಟವಾದ ಕೃತಕ ಕಾಲುಗಳ ಸಂಶೋಧನೆ ಮಾಡಿದ ಐಐಟಿ ಗುವಾಹಟಿ ಸಂಶೋಧಕರು

Prosthetic Leg: ವಿಶಿಷ್ಟವಾದ ಕೃತಕ ಕಾಲುಗಳ ಸಂಶೋಧನೆ ಮಾಡಿದ ಐಐಟಿ ಗುವಾಹಟಿ ಸಂಶೋಧಕರು

ಪ್ರಾಸ್ಥೆಟಿಕ್ ಕಾಲು

ಪ್ರಾಸ್ಥೆಟಿಕ್ ಕಾಲು

ಕಾಲುಗಳುಳ್ಳವರು ಇದೆಲ್ಲವನ್ನು ಸುಲಭವಾಗಿ ಮಾಡಬಹುದು, ಆದರೆ ಕಾಲುಗಳಿಲ್ಲದೆ ಇರುವವರು ಏನು ಮಾಡಬೇಕು ಎಂಬ ಪ್ರಶ್ನೆ ಇದ್ದೆ ಇರುತ್ತದೆ. ಈಗ ಅವರೂ ಸಹ ನಿಶ್ಚಿಂತೆಯಿಂದ ಯೋಗಾಸನಗಳನ್ನು ಮಾಡಬಹುದು. ಹೌದು, ಐಐಟಿ ಗುವಾಹಟಿಯ ಸಂಶೋಧಕರ ತಂಡವೊಂದು ಈಗ ವಿಶಿಷ್ಟವಾದ ಪ್ರಾಸ್ಥೆಟಿಕ್ ಲೆಗ್ ಅಂದರೆ ಕೃತಕ ಕಾಲುಗಳ ಸಂಶೋಧನೆ ಮಾಡಿದ್ದಾರೆ.

ಮುಂದೆ ಓದಿ ...
 • Share this:

ಸಾಮಾನ್ಯವಾಗಿ ಭಾರತೀಯರು (Indians) ಹಲವಾರು ಭಂಗಿಗಳಲ್ಲಿ ಯೋಗಾಸನಗಳನ್ನು ಮಾಡುತ್ತಾರೆ. ಈ ಯೋಗಾಸನವು ಕಾಲುಗಳನ್ನು (Legs) ಮಡಚಿಕೊಂಡು ಕೂರುವ ಪದ್ಮಾಸನ ಭಂಗಿಯಿಂದ ಹಿಡಿದು ಬೆಂಡ್ ಮಾಡುವ, ಕಾಲುಗಳನ್ನು ಸ್ಟ್ರೆಚ್ (Stretch) ಮಾಡುವವರೆಗೆ ಇತರೆ ಹಲವಾರು ಭಂಗಿಗಳನ್ನು ಹೊಂದಿದೆ. ಕಾಲುಗಳುಳ್ಳವರು ಇದೆಲ್ಲವನ್ನು ಸುಲಭವಾಗಿ ಮಾಡಬಹುದು, ಆದರೆ ಕಾಲುಗಳಿಲ್ಲದೆ ಇರುವವರು ಏನು ಮಾಡಬೇಕು ಎಂಬ ಪ್ರಶ್ನೆ ಇದ್ದೆ ಇರುತ್ತದೆ. ಈಗ ಅವರೂ ಸಹ ನಿಶ್ಚಿಂತೆಯಿಂದ ಯೋಗಾಸನಗಳನ್ನು (Yogasana) ಮಾಡಬಹುದು. ಹೌದು, ಐಐಟಿ ಗುವಾಹಟಿಯ ಸಂಶೋಧಕರ ತಂಡವೊಂದು ಈಗ ವಿಶಿಷ್ಟವಾದ ಪ್ರಾಸ್ಥೆಟಿಕ್ ಲೆಗ್ (Prosthetic leg) ಅಂದರೆ ಕೃತಕ ಕಾಲುಗಳ ಸಂಶೋಧನೆ ಮಾಡಿದ್ದಾರೆ.


ಅದನ್ನು ಬಳಸುವ ಮೂಲಕ ಡೀಪ್ ಸ್ಕ್ವಾಟಿಂಗ್ ಹಾಗೂ ಇತರೆ ಯೋಗಾಸನ ಭಂಗಿಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಹೊಸ ಕೃತಕ ಕಾಲುಗಳು ಭಾರತೀಯ ಜನರ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿ ಸಂಶೋಧಿಸಲಾಗಿದ್ದು ಅವರಿಗೆ ಹೆಚ್ಚಿನ ನೆರವು ಸಿಗುತ್ತದೆ ಎಂದು ಹೇಳಲಾಗಿದೆ. ವಿವಿಧ ವಯೋಮಾನದ ವರ್ಗಕ್ಕೆ ಸಂಬಂಧಿಸಿದಂತೆ ಇದು ಹೊಂದಿಸಿಕೊಳ್ಳಬಹುದಾದ ಸಾಮರ್ಥ್ಯ ಹೊಂದಿದೆ ಎಂದೂ ಸಹ ಸಂಶೋಧಕರ ತಂಡ ತಿಳಿಸಿದೆ.


ಕೇಂದ್ರ ಶಿಕ್ಷಣ ಮಂತ್ರಾಲಯ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಹೊಸ ಸಂಶೋಧನೆ
ಕೇಂದ್ರ ಶಿಕ್ಷಣ ಮಂತ್ರಾಲಯ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಈ ಸಂಶೋಧನೆಗೆ ಧನಸಹಾಯ ಒದಗಿಸಿದ್ದು ಈ ಅಧ್ಯಯನದಲ್ಲಿ ಒಟ್ಟು ಸಂಶೋಧಕರು 151 ಆರ್ಮಿ ಬೇಸ್ ಆಸ್ಪತ್ರೆಗಳೊಂದಿಗೆ ಕೈಜೋಡಿಸಿದ್ದರು. ಭಾರತದಲ್ಲಿ ಪ್ರಾಸ್ಥೆಸಿಸ್ ಅಭಿವೃದ್ಧಿ ಎಂಬುದು ಇದೆಯಾದರೂ ಅದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂದು ಅಂಗವಿಕಲರಿಗೆ ಹೆಚ್ಚು ಕ್ರಿಯಾತ್ಮಕ ಚಲನಶೀಲತೆಗೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧನಗಳ ಅಗತ್ಯವಿದೆ, ಈ ಕ್ಷೇತ್ರ ಇನ್ನಷ್ಟು ಸುಧಾರಿಸಬೇಕಿದೆ.


ಪ್ರಸ್ತುತ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟುಕುವ ಪ್ರಾಸ್ತೆಟಿಕ್ಸ್ ಗಳು ಅನೇಕ ಕ್ರಿಯಾತ್ಮಕ ಮಿತಿಗಳನ್ನು ಹೊಂದಿದೆ. ಅಂದರೆ, ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ, ಕ್ರಿಯಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಅದರಲ್ಲೂ ಭಾರತೀಯ ಜೀವನಶೈಲಿ ಮತ್ತು ಅಸಮವಾದ ಭೂಪ್ರದೇಶಗಳನ್ನು ಪರಿಗಣಿಸಿದರೆ ಭಾರತಕ್ಕೆ ವಿಶಿಷ್ಟವಾದ ವಿಶೇಷಣಗಳೊಂದಿಗೆ ಪ್ರಾಸ್ಥೆಟಿಕ್ಸ್ ಅಗತ್ಯವಿದೆ ಹಾಗೂ ಅಂತಹ ವೈಶಿಷ್ಟ್ಯಗಳುಳ್ಳ ಪ್ರಾಸ್ಥೆಟಿಕ್ ಕಾಲುಗಳು ಎಲ್ಲೆಡೆ ವ್ಯಾಪಕವಾಗಿ ಲಭ್ಯವಿಲ್ಲ.


ಈ ಸಂಶೋಧನೆಯ ಪ್ರಮುಖ ಅಂಶಗಳು
ಐಐಟಿ ಗುವಾಹಟಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಎಸ್.ಕನಗರಾಜ್ ನೇತೃತ್ವದ ತಂಡವು ಈ ಸಮಸ್ಯೆಗಳನ್ನು ನಿಭಾಯಿಸಲು ಈಗ ಸಿದ್ಧವಾಗಿದೆ. ಈ ಸಂಶೋಧನಾ ತಂಡವು ಅಭಿವೃದ್ಧಿಪಡಿಸಿದ ಅವರ ಮಾದರಿಗಳ ಮೂಲ ಮಾದರಿಗಳು ಪ್ರಸ್ತುತ ಪ್ರಯೋಗಗಳಲ್ಲಿವೆ. ತಮ್ಮ ಸಂಶೋಧನೆಯ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತಾ, ಪ್ರೊ.ಎಸ್.ಕನಗರಾಜ್, “ನಮ್ಮ ತಂಡವು ಅಭಿವೃದ್ಧಿಪಡಿಸಿದ ಮೊಣಕಾಲು ಕೀಲು ಸ್ಪ್ರಿಂಗ್ ಸಾಧನವು ಅಸಿಸ್ಟ್ ಮಾಡುವ ಡೀಪ್ ಸ್ಕ್ವಾಟ್ ಕಾರ್ಯವಿಧಾನವನ್ನು ಹೊಂದಿದೆ. ಇದರಿಂದ ಕಾಲುಗಳನ್ನು ಅದರಲ್ಲೂ ಮೊಣಕಾಲುಗಳನ್ನು ಪರಿಣಾಮಕಾರಿಯಾಗಿ ಮಡಚಬಹುದಾಗಿದ್ದು ಇದು ಭಾರತೀಯ ಶೈಲಿಯ ಶೌಚಾಲಯ ವ್ಯವಸ್ಥೆಯನ್ನು ಹೆಚ್ಚು ಆರಾಮದಾಯಕವಾಗಿ ಬಳಸಲು ಸಹಾಯ ಮಾಡುತ್ತದೆ.


ಇದರಲ್ಲಿರುವ ಮೊಣಕಾಲು ತಿರುಗುವ ಕಾರ್ಯವಿಧಾನವು ಅಡ್ಡ ಕಾಲಿನಲ್ಲಿ ಕುಳಿತುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಅಪರಿಚಿತ ಭೂಪ್ರದೇಶದಲ್ಲಿ ನಡೆಯುವಾಗ ರೋಗಿಗಳು ಬೀಳುವ ಭಯವನ್ನು ಕಡಿಮೆ ಮಾಡಲು ಇದರಲ್ಲಿ ಅಳವಡಿಸಲಾಗಿರುವ ಲಾಕಿಂಗ್ ಕಾರ್ಯವಿಧಾನವು ಸಹಾಯ ಮಾಡುತ್ತದೆ. ಮೊಣಕಾಲಿನ ಹೊಂದಾಣಿಕೆಯ ಲಿಂಕ್ ಉದ್ದವು ರೋಗಿಗಳ ವಯಸ್ಸು ಮತ್ತು ಅವಶ್ಯಕತೆಗೆ ಅನುಗುಣವಾಗಿ ಹೆಚ್ಚು ಸ್ಥಿರತೆ ಅಥವಾ ಸುಲಭವಾದ ಬಾಗುವಿಕೆಯನ್ನು ಹೊಂದಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಈ ಸಾಧನವನ್ನು ಭಾರತೀಯ ಜೀವನ ಶೈಲಿಗೆ ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ" ಎಂದು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.


ಸಂಶೋಧಕರು ಈ ಅಧ್ಯಯನದಲ್ಲಿ ಈ ಕೆಳಗಿನ ಅಗತ್ಯಗಳನ್ನು ಮೊದಲು ಗುರುತಿಸಿ ಅದಕ್ಕಾಗಿ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾದರೆ ಅವರು ಗುರುತಿಸಿರುವ ಅಗತ್ಯಗಳು ಹಾಗೂ ಅದಕ್ಕೆ ಸಿದ್ಧಪಡಿಸಿದ ಪರಿಹಾರ ಸೂತ್ರಗಳು ಏನು ಎಂಬುದನ್ನು ಈಗ ತಿಳಿಯೋಣ.


 • ಅಗತ್ಯ 1
  ಪಾಶ್ಚಿಮಾತ್ಯ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾದ ಈ ರೀತಿಯ ಮಾರುಕಟ್ಟೆ ಉತ್ಪನ್ನಗಳು ಭಾರತೀಯ ಚಲನವಲನದ ಅಗತ್ಯಗಳ ಬಗ್ಗೆ ಕಾಳಜಿ ಹೊಂದಿರುವುದಿಲ್ಲ, ಉದಾಹರಣೆಗೆ ಅಡ್ಡ-ಕಾಲು ಹಾಕಿ ಕುಳಿತುಕೊಳ್ಳುವುದು, ಭಾರತೀಯ ಶೌಚಾಲಯದ ಬಳಕೆಗಾಗಿ ಮೊಣಕಾಲು ಮಡಚಿ ಕುಳಿತುಕೊಳ್ಳುವುದು ಮತ್ತು ಕೆಲವು ಯೋಗ ಹಾಗೂ ವ್ಯಾಯಾಮದ ಭಂಗಿಗಳು.


ಪರಿಹಾರ
ಸುಧಾರಿತ ಮೊಣಕಾಲು ತಿರುಗುವಿಕೆಯ ಕಾರ್ಯವಿಧಾನದ ಮೂಲಕ ಅಡ್ಡ-ಕಾಲಿನ ಮೇಲೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ - ಸಾಂಪ್ರದಾಯಿಕ ಪ್ರಾಸ್ಥೆಟಿಕ್ ಮೊಣಕಾಲುಗಳ ವ್ಯಾಪ್ತಿಯಲ್ಲಿ ದೊಡ್ಡ ಸುಧಾರಣೆಯನ್ನು ಅನುಮತಿಸುತ್ತದೆ. ಡೀಪ್ ಸ್ಕ್ವಾಟ್ ಯಾಂತ್ರಿಕತೆಯು ನಿಂತಿರುವಾಗ ಚಲನೆಯ ಬಂಧನವನ್ನು ತಡೆಯಲು ಮತ್ತು ಚಯಾಪಚಯ ಶಕ್ತಿಯ ಸಮರ್ಪಕವಾಗಿಸಲು ಇದು ಸಹಾಯ ಮಾಡುತ್ತದೆ.


ಇದನ್ನೂ ಓದಿ: Explained: ಆಲ್ಬಿನಿಸಂ ಜಾಗೃತಿ ದಿನ-2022: ಈ ಸಮಸ್ಯೆಯಿಂದ ಬಳಲುತ್ತಿರುವವರ ವಿರುದ್ಧ ತಾರತಮ್ಯ ಬೇಡ, ಆತ್ಮಸ್ಥೈರ್ಯ ಇರಲಿ


 • ಅಗತ್ಯ 2
  ಪ್ರೋಸ್ಥೆಟಿಕ್ ಕಾಲುಗಳನ್ನು ಬಳಸುವವರಿಗೆ ಬಹಳಷ್ಟು ಹಂತಗಳಲ್ಲಿ ಸ್ಥಿರತೆಯ ಅಗತ್ಯವಿರುತ್ತದೆ. ಅಂಗವಿಕಲರ ಆರಂಭಿಕ ತರಬೇತಿಯ ಸಮಯದಲ್ಲಿ, ಸುರಕ್ಷತೆಯ ಕಾಳಜಿಗಾಗಿ ಮತ್ತು ಬೀಳುವ ಭಯವನ್ನು ಪರಿಹರಿಸಲು ಇದು ಅಗತ್ಯವಾಗಿರುತ್ತದೆ. ಅಲ್ಲದೆ, ಅಸಮವಾದ ಭೂಪ್ರದೇಶ, ಮೆಟ್ಟಿಲುಗಳ ಮೇಲೆ ನಡೆಯುವುದು ಕಷ್ಟಕರವಾಗಿರುತ್ತದೆ.


ಪರಿಹಾರ
ಇದರಲ್ಲಿ ಮೊಣಕಾಲು-ಲಾಕಿಂಗ್ ಕಾರ್ಯವಿಧಾನವನ್ನು ಒದಗಿಸಲಾಗಿದೆ, ಇದು ಮೇಲೆ ತಿಳಿಸಿದಂತೆ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಇದರ ಬಳಕೆದಾರರನ್ನು ಸಜ್ಜು ಮಾಡುತ್ತದೆ. ಹೆಚ್ಚಿನ ಸ್ಥಿರತೆ ನೀಡುತ್ತದೆ.

 • ಅಗತ್ಯ 3
  ಪ್ರೋಸ್ಥೆಸಿಸ್ ಕಾಲಿನ ಅವಶ್ಯಕತೆಗಳು ರೋಗಿಯ ಕಾಲಿನ ಉಳಿದಿರುವ ಉದ್ದದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚುವರಿಯಾಗಿ, ಇದು ರೋಗಿಯ ವಯಸ್ಸನ್ನು ಸಹ ಅವಲಂಬಿಸಿದ್ದು ವಯಸ್ಸಾದವರು ಬೀಳುವ ಹೆಚ್ಚಿನ ಅಪಾಯ ಎದುರಿಸುವುದರಿಂದ ಅವರಿಗೆ ಹೆಚ್ಚಿನ ಸ್ಥಿರತೆಯ ಅಗತ್ಯವಿರುತ್ತದೆ.


ಪರಿಹಾರ
ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಗ್ರಾಹಕೀಕರಣಕ್ಕಾಗಿ ಉದ್ದವಾದ ಲಿಂಕ್ ಹೊಂದಾಣಿಕೆ ಮತ್ತು ಪ್ರೋಸ್ಥೆಸಿಸ್ ಜೋಡಣೆ ಹೊಂದಾಣಿಕೆಯ ಕಾರ್ಯವಿಧಾನವನ್ನು ಈ ಸಾಧನದಲ್ಲಿ ಒದಗಿಸಲಾಗಿದೆ.

 • ಅಗತ್ಯ 4
  ಕಷ್ಟಕರವಾದ ಭೂಪ್ರದೇಶವು ಸಾಂಪ್ರದಾಯಿಕ ಪಾದದ ಕೀಲುಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಜೊತೆಗೆ, ದೈಹಿಕ ಚಟುವಟಿಕೆಯ ಸಮಯದಲ್ಲಿ, ಬೀಳುವ ಅಪಾಯವನ್ನು ತಡೆಗಟ್ಟಲು ಕ್ರಿಯಾತ್ಮಕ ಸಮತೋಲನದ ಅಗತ್ಯವಿರುತ್ತದೆ.


ಇದನ್ನೂ ಓದಿ: Explained: ಪೋಷಕರ ಜೀನ್‌ಗಳು ಮಕ್ಕಳ ನಡವಳಿಕೆಯನ್ನು ರೂಪಿಸುತ್ತವೆಯಂತೆ; ಅದು ಹೇಗೆ ಗೊತ್ತಾ?


ಪರಿಹಾರ
ಇದು ಗಟ್ಟಿಯಾದ ಮೇಲ್ಮೈಗಳನ್ನು ಹೊಂದಿದ್ದು ಇದರ ಮೇಲೆ ಪ್ರಭಾವದ ಹೊರೆ ಕಡಿಮೆ ಬೀಳುತ್ತದೆ, ಇದರಲ್ಲಿ ಟೋ-ಆಫ್ ಮಾಡುವ ಬಲವನ್ನು ಗರಿಷ್ಠಗೊಳಿಸಲಾಗಿದೆ ಮತ್ತು ಕಷ್ಟಕರವಾದ ಭೂಪ್ರದೇಶದಲ್ಲಿ ನಡೆಯುವಾಗ ಇದು ಸಮತೋಲನವನ್ನು ಖಾತ್ರಿಪಡಿಸುತ್ತದೆ.

Published by:Ashwini Prabhu
First published: