ವಿಶ್ವದಲ್ಲೇ ಭಾರತದ ಬೆಸ್ಟ್​ ವಿವಿ ಸ್ಥಾನ ಪಡೆದ Bangalore IISc; ಪ್ರಧಾನಿ ಅಭಿನಂದನೆ

ಕ್ಯೂ ಎಸ್​ ವಿಶ್ವದ ಅಗ್ರ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 200 ವಿವಿಗಳು ಸ್ಥಾನ ಪಡೆದಿವೆ. ಭಾರತದ ಐಐಟಿ ಗೌವಹಟಿ, ಐಐಟಿ ರೋರ್ಕಿ ಕೂಡ ಸ್ಥಾನ ಪಡೆದಿದೆ.

ಬೆಂಗಳೂರು ಐಐಎಸ್ಸಿ

ಬೆಂಗಳೂರು ಐಐಎಸ್ಸಿ

 • Share this:
  ವಿಶ್ವದಲ್ಲಿಯೇ ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೆನ್ಸ್​ (ಐಐಎಸ್​ಸಿ) ಸ್ಥಾನ ಪಡೆಯುವ ಮೂಲಕ ಸಿಲಿಕಾನ್​ ಸಿಟಿಗೆ ಮತ್ತೊಂದು ಗರಿಮೆ ಮೂಡಿದೆ. ಬೆಂಗಳೂರು ಐಐಎಸ್ಸಿ ಉತ್ತಮ ಬೋಧಕರ ವರ್ಗ ಹೊಂದಿರುವ ಹಿನ್ನಲೆಯಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದಿದೆ. ಇದರ ಜೊತೆಗೆ ಭಾರತದ ಮತ್ತೆರಡು ವಿವಿಗಳಾದ ದೆಹಲಿಯ ಐಐಟಿ ಮತ್ತು ಬಾಂಬೆ ಐಐಟಿ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ. ವಿಶ್ವದಲ್ಲಿಯೇ ಅಗ್ರ ಸ್ಥಾನಗಳಿಸಿದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಕೂಡ ಇದಕ್ಕೆ ಅಭಿನಂದನೆ ತಿಳಿಸಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರಧಾನಿ, ಭಾರತದ ಹೆಚ್ಚಿನ ವಿಶ್ವ ವಿದ್ಯಾಲಯಗಳು ಜಾಗತಿಕ ಶ್ರೇಷ್ಠತೆಗಳಿಸಿಕೊಳ್ಳುತ್ತಿವೆ. ಯುವಕರಲ್ಲಿ ಬೌದ್ಧಿಕ ಪರಾಕ್ರಮವನ್ನು ಬೆಂಬಲಿಸಲಾಗುತ್ತಿದೆ ಎಂದು ಅವರು ಅಭಿನಂದನೆ ಸಲ್ಲಿಸಿದ್ದಾರೆ.

  ವಿಶ್ವದ ಉನ್ನತ ವಿಶ್ವವಿದ್ಯಾಲಯಗಳಾದ ಪ್ರಿನ್ಸ್ಟನ್​, ಹಾವರ್ಡ್​ ಮತ್ತು ಮ್ಯಾಸಚೂಸೆಟ್ಸ್​​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯನ್ನು ಮೆಟ್ರಿಕ್​ನಲ್ಲಿ ಹಿಂದಿಕ್ಕಿ ಬೆಂಗಳೂರು ಐಐಎಸ್ಸಿ ಅಗ್ರ ಸ್ಥಾನ ಪಡೆದಿದೆ.  ಕ್ಯೂ ಎಸ್​ ವಿಶ್ವದ ಅಗ್ರ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 200 ವಿವಿಗಳು ಸ್ಥಾನ ಪಡೆದಿವೆ. ಭಾರತದ ಐಐಟಿ ಗೌವಹಟಿ, ಐಐಟಿ ರೋರ್ಕಿ ಕೂಡ ಸ್ಥಾನ ಪಡೆದಿದೆ.

  ಲಂಡನ್​ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್​ (ಕ್ಯೂಎಸ್​) ನಡೆಸಿದ ವಿಶ್ಲೇಷಣೆಯಲ್ಲಿ ಬೆಂಗಳೂರಿನ ಐಐಎಸ್ಸಿ ಬೋಧಕ ವರ್ಗದ ಮೆಟ್ರಿಕ್​ ವಿಶ್ಲೇಷಣೆಯಲ್ಲಿ 100ಕ್ಕೆ 100 ಅಂಕ ಗಳಿಸಿದೆ.

  ಐಐಟಿ ದೆಹಲಿ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಶ್ರೇಯಾಂಕಕ್ಕೆ ಪಾತ್ರವಾಗಿದ್ದು, ಇದು 193 ನೇ ಸ್ಥಾನದಿಂದ 185ನೇ ಸ್ಥಾನಕ್ಕೆ ಏರಿದೆ. ಐಐಎಸ್ಸಿಯನ್ನು ಹಿಂದಿಕ್ಕಿ ದೆಹಲಿ ಐಐಟಿ 186 ನೇ ಸ್ಥಾನ ಪಡೆದಿದೆ.

  ಇದನ್ನು ಓದಿ: ಎರಡೇ ವರ್ಷದಲ್ಲಿ ಟಿಎಂಸಿ ಸ್ಟಾರ್​​ ಸಂಸದೆ ಮದುವೆಯಲ್ಲಿ ಬಿರುಕು; ಅಸಲಿ ಕಾರಣವೇನು?

  ಐಐಟಿ ಹೈದ್ರಾಬಾದ್​ 591-600ರ ಸ್ಥಾನ ಪಡೆದಿದ್ದು. ಇದೇ ಮೊದಲ ಬಾರಿ 600ಒಳಗೆ ಸ್ಥಾನ ಪಡೆದಿದೆ, ಇದೇ ಮೊದಲ ಬಾರಿ ದೆಹಲಿಯ ಜವಹರ್ ​ಲಾಲ್​ ನೆಹರು ವಿಶ್ವವಿದ್ಯಾಲಯ (ಜೆಎನ್​ಯು) ಕ್ಯೂಎಸ್​ ವರ್ಲ್ಡ್​​ ಯೂನಿವರ್ಸಿಟಿಯಲ್ಲಿ ಸ್ಥಾನ ಪಡೆದಿದೆ, ಜೆಎನ್​ಯು 561-570 ಬ್ಯಾಂಡ್​ನಲ್ಲಿ ಸ್ಥಾನ ಪಡೆದಿದೆ.

  ಕ್ಯೂಸ್​ ವರ್ಲ್ಡ್​ ಯೂನಿವರ್ಸಿಟಿ ಜಗತ್ತಿನ ಯಾವುದೇ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳನ್ನು ಆರು ಸೂಚಕಗಳ ಮೇಲೆ ನಿರ್ಧರಿಸುತ್ತದೆ. ಅವುಗಳೆಂದರೆ ಶೈಕ್ಷಣಿಕ ಖ್ಯಾತಿ, ಉದ್ಯೋಗದಾತರ ಖ್ಯಾತಿ. ಪ್ರತಿ ಬೋಧಕ ವರ್ಗಗಳ ಉಲ್ಲೇಖ ಹಾಗೂ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ಅನುಪಾತ, ಅಂತರಾಷ್ಟ್ರೀಯ ಅಧ್ಯಾಪಕರ ಅನುಪಾತ ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಿ ಅನುಪಾತ  ಆಧಾರದ ಮೇಲೆ ನಿರ್ಧರಿಸಲಾಗಿದೆ.

  ವಿಶ್ವದ ಟಾಪ್​ 3 ಸ್ಥಾನ
  ಮ್ಯಾಸಚೂಸೆಟ್ಸ್​​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ
  ಯುನಿವರ್ಸಿಟಿ ಆಫ್​ ಆಕ್ಸಫರ್ಡ್​
  ಕೆಂಬ್ರಿಡ್ಜ್​​ ವಿವಿ/ ಸ್ಟ್ಯಾನ್​ಫೋರ್ಡ್​ ವಿವಿ

  ಭಾರತದ ಟಾಪ್​ 3 ವಿವಿ
  ಐಐಟಿ ಬಾಂಬೆ (177)
  ಐಐಟಿ ದೆಹಲಿ (185)
  ಐಐಎಸ್ಸಿ ಬೆಂಗಳೂರು (186)

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: