Top 10 Richest Indian 2021​: ಬಾಲ್ಯದಲ್ಲಿ ಮನೆಯಲ್ಲಿ ಕರೆಂಟ್​ ಕೂಡ ಇರಲಿಲ್ಲ, ಇಂದು ದಿನವೊಂದಕ್ಕೆ ಗಳಿಸ್ತಾರೆ 153 ಕೋಟಿ ಈ ಉದ್ಯಮಿ

Meet Richest Indian Businessman Jay Chaudhry: ಇತ್ತೀಚೆಗೆ ಹೊರಬಂದ IIFL Wealth Hurun India Rich list 2021 ಪಟ್ಟಿಯಲ್ಲಿ ಜೈ ಚೌಧರಿ 10 ನೇ ಸ್ಥಾನಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರದಿಯ ಪ್ರಕಾರ ಒಂದು ದಿನಕ್ಕೆ ಚೌಧರಿ ಆದಾಯ 153 ಕೋಟಿ

Richest Indian Jay Chaudhry

Richest Indian Jay Chaudhry

 • Share this:
  Jay Chaudhry Success Story: ಆತ ಹಿಮಾಚಲ ಪ್ರದೇಶ ರಾಜ್ಯದ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಬಾಲಕ. ಹುಟ್ಟಿದ್ದು ಚಿಕ್ಕ ಹಳ್ಳಿಯಲ್ಲಾದರೂ ಮಹತ್ವಾಕಾಂಕ್ಷಿ. ಪುಟ್ಟ ಕನಸುಗಳನ್ನು ಕಾಣುವುದಕ್ಕಿಂತ ಕನಸು ಕಾಣದೇ ಇರುವುದೇ ಮೇಲು ಎಂಬಂತೆ, ದೊಡ್ಡ ಕನಸುಗಳ ಬೆನ್ನೇರಿ ಹಿಮಾಚಲ ಪ್ರದೇಶದ ಐಐಟಿ (Indian Institute of Technology Himachal Pradesh) ಸೇರಿದ್ದರು. ಐಐಟಿಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ಬಳಿಕ ತಮ್ಮ ಕನಸಿನ ಕೂಸಿ ಕುಲಾವಿ ತೊಡಿಸ ಹೊರಟರು. ಅಂದು ಆರಂಭವಾಗಿದ್ದ ಕನಸಿನ ಸವಾರಿ ಇಂದು ದಿನವೊಂದಕ್ಕೆ ಬರೋಬ್ಬರಿ ರೂ. 153 ಕೋಟಿ ಗಳಿಸುವ ಮಟ್ಟಕ್ಕೇರಿಸಿದೆ ಅಂದರೆ ಯಾರಿಗಾದರೂ ಸೋಜಿಗ ಅನಿಸಬಹುದು. ದಿನವೊಂದಕ್ಕೆ 150 ಕೋಟಿಗೂ ಅಧಿಕ ಲಾಭ ಗಳಿಸುವ ಉದ್ಯಮಿ ಬೇರಾರೂ ಅಲ್ಲ, ಜೈ ಚೌಧರಿ. 62 ವರ್ಷದ ಜೈ ಚೌಧರಿ 2007ರಲ್ಲಿ ಝಿಸ್ಕೇಲರ್​ ಸೈಬರ್​ ಸೆಕ್ಯುರಿಟಿ ಸಂಸ್ಥೆಯನ್ನು ಆರಂಭಿಸಿದರು (Jay Chadhry started Zscale Cyber Security firm in 2007). ಅಂದು ಆರಂಭಿಸಿದ ಈ ಸಂಸ್ಥೆ ಈಗ ಬರೋಬ್ಬರಿ 2,81,000 ಕೋಟಿ ರೂಪಾಯಿಯ ವ್ಯವಹಾರವನ್ನು ಹೊಂದಿದೆ. ಅದರಲ್ಲಿ 44 ಪರ್ಸೆಂಟ್​ ಶೇರು ಹೊಂದಿರುವ ಜೈ ಚೌಧರಿ 1,21,600 ಕೋಟಿ ರೂ ಒಡೆಯರಾಗಿದ್ದಾರೆ.

  ಇತ್ತೀಚೆಗೆ ಹೊರಬಂದ IIFL Wealth Hurun India Rich list 2021 ಪಟ್ಟಿಯಲ್ಲಿ ಜೈ ಚೌಧರಿ 10 ನೇ ಸ್ಥಾನಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರದಿಯ ಪ್ರಕಾರ ಒಂದು ದಿನಕ್ಕೆ ಚೌಧರಿ ಆದಾಯ 153 ಕೋಟಿ. ತಂತ್ರಜ್ಞಾನ ಬೆಳೆದಂತೆ ಎಲ್ಲಾ ಕಾರ್ಪೊರೇಟ್​ ಸಂಸ್ಥೆಗಳು, ಬ್ಯಾಂಕಿಂಗ್​ ವ್ಯವಸ್ಥೆ ಅಂತರ್ಜಾಲದ ಮೇಲೆ ಅವಲಂಬಿತವಾಗಿದೆ. ಇದೇ ಜೈ ಚೌಧರಿ ಅವರ ಯಶಸ್ಸಿಗೆ ಕಾರಣವೂ ಆಗಿದೆ.

  ಸೈಬರ್​ ಸೆಕ್ಯುರಿಟಿಯಿಂದ ಕೋಟಿ ಕೋಟಿ (Earns crores together from cyber security solutions to corporate companies):
  ಸೈಬರ್​ ಸೆಕ್ಯುರಿಟಿ ಸಂಸ್ಥೆಯನ್ನು ಚೌಧರಿ ಆರಂಭಿಸಿದ ನಂತರ ಭಾರತದಲ್ಲಿ ಡಿಜಿಟಲ್​ ಕ್ಷಿಪ್ರ ಕ್ರಾಂತಿಯಾಯಿತು. ಅದರಲ್ಲೂ ಕಡೆಯ 7-8 ವರ್ಷಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಂತರ್ಜಾಲದ ಅವಲಂಬನೆಯಾಯಿತು. ಇದರ ಜೊತೆಜೊತೆಗೇ ದೊಡ್ಡ ದೊಡ್ಡ ಸಂಸ್ಥೆಗಳ ಜಾಲತಾಣಗಳನ್ನು, ಡೇಟಾವನ್ನು ಹ್ಯಾಕ್​ ಮಾಡಿ ಹಣಕ್ಕಾಗಿ ಬೇಡಿಕೆಯಿಡುವ ದೊಡ್ಡ ಹ್ಯಾಕಿಂಗ್​ ತಂಡಗಳು ಡೀಬ್​ವೆಬ್​ ಮತ್ತು ಡಾರ್ಕ್​ ವೆಬ್​ನಲ್ಲಿ ಹುಟ್ಟಿಕೊಂಡಿತು. ಇದೇ ಕಾರಣಕ್ಕೆ ಚೌಧರಿ ಅವರ ಸಂಸ್ಥೆಯ ಮೇಲಿನ ಅವಲಂಬನೆ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಅನಿವಾರ್ಯವಾಯಿತು. ಭಾರತ ಸೇರಿದಂತೆ ಹಲವು ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳ ಸೈಬರ್​ ಸೆಕ್ಯುರಿಟಿ ಮತ್ತು ರಿಸ್ಕ್​ ಮ್ಯಾನೇಜ್​ಮೆಂಟ್​ ಮಾಡುತ್ತಿರುವುದು ಇದೇ ಝಿಸ್ಕೇಲ್​ ಸಂಸ್ಥೆ. ಸೈಬರ್​ ಥ್ರೆಟ್​ನಿಂದ ಬರುವ 85 ಪ್ರತಿಶತ ಲಾಭ ಇವರ ಸಂಸ್ಥೆಗೇ ಹೋಗುತ್ತದೆ ಎಂದು ಅಂದಾಜಿಸಲಾಗಿದೆ. ದೊಡ್ಡ ಸಂಸ್ಥೆಗಳ ಗೌಪ್ಯತೆ, ಸೆಕ್ಯುರಿಟಿಯನ್ನು ನೋಡಿಕೊಳ್ಳುವ ಮೂಲಕ, ದೊಡ್ಡ ಮೊತ್ತವನ್ನು ಈ ಸಂಸ್ಥೆ ಗಳಿಸುತ್ತಿದೆ.

  ಇದನ್ನೂ ಓದಿ: ಕ್ರಿಕೆಟ್​ನಿಂದ ರಾಜಕೀಯದವರೆಗೆ, ಸಿಕ್ಸರ್​ ಸಿದ್ದು ಯೂಟರ್ನ್​ ಹೊಡೆಯುವುದರಲ್ಲಿ ಮಾಸ್ಟರ್​

  ಯಶಸ್ಸಿಗೆ ಅವರ ಕೆಲಸವೇ ಕಾರಣ:
  ಇನ್ನೂ, ಚೌಧರಿ ಅವರ ಯಶಸ್ಸಿಗೆ ಇನ್ಯಾರೂ ಕಾರಣರಲ್ಲ. ಅವರೊಬ್ಬರು ಸೆಲ್ಫ್​ ಮೇಡ್​ ಬಿಲಿಯನೇರ್​. ಹಿಮಾಚಲ ಪ್ರದೇಶದ ಪನೋಹ್​ ಎಂಬ ಹಳ್ಳಿಯಲ್ಲಿ ಹುಟ್ಟಿದ ಚೌಧರಿ ಅವರ ಆರಂಭಿಕ ದಿನಗಳು ಕಷ್ಟದಿಂದ ಕೂಡಿತ್ತು. ಮುಳ್ಳಿನ ಹಾದಿಯಲ್ಲೇ ನಡೆದು ಬಂದು ಯಶಸ್ಸನ್ನು ಗಿಟ್ಟಿಸಿಕೊಂಡವರು ಚೌಧರಿ. ಅವರ ಮನೆಯಲ್ಲಿ ಸರಿಯಾದ ನೀರಿನ ಸಂಪರ್ಕವಾಗಲೀ, ವಿದ್ಯುತ್​ ಸಂಪರ್ಕವಾಗಲಿ ಇರಲಿಲ್ಲ. ಹೆಜ್ಜೆಹೆಜ್ಜೆಗೂ ಬಡತನ ಕಾಡುತ್ತಿತ್ತು. ಇಷ್ಟು ಕಷ್ಟದ ಹಾದಿ ಸವೆಸಿ ಅವರು ಗಳಿಸಿರುವ ಯಶಸ್ಸು ಎಲ್ಲರಿಗೂ ಮಾದರಿ.

  ಇದನ್ನೂ ಓದಿ: ಒಂದು ಕಾಟಿ ರೋಲ್​ ತಿಂದರೆ 20 ಸಾವಿರ ಕೊಡ್ತಾರಂತೆ: ಅಂತದ್ದೇನಿದೆ ಈ ರೋಲ್​ನಲ್ಲಿ?

  ಕೊರೋನಾವೈರಸ್​ ಚೌಧರಿ ಪಾಲಿಗೆ ಲಾಭದ ಲಾಂಛನ:
  ಇಡೀ ಪ್ರಪಂಚ ಕೊರೋನಾವೈರಸ್​ ಮಾರಕ ರೋಗದಿಂದ ತತ್ತರಿಸಿ ಹೋಗಿದ್ದರೆ, ಈ ಸಮಯದಲ್ಲಿ ಲಾಭ ಗಳಿಸಿದವರು ಕೆಲವೇ ಕೆಲವು ಉದ್ಯಮಿಗಳು. ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದ ಪ್ರಪಂಚಾದ್ಯಂತ ಹೊಸ ಶಖೆ ಆರಂಭವಾಯಿತು. ವರ್ಕ್​ ಫ್ರಂ ಹೋಮ್​ ಎಂಬ ಹೊಸ ಕಾನ್ಸೆಪ್ಟ್​ ಹುಟ್ಟಿಕೊಂಡಿತು. ಇದರಿಂದ ಎಲ್ಲಾ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕಚೇರಿ ಕಾರ್ಯ ಆರಂಭಿಸಿದರು. ಇದರಿಂದ ಸೈಬರ್​ ಸಮಸ್ಯೆಗಳೂ ಹೆಚ್ಚಾದವು. ಸಾಮಾನ್ಯವಾಗಿ ಕಚೇರಿಯಲ್ಲಿ ಸೈಬರ್​ ಸೆಕ್ಯುರಿಟಿ ಫೈರ್​ವಾಲ್​ ಇರುವಷ್ಟು ಬಲಶಾಲಿ ಫೈರ್​ವಾಲ್​ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಒದಗಿಸಲು ಸಾಧ್ಯವಿಲ್ಲ. ವೈಫೈ ರೂಟರ್​ಗಳು, ಮತ್ತಿತರ ಇಂಟರ್​ನೆಟ್​ ಸಾಧನಗಳ ಮೂಲಕ ಹ್ಯಾಕ್​ ಮಾಡುವುದು ಸುಲಭ. ಈ ಕಾರಣಕ್ಕಾಗಿಯೇ ಸೈಬರ್​ ಸೆಕ್ಯುರಿಟಿ ಮೇಲೆ ಸಂಸ್ಥೆಗಳು ಕೋಟಿ ಕೋಟಿ ರೂಪಾಯಿ ವ್ಯಯಿಸಲು ಆರಂಭಿಸಿದರು. ಚೌಧರಿ ಅವರು ಕಾಯುತ್ತಿದ್ದ ಸೈಬರ್​ ಸೆಕ್ಯುರಿಟಿ ಭೂಮ್​ ಆಗಲೇ ಬಂದಿದ್ದು. ಕಳೆದೆರಡು ವರ್ಷಗಳಲ್ಲಿ ಚೌಧರಿ ಅವರ ಸಂಸ್ಥೆ ಬಹುತೇಕ ಸಂಸ್ಥೆಗಳಿಗೆ ಸೈಬರ್​ ಸೆಕ್ಯುರಿಟಿ ಒದಗಿಸುತ್ತಿದೆ. ಆ ಮೂಲಕ ಲಕ್ಷಾಂತರ ಕೋಟಿ ವ್ಯವಹಾರ ನಡೆಸುತ್ತಿದೆ.
  Published by:Sharath Sharma Kalagaru
  First published: