• Home
 • »
 • News
 • »
 • national-international
 • »
 • Elon Musk: ಟ್ವಿಟರ್ ಸ್ವಾಧೀನ ಪಡಿಸಿಕೊಂಡಿದ್ದೇಕೆ ವಿಶ್ವ ಕುಬೇರ? ಎಲಾನ್ ಮಸ್ಕ್ ಉದ್ದೇಶವೇನು?

Elon Musk: ಟ್ವಿಟರ್ ಸ್ವಾಧೀನ ಪಡಿಸಿಕೊಂಡಿದ್ದೇಕೆ ವಿಶ್ವ ಕುಬೇರ? ಎಲಾನ್ ಮಸ್ಕ್ ಉದ್ದೇಶವೇನು?

ಎಲಾನ್‌ ಮಸ್ಕ್

ಎಲಾನ್‌ ಮಸ್ಕ್

ಕಚೇರಿಗೆ ಮರಳಿರುವ ಉದ್ಯೋಗಿಗಳಿಗೆ ಯಾವುದೇ ನಿಯಮಾವಳಿಗಳನ್ನು ರೂಪಿಸದೇ ಇರುವುದು, ಡೆಡ್‌ಲೈನ್ ತಲುಪಲು ಸಿಬ್ಬಂದಿಗಳು ಹೆಚ್ಚುವರಿಯಾಗಿ ದುಡಿಯುತ್ತಿರುವುದು ಹೀಗೆ ಗೊಂದಲಮಯ ಹಾಗೂ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ.

 • Trending Desk
 • Last Updated :
 • Bangalore [Bangalore], India
 • Share this:

  ಎಲಾನ್ ಮಸ್ಕ್ (Elon Musk) ಟ್ವಿಟರ್ ಅನ್ನು ವಶಪಡಿಸಿಕೊಳ್ಳುವುದರೊಂದಿಗೆ ಸಾಮಾಜಿಕ ತಾಣದಲ್ಲಿ ಹಲವಾರು ಮಾರ್ಪಾಡುಗಳನ್ನು ನಡೆಸಿದ್ದಾರೆ. ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಹಿಡಿದು ಪಾವತಿಸಿದವರಿಗೆ ಅಧಿಕೃತ ಬ್ಲು ಟಿಕ್ ಮಾರ್ಕ್(Blue Tick Mark)  ಅನ್ನು ನೀಡುವುದು, ಕಚೇರಿಗೆ ಮರಳಿರುವ ಉದ್ಯೋಗಿಗಳಿಗೆ ಯಾವುದೇ ನಿಯಮಾವಳಿಗಳನ್ನು ರೂಪಿಸದೇ ಇರುವುದು, ಡೆಡ್‌ಲೈನ್ ತಲುಪಲು ಸಿಬ್ಬಂದಿಗಳು ಹೆಚ್ಚುವರಿಯಾಗಿ ದುಡಿಯುತ್ತಿರುವುದು ಹೀಗೆ ಗೊಂದಲಮಯ ಹಾಗೂ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ.


  ಟ್ವಿಟರ್ ವೇದಿಕೆಯ ಮಾರ್ಪಾಡುಗಳು


  ಮಸ್ಕ್ ಅವರ ಹೊಸ ಮಾರ್ಪಾಡುಗಳು ನಕಲಿ ಖಾತೆಗಳಿಗೆ ಆಹ್ವಾನವನ್ನು ನೀಡುತ್ತಿದ್ದು, ಕೆಲವೊಂದು ಸೆಲೆಬ್ರಿಟಿ ಖಾತೆಗಳನ್ನು ಅನುಸರಿಸಿಕೊಂಡು ಮೋಸದ ಖಾತೆಗಳು ತಾಣದಲ್ಲಿ ಸೃಷ್ಟಿಯಾಗಿವೆ. ಒಂದು ರೀತಿಯಲ್ಲಿ ಟ್ವಿಟರ್ ನಿಂದನೆ ಹಾಗೂ ತಪ್ಪುಮಾಹಿತಿಯ ವೇದಿಕೆಯಾಗಿ ಮಾರ್ಪಟ್ಟಿದೆ.


  ಈ ದುರುಪಯೋಗ ಹಾಗೂ ತಪ್ಪುಮಾಹಿತಿಯು ಶಕ್ತಿಶಾಲಿ ಸರಕಾರಗಳು, ರಾಜಕಾರಣಿಗಳು, ಸಂಸ್ಥೆಗಳು, ಪ್ರಸಿದ್ಧ ವ್ಯಕ್ತಿಗಳ ಖಾತೆಗಳು ಹಾಗೂ ಅವರನ್ನು ನಿಯಂತ್ರಿಸಲು ಲಾಭದ ಉದ್ದೇಶದಿಂದ ಕುಶಲತೆಯ ವಿಧಾನವನ್ನು ಕಂಡುಕೊಳ್ಳುವ ಸಾಧ್ಯತೆ ಕೂಡ ಇದೆ.
  ಟ್ವಿಟರ್ ಇದೀಗ ಬದಲಾವಣೆಯ ಹಲವಾರು ಗೊಂದಲಗಳಿಂದ ನಲುಗಿ ಹೋಗಿದ್ದರೂ ಒಂದು ಕಾಲದಲ್ಲಿ ಅನೇಕ ಮಹತ್ವದ ಚಳುವಳಿಗೆ ವೇದಿಕೆಯಾಗಿತ್ತು ಎಂಬ ಅಂಶವನ್ನು ಇಲ್ಲಿ ನಮೂದಿಸಲೇಬೇಕು.


  ಚಳುವಳಿಗಳಿಗೆ ಕಾರಣವಾಗಿದ್ದ ವೇದಿಕೆ


  ಭ್ರಷ್ಟಾಚಾರದ ವಿರುದ್ಧದ ಆಂದೋಲನಗಳು ಕಿಚ್ಚುಹತ್ತಿಕೊಂಡು ನಿಜವಾದ ಬದಲಾವಣೆಗೆ ಕಾರಣವಾದವು. ದೆಹಲಿಯಲ್ಲಿ ನಡೆದ ಭೀಕರ ಸಾಮೂಹಿಕ ಅತ್ಯಾಚಾರದ ಮೇಲಿನ ಆಕ್ರೋಶವು ಲೈಂಗಿಕ ದೌರ್ಜನ್ಯದ ಸಾಂಕ್ರಾಮಿಕ ವಿರುದ್ಧ ಹೋರಾಡಲು ಚಳುವಳಿಗೆ ಕಾರಣವಾಯಿತು.


  ಇದೆಲ್ಲಾ ಅಂಶಗಳು ಬಳಕೆದಾರರ ಗಮನಕ್ಕೆ ಬಾರದೇ ಇದ್ದು ವೇದಿಕೆಯನ್ನು ನಾವು ಲಘುವಾಗಿ ಪರಿಗಣಿಸಿದ್ದೇ ಕಾರಣ ಎಂದು ತಿಳಿಸಿರುವ ಬರಹಗಾರ್ತಿ ನೀಲಾಂಜನ ರಾಯ್, ಹೆಚ್ಚಿನವರು ಸ್ವಾತಂತ್ರ್ಯದ ಬಗ್ಗೆ ದೊಡ್ಡ ದೊಡ್ಡ ಭಾಷಣವನ್ನು ಮಾಡುತ್ತಾರೆ ಆದರೆ ಇದರ ಮಹತ್ವದ ಬಗ್ಗೆ ಅರಿಯದೆ ಪ್ರಜ್ಞಾಹೀನರಾಗಿ ಮಾತನಾಡುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿದೆ.


  ಇದನ್ನೂ ಓದಿ: Layoffs 2022: ಕೆಲಸ ಕಳೆದುಕೊಂಡ ಕೂಡಲೇ ಇದನ್ನು ಮಾಡಿದ್ರೆ ಸಂಕಷ್ಟದಿಂದ ಪಾರಾಗುತ್ತೀರಿ


  ಟ್ವಿಟರ್ ಸರಕಾರವನ್ನು ದೂಷಿಸುವ ವೇದಿಕೆಯಾಗಿತ್ತು ಹಾಗೂ ಧಾರ್ಮಿಕ ಆಚರಣೆಗಳನ್ನು ಚರ್ಚಿಸುವ ನೆಲೆಯಾಗಿತ್ತು ಆದರೆ ಇದೆಲ್ಲಾ ನಡೆಯಲು ಸಾಧ್ಯವೇ ಎಂಬುದು ನೀಲಾಂಜನರ ಪ್ರಶ್ನೆಯಾಗಿದೆ. ಕಡಿಮೆ ಪ್ರಾತಿನಿಧ್ಯದ ವಿಷಯಗಳು ತಾಣದಲ್ಲಿ ಈಗೀಗ ಹೆಚ್ಚು ಚರ್ಚಿತವಾಗುತ್ತಿದ್ದು ಅದುವೇ ಪ್ರಾಬಲ್ಯ ಹೊಂದಿವೆ ಎಂಬುದು ನೀಲಾಂಜನರಂತಹ ಟ್ವಿಟರ್ ಬಳಕೆದಾರರ ಅಭಿಪ್ರಾಯವಾಗಿದೆ.


  ವಿವಾದಗಳ ಸುಳಿ


  2014 ರ ವೇಳೆಗೆ, ಬಿಜೆಪಿಯು ಮೊದಲ ಬಾರಿಗೆ ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದಾಗ, ಸಾಮಾಜಿಕ ಮಾಧ್ಯಮದ ನವೀನ ಬಳಕೆಯಿಂದ ಮಧ್ಯಮ ವರ್ಗದ ಅತೃಪ್ತಿಯನ್ನು ಯಥಾಸ್ಥಿತಿಗೆ ತರಲು, ಟ್ವಿಟರ್ ವೇದಿಕೆ ದೋಷಾರೋಪಣೆಗಳ ಸಂಗ್ರಾಮ ವೇದಿಕೆಯಾಗಿ ಮಾರ್ಪಟ್ಟಿತ್ತು.


  Elon Musk mentioned the Indian government in the legal battle stg asp
  ಎಲೋನ್‌ ಮಸ್ಕ್‌


  ಬೇರೆ ಬೇರೆ ಭಿನ್ನಾಭಿಪ್ರಾಯಗಳು, ಹಿಂಸೆಯನ್ನು ಪ್ರಚೋದಿಸುವ ಪೋಸ್ಟ್‌ಗಳಿಂದ ತುಂಬಿದ್ದ ಭಾರತೀಯ ಟ್ವಿಟ್ಟರ್ ಪ್ರಪಂಚದ ಅತ್ಯಂತ ಕ್ರೂರವಾಗಿ ಹೊರಹೊಮ್ಮುವ ಹಾದಿಯಲ್ಲಿತ್ತು. ಅಧಿಕಾರವನ್ನು ಗೆಲ್ಲಲು ಸಾಮಾಜಿಕ ಮಾಧ್ಯಮವನ್ನು ತುಂಬಾ ಚಾಣಾಕ್ಷತೆಯಿಂದ ಬಳಸಿದ ಹೊಸ ಸರ್ಕಾರವು ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಟ್ವಿಟರ್‌ನಂತಹ ವೇದಿಕೆಗಳನ್ನು ನಿಯಂತ್ರಿಸುವುದು ನಿರ್ಣಾಯಕ ಎಂದು ಅರಿತುಕೊಂಡಿತು.


  ಟ್ವಿಟರ್ ಹೋರಾಟ


  ಟ್ವಿಟರ್ ಅನ್ನು ಖರೀದಿಸುವ ಮೂಲಕ ಮಸ್ಕ್, ಅಭಿಪ್ರಾಯ ಮಂಡಿಸಲು ಹಾಗೂ ವಿಚಾರಗಳನ್ನು ಅಭಿವ್ಯಕ್ತಿಸಲು ಟ್ವಿಟರ್ ಬಳಸುತ್ತಿರುವುದು. ಕಂಪನಿಯ ಹಲವಾರು ಮಾರ್ಪಾಡುಗಳ ಬಗ್ಗೆ ಟೀಕೆಗಳನ್ನು ಮಂಡಿಸುವುದರ ಜೊತೆಗೆ ಡೊನಾಲ್ಡ್ ಟ್ರಂಪ್ ಖಾತೆಯನ್ನು ನಿರ್ಬಂಧಿಸಿರುವುದು ಹೆಚ್ಚು ವಿವಾದಾತ್ಮಕ ಎಂದೆನಿಸಿದೆ. ಇನ್ನು ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಸರಕಾರಿ ಹಸ್ತಕ್ಷೇಪದಿಂದ ತನ್ನ ಬಳಕೆದಾರರನ್ನು ರಕ್ಷಿಸಲು ಕಾನೂನು ಹೋರಾಟವನ್ನು ನಡೆಸುತ್ತಿತ್ತು ಎಂಬುದು ಇಲ್ಲಿ ಗಮನಾರ್ಹವಾದುದಾಗಿದೆ.


  ಟ್ವಿಟರ್ ಅಳಿವು ಉಳಿವು


  ಮಸ್ಕ್ ಅವರ ಅನಿಯಮಿತ ನಿರ್ವಹಣೆಯ ಅಡಿಯಲ್ಲಿ ಟ್ವಿಟರ್ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದು, ಮುಂದೆ ಅದರ ಅಸ್ವಿತ್ವಕ್ಕೆ ಧಕ್ಕೆಯುಂಟುಮಾಡಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡಿದೆ.


  ಸಾಮಾಜಿಕ ಮಾಧ್ಯಮವು ಪ್ರಪಂಚದಾದ್ಯಂತ ಧ್ರುವೀಕರಣವನ್ನು ಆಳಗೊಳಿಸಿದೆ ಮತ್ತು ಅತಿರೇಕತವನ್ನು ಉತ್ತೇಜಿಸಿದೆ. ಟ್ವಿಟರ್ ಕಳೆದೆರಡು ವರ್ಷಗಳಲ್ಲಿ ಕಷ್ಟಕರವಾದ, ಮಹತ್ವದ ಕೆಲಸವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ಇಲ್ಲಿ ವ್ಯಕ್ತವಾದಂತಿದೆ.

  Published by:Precilla Olivia Dias
  First published: