ಯಾವುದೇ ವಾಹನಗಳನ್ನು ಡ್ರೈವ್ (Drive) ಮಾಡಬೇಕಾದರೂ ಲೈಸೆನ್ಸ್ ಎಂಬುದು ಬಹಳ ಮುಖ್ಯವಾಗಿರುತ್ತದೆ. ಆದರೆ ಇದುವರೆಗೆ ಡ್ರೈವಿಂಗ್ ಲೈಸೆನ್ಸ್ ಮಾಡಬೇಕಾದರೆ ಅಷ್ಟೊಂದು ಯಾವುದೇ ರೀತಿಯ ಕ್ರಮಗಳು, ನಿಯಮಗಳಿರಲಿಲ್ಲ. ಆದರೆ ಇನ್ಮುಂದೆ ಡಿಎಲ್ ಟೆಸ್ಟಿಂಗ್ (Driving License Test) ಮಾಡಿಸ್ಬೇಕಾದ್ರೆ 24 ನಿಯಮಗಳನ್ನು (DL Test 24 Rules) ಪಾಲಿಸಲೇ ಬೇಕು. ಈ ನಿಯಮಗಳಲ್ಲಿ ಪಾಸಾದ್ರೆ ಮಾತ್ರ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಕೈಗೆ ಸಿಗುತ್ತದೆ. ಇದೀಗ ಈ ಹೊಸ 24 ನಿಯಮಗಳನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಜಾರಿ ಮಾಡಿದ್ದಾರೆ. ಸಾರಿಗೆ ಇಲಾಖೆಯಿಂದ ಬಿಡುಗಡೆಯಾದ ಈ ಸುದ್ದಿಯನ್ನು ನೋಡಿ ಜನರಿಗೆ ಶಾಕ್ ಹೊಡೆದಂತಾಗಿದೆ. ಇತ್ತೀಚೆಗೆ ರಸ್ತೆಯಲ್ಲಾಗುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಕಾರಣದಿಂದ ಕೇಂದ್ರ ಮೋಟಾರು ವಾಹನ 1989 ನಿಯಮ 15ರ ಅಡಿಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಇದೀಗ ಸಾರಿಗೆ ಆಯುಕ್ತರು ಡೆಲ್ ಟೆಸ್ಟ್ನ ಹೊಸ ನಿಯಮಗಳನ್ನು ಜಾರಿ ಮಾಡಿದ್ದಾರೆ. ಇದು ರಸ್ತೆಯಲ್ಲಾಗುತ್ತಿರುವಂತಹ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಜಾರಿಗೆ ತಂದಿದ್ದಾರೆ. ಹಾಗಿದ್ರೆ ಏನೆಲ್ಲಾ ಹೊಸ ನಿಯಮಗಳು ಜಾರಿಗೆಯಾಗಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಡಿಎಲ್ ಟೆಸ್ಟ್ನ ಹೊಸ ನಿಯಮಗಳು ಹೇಗಿವೆ?
- ಲೈಸೆನ್ಸ್ ಪರೀಕ್ಷೆ ವೇಳೆ ಅಭ್ಯರ್ಥಿಗಳು ಟಾಪ್ ಗೇರ್ಗಳನ್ನು ಸಹ ಬಳಸಿ ಡ್ರೈವ್ ಮಾಡ್ಬೇಕು.
- ಸ್ವಯಂ ಚಾಲಿತ ಗೇರ್ ವಾಹನಗಳನ್ನು, ಟ್ರ್ಯಾಕ್ಗಳಲ್ಲಿ ಟಾಪ್ ಗೇರ್ಗಳನ್ನ ಬಳಸಬಹುದು.
- ಪರೀಕ್ಷೆಯ ವೇಳೆ ಬೇರೆ ವಾಹನವನ್ನ ಯಾವ ರೀತಿ ಓಪರ್ ಟೇಕ್ ಮಾಡಬೇಕೆಂದು ಗೊತ್ತಿರಬೇಕು. ಅದೇ ರೀತಿ ಓವರ್ ಟೇಕ್ ಸಹ ಮಾಡಬೇಕು.
- ಏಕಾಗ್ರತೆಯಲ್ಲಿ ಡ್ರೈವಿಂಗ್ ಮಾಡ್ಬೇಕು. ಯಾವುದೇ ರೀತಿಯ ಬೇರೆ ಗಮನಗಳಿರಬಾರದು.
- ಹಿಂಬದಿಯ ವಾಹನಗಳು ಕಾಣಿಸುವ ಹಾಗೆ ಕನ್ನಡಿಯನ್ನು ಇರಿಸಬೇಕು. ನಂತರ ಡ್ರೈವಿಂಗ್ ಮಾಡ್ಬೇಕು.
ಇದನ್ನೂ ಓದಿ: ಗುಟ್ಕಾ ಪ್ಯಾಕೆಟ್ನಲ್ಲಿ 32 ಲಕ್ಷ ಮೌಲ್ಯದ ಡಾಲರ್ ಸಾಗಿಸುತ್ತಿದ್ದ ಆಸಾಮಿ ಬಂಧನ
- ಡ್ರೈವಿಂಗ್ ಟೆಸ್ಟ್ ಅನ್ನು ಲಭ್ಯವಿರುವ ಸ್ಥಳದಲ್ಲಿಯೇ ಟೆಸ್ಟ್ ಮಾಡಬೇಕು
- ಡಿಎಲ್ ಟೆಸ್ಟ್ ವೇಳೆ ಎಲ್ಲಾ ಗೇರ್ ಅನ್ನು ಹಾಕಿ ಡ್ರೈವ್ ಮಾಡ್ಬೇಕು.
- 30-40 ಕಿ.ಮೀ ವೇಗದಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಟಾಪ್ ಗೇರ್ ಹಾಗಿಯೇ ಡ್ರೈವಿಂಗ್ ಮಾಡ್ಬೇಕು.
- ಎಂಜಿನ್ ಪ್ರಾರಂಭಿಸುವ ಮೊದಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ
- ಟ್ರಾಫಿಕ್ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಟಾಪ್ ಗೇರ್ನಿಂದ ತಕ್ಷಣ ಮೊದಲನೇ ಅಥವಾ ಎರಡನೇ ಗೇರ್ಗೆ ಬದಲಾಯಿಸಬೇಕು.
![]()
ಸಾಂದರ್ಭಿಕ ಚಿತ್ರ
- ಒಂದೇ ವೇಗದಲ್ಲಿ ಸುರಕ್ಷಿತವಾಗಿ, ಒಂದೇ ದಾರಿಯಲ್ಲಿ ಸಾಗುತ್ತಿರುವಾಗ ಹಂತ ಹಂತವಾಗಿ ಎಲ್ಲಾ ಗೇರ್ಗಳನ್ನು ಬಳಸಬೇಕು.
- ಇನ್ನು ಇಳಿಜಾರಿನ ಜಾಗದಲ್ಲಿ ವಾಹನಗಳನ್ನು ಚಲಾಯಿಸುವಾಗ ಗೇರ್ ಅನ್ನು ಮತ್ತೆ ಕಡಿಮೆ ಮಾಡಬೇಕು.
- ಚಲಿಸುತ್ತಿರುವಾಗ ಓವರ್ ಟೇಕ್ ಮಾಡಲು ಮುಂದಾದಾಗ ಸರಿಯಾದ ರೀತಿಯಲ್ಲಿ ಕೈಸನ್ನೆ ಮಾಡುವ ಮೂಲಕ ಅಥವಾ ವಾಹನದಲ್ಲಿ ನೀಡಲಾದ ಇಂಡಿಗೇಟರ್ ಲೈಟ್ ಮೂಲಕ ಸೂಚನೆಯನ್ನು ಹಿಂಬದಿಯವರಿಗೂ, ಮುಂದೆ ಇರುವವರಿಗೂ ನೀಡಬೇಕು.
- ಸರಿಯಾದ ಸೂಚನೆಗಳೊಂದಿಗೆ ಮತ್ತು ಸರಿಯಾದ ಕಾಳಜಿಯೊಂದಿಗೆ ಲೇನ್ಗಳನ್ನು ಬದಲಾಯಿಸಬೇಕು.
- ಬೇರೆ ರಸ್ತೆಗೆ ಅಥವಾ ಜಂಕ್ಷನ್ಗಳಲ್ಲಿ ವಾಹನ ಮೂವ್ ಮಾಡುವಾಗ ಜಾಗರೂಕರಾಗಿರಿ. ಅಂದರೆ ಸರಿಯಾದ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಬಲಕ್ಕೆ ಅಥವಾ ಎಡಕ್ಕೆ ತಿರುಗುವುದಾದರೆ ವಾಹನ ಎಲ್ಲಿದೆ ಎಂಬುದನ್ನು ನೋಡಿಕೊಳ್ಳಿ. ದಾಟುವ ಮೊದಲು ಬಲ, ಎಡ ಬದಿಗಳನ್ನು ನೋಡಬೇಕು.
- ರಸ್ತೆಗಳಲ್ಲಿ ಯಾವಾಗಲೂ ಎಡಬದಿಗಳಲ್ಲೇ ವಾಹನಗಳನ್ನು ಚಲಾಯಿಸಬೇಕು.
- ಸಂಚರಿಸುವಾಗ ಪಾದಚಾರಿಗಳು, ಇತರ ವಾಹನಗಳ ಚಾಲಕರು ಮತ್ತು ಸೈಕ್ಲಿಸ್ಟ್ಗಳನ್ನೂ ಗಮನಿಸಿ ಚಲಾಯಿಸಿ.
- ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಸರಿಯಾಗಿ ಮತ್ತು ನಿರ್ದಿಷ್ಟವಾಗಿ ಎಡ ಅಥವಾ ಬಲಕ್ಕೆ ತೆಗೆಯಬೇಕು. ಸಂಚಾರ ಚಿಹ್ನೆಗಳು, ಟ್ರಾಫಿಕ್ ಲೈಟ್ಗಳನ್ನು, ಸಂಚಾರ ನಿಯಂತ್ರಕರು, ಪೊಲೀಸರು ನೀಡಿದ ಸೂಚನೆಗಳ ಮೇಲೆ ಸರಿಯಾಗಿ ವಾಹನವನ್ನು ಚಲಾಯಿಸಿ. ಅಥವಾ ಇತರ ಚಾಲಕರು ನೀಡುವ ಸೂಚನೆಗಳನ್ನು ಗಮನಿಸಿ.
- ರಸ್ತೆಗಳನ್ನು ದಾಟುವ ವ್ಯಕ್ತಿಗಳಿಗೆ ಅವಕಾಶವನ್ನು ನೀಡಬೇಕು.
![]()
ಸಾಂದರ್ಭಿಕ ಚಿತ್ರ
- ಅಗತ್ಯವಾದ ಸಂದರ್ಭಗಳಲ್ಲಿ ಮತ್ತು ಬೇರೆ ಯಾವುದೇ ಸಂದರ್ಭಗಳು ಎದುರಾದಾಗ ವಾಹನವನ್ನು ನಿಲ್ಲಿಸಬೇಕು ಮತ್ತು ಸೂಕ್ತವಾದ ಸ್ಥಳದಲ್ಲಿ ಪಾರ್ಕ್ ಮಾಡಬೇಕು.
- ಒಂದೇ ದಾರಿಯಲ್ಲಿ ಚಲಿಸುತ್ತಿರುವಾಗ ಬೇರೆ ದಾರಿಗೆ ತಿರುಗಬೇಕಾದರೆ ಸರಿಯಾಗಿ ಎಕ್ಸಲೇಟರ್, ಗೇರ್, ಕ್ಲಚ್, ಸ್ಟೇರಿಂಗ್, ಇಂಡಿಗೇಟರ್ಗಳನ್ನು ಬಳಸಿ.
- ಇನ್ನು ಡ್ರೈವಿಂಗ್ ಮಾಡಬೇಕಾದರೆ ಸರಿಯಾದ ರೀತಿಯಲ್ಲಿ ಗೇರ್, ಕ್ಲಚ್, ಬ್ರೇಕ್ ಇವುಗಳನ್ನು ಬಳಸಿ. ಇದರಿಂದ ವಾಹನ ಕೂಡ ನಿಯಂತ್ರಣದಲ್ಲಿರುತ್ತದೆ.
- ಇಳಿಜಾರಿನಲ್ಲಿ ನಿಲ್ಲಿಸುವಾಗ ಮುಖ್ಯವಾಗಿ ಹ್ಯಾಂಡ್ಬ್ರೇಕ್ ಅನ್ನು ಬಳಸಿ. ನಂತರ ಸ್ಟಾರ್ಟ್ ಮಾಡುವಾಗ ಸರಿಯಾಗಿ ಹಿಂದೆ, ಮುಂದೆ ಕನ್ನಡಿಯಲ್ಲಿ ನೋಡಿಕೊಂಡು ಸಿಗ್ನಲ್ ನೀಡುವ ಮೂಲಕ ವಾಹನ ಚಲಾಹಿಸಬೇಕು.
- ರಸ್ತೆಗಳ ಗುಣಮಟ್ಟ ಹಾಗೂ ನಿಮ್ಮ ನಿಯಂತ್ರಣಕ್ಕೆ ಅನುಗುಣವಾಗಿ ವಾಹನದ ವೇಗವನ್ನೂ ನಿಯಂತ್ರಿಸಿ.
ಹೊಸ ರೂಲ್ಸ್ ಕುರಿತು ಸಾರಿಗೆ ಅಧಿಕಾರಿಗಳ ಮಾತು
ಪರೀಕ್ಷೆಗೆ ಬಂದ ಅಭ್ಯರ್ಥಿಗಳು ವಾಹನವನ್ನು ಸ್ಟಾರ್ಟ್ ಮಾಡಿದ ಕೂಡಲೇ ಆತನಿಗೆ ವಾಹನ ಬಿಡಲು ಬರುತ್ತದೆಯೋ, ಇಲ್ಲವೋ ಎಂದು ತಿಳಿಯುತ್ತದೆ. ನಂತರ ಆತನ ಬುದ್ಧಿವಂತಿಕೆಯ ಮೇಲೆ ಪಾಸ್ ಮಾಡಬಹುದು. ಇನ್ನು ಈ ಹೊಸ ರೂಲ್ಸ್ನಿಂದ ದಿನಕ್ಕೆ 4 ಮಂದಿಯನ್ನು ಮಾತ್ರ ಪರೀಕ್ಷಿಸಬಹುದು. ಈ ರೂಲ್ಸ್ ಪ್ರಕಾರ ಒಬ್ಬರ ಡಿಎಲ್ ಟೆಸ್ಟ್ ಮಾಡಲು ಸರಿಸುಮಾರು ಒಂದು ಗಂಟೆಯಾದರೂ ಬೇಕಾಗುತ್ತದೆ. ಆದ್ದರಿಂದ 4 ಮಂದಿಯನ್ನು ಮಾತ್ರ ಟೆಸ್ಟ್ ಮಾಡಬಹುದು ಎಂದು ಹೇಳಿದ್ದಾರೆ.
ಒಂದು ಆರ್ಟಿಒ ಕಚೇರಿಗೆ ನಿತ್ಯ 60 ರಿಂದ 100 ಅರ್ಜಿಗಳು ಬರುತ್ತದೆ. ಈ ಮೂಲಕ ದಿನಕ್ಕೆ ನಾಲ್ವರಂತೆ 100 ಅರ್ಜಿಗಳನ್ನು ಮಾಡಲು 24 ದಿನಗಳು ಬೇಕಾಗುತ್ತದೆ. ಇದರಿಂದ ತುಂಬಾ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಈ ಹೊಸ ನಿಯಮಕ್ಕಿಂತ ಹಿಂದೆ ಇದ್ದ ವ್ಯವಸ್ಥೆಯೇ ಒಳ್ಳೆಯದು ಎಂದು ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.