ನವ ದೆಹಲಿ (ನವೆಂಬರ್ 05); ಭಾರತೀಯ ಮಾರುಕಟ್ಟೆ ವಿಶ್ವದಲ್ಲೇ ಅತ್ಯಧಿಕ ಬೇಡಿಕೆ ಇರುವ ಮಾರುಕಟ್ಟೆ. ಇಲ್ಲಿ ಜಾಪ್ರಭುತ್ವದ ಮೌಲ್ಯಗಳ ಜೊತೆಗೆ ವ್ಯಾಪಾರ ಲಾಭವೂ ಇದೆ ಹೀಗಾಗಿ ಜಾಗತಿಕ ಹೂಡಿಕೆದಾರರಿಗೆ ಬಂಡವಾಳ ಹೂಡಿಕೆ ಮಾಡಲು ಭಾರತ ಸೂಕ್ತ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇಂದು ನಡೆದ ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, " ಕೊರೋನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಡುವೆಯೂ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ಹಾಗೂ ಕಳೆದ ಆರು ವರ್ಷಗಳಲ್ಲಿ ಘೋಷಿಸಿದ ಆರ್ಥಿಕ ನೀತಿಯಿಂದಾಗಿ ದೇಶ ಪ್ರಗತಿಯ ಹಾದಿಯಲ್ಲಿದೆ. ಹೀಗಾಗಿ ಬಂಡವಾಳ ಹೂಡಿಕೆ ಮಾಡಿ ಲಾಭ ಪಡೆಯಲು ಅತಿದೊಡ್ಡ ಮಾರುಕಟ್ಟೆಯಾದ ಭಾರತ ವಿದೇಶಿ ಹೂಡಿಕೆದಾರರಿಗೆ ಸೂಕ್ತ ದೇಶ" ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಯ ಕುರಿತು ಬಂಡವಾಳದಾರರಿಗೆ ಮಾಹಿತಿ ನೀಡಿದ ಮೋದಿ, "ಕೃಷಿ ಕ್ಷೇತ್ರದಲ್ಲಿನ ನಮ್ಮ ಇತ್ತೀಚಿನ ಸುಧಾರಣೆಗಳು ಭಾರತದ ರೈತರೊಂದಿಗೆ ಪಾಲುದಾರರಾಗಲು ಹೊಸ ಉತ್ತೇಜಕ ಸಾಧ್ಯತೆಗಳನ್ನು ತೆರೆಯುತ್ತಿವೆ. ತಂತ್ರಜ್ಞಾನ ಮತ್ತು ಆಧುನಿಕ ಸಂಸ್ಕರಣಾ ಪರಿಹಾರಗಳ ಸಹಾಯದಿಂದ ಭಾರತ ಶೀಘ್ರದಲ್ಲೇ ಕೃಷಿ ರಫ್ತು ಕೇಂದ್ರವಾಗಿ ಹೊರಹೊಮ್ಮಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಆತ್ಮ ನಿರ್ಭರ ಭಾರತ ಎಂಬುದು ಕೇವಲ ದೃಷ್ಟಿಕೋನವಲ್ಲ ಅದು ದೇಶದ ಯೋಜಿತ ಆರ್ಥಿಕ ತಂತ್ರ; ಪ್ರಧಾನಿ ಮೋದಿ
"ವಿಶ್ವ ಆರ್ಥಿಕ ಕ್ರಮವನ್ನು ಸ್ಥಿರಗೊಳಿಸಲು ಭಾರತ ಬಲವಾದ ಮತ್ತು ಅಗತ್ಯ ಕೊಡುಗೆ ನೀಡಬಹುದು. ಭಾರತವನ್ನು ಜಾಗತಿಕ ಬೆಳವಣಿಗೆಯ ಪುನರುತ್ಥಾನದ ಎಂಜಿನ್ ಮಾಡಲು ನಾವು ಏನು ಬೇಕಾದರೂ ಮಾಡಲು ಸಿದ್ದರಿದ್ದೇವೆ. ನೀವು ವಿಶ್ವಾಸಾರ್ಹತೆಯೊಂದಿಗೆ ಆದಾಯವನ್ನು ಬಯಸಿದರೆ, ಭಾರತ ಅದಕ್ಕೆ ಸೂಕ್ತ ಸ್ಥಳವಾಗಿದೆ. ನೀವು ಪ್ರಜಾಪ್ರಭುತ್ವದೊಂದಿಗೆ ಬೇಡಿಕೆ, ಸುಸ್ಥಿರತೆಯೊಂದಿಗೆ ಸ್ಥಿರತೆಯನ್ನು ನಿರೀಕ್ಷಿಸುತ್ತೀರಿ ಎಂದರೆ ಅದಕ್ಕೆ ಭಾರತಕ್ಕಿಂತ ಉತ್ತಮ ದೇಶ ಮತ್ತೊಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ