Lok Sabha Election 2019 |‘ಮೋದಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ’; ಮೋದಿ ಪರ ಖಾನ್ ಹೇಳಿಕೆಗೆ ಟ್ವೀಟ್​ನಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ

ಬಹಿರಂಗವಾಗಿ ಪಾಕಿಸ್ತಾನದ ಹೆಸರೆತ್ತಿದರೆ ನಖಶಿಖಾಂತ ಉರಿಯುವ ಬಿಜೆಪಿ ನಾಯಕ ಮೋದಿ ಅವರಿಗೆ ಪಾಕ್ ಪ್ರಧಾನಿ ಜತೆಗಿನ ಅಂತರಂಗದ ‘ಕುಚುಕು ಕುಚುಕು’ ಪ್ರೀತಿಯ ಗುಟ್ಟೇನು?” ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ “ನಮ್ಮ ಕಡೆ ಕಳ್ಳರಿಗೆ ಕಳ್ಳರೇ ದೋಸ್ತಿ ಅಂತಾರೆ” ಎಂದು ಮೋದಿ ಹಾಗೂ ಇಮ್ರಾನ್ ಖಾನ್ ನಡುವಿನ ಸಂಬಂಧವನ್ನೆ ಹೀಯಾಳಿಸಿದ್ದಾರೆ.

MAshok Kumar | news18
Updated:April 11, 2019, 2:28 PM IST
Lok Sabha Election 2019 |‘ಮೋದಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ’; ಮೋದಿ ಪರ ಖಾನ್ ಹೇಳಿಕೆಗೆ ಟ್ವೀಟ್​ನಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ- ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: April 11, 2019, 2:28 PM IST
  • Share this:
ಬೆಂಗಳೂರು (ಏ.11) : ನರೇಂದ್ರ ಮೋದಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಅಂತಾರಾಷ್ಟ್ರೀಯ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, “ಭಾರತದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ವಹಿಸಿಕೊಂಡರೆ ಆ ಪಕ್ಷ ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆ ನಡೆಸಲು ಹಿಂದೇಟು ಹಾಕುತ್ತದೆ. ಹೀಗಾಗಿ ಬಿಜೆಪಿ ಗೆಲುವು ಸಾಧಿಸಿದರೆ ಮಾತ್ರ ಶಾಂತಿ ಮಾತುಕತೆ ಸಾಧ್ಯ” ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಚುನಾವಣೆಯಲ್ಲಿ ಮೋದಿಗೆ ಸಹಾಯ ಮಾಡುವ ಸಲುವಾಗಿ ಪಾಕಿಸ್ತಾನ ಪುಲ್ವಾಮಾ ದಾಳಿ ನಡೆಸಿತೇ; ಅರವಿಂದ ಕೇಜ್ರಿವಾಲ್ ಪ್ರಶ್ನೆ?

ಇಮ್ರಾನ್ ಖಾನ್ ಅವರ ಈ ಹೇಳಿಕೆಗೆ ತಮ್ಮ ಟ್ವೀಟರ್​ ಖಾತೆಯಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ, “ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಯಾವ ಕಾರಣವಿದೆ ಎಂದು ತಿಳಿಯದು. ಆದರೆ, ಈಗಿನ ಪಾಕಿಸ್ತಾನದ ಬೆಂಬಲವನ್ನು ಗಮನಿಸಿದರೆ ರಷ್ಯಾದಿಂದ ಅಮೇರಿಕ್ಕೆ ಹಾನಿಯುಂಟಾದಂತೆ ಭವಿಷ್ಯದಲ್ಲಿ ಭಾರತಕ್ಕೂ ಹಾನಿಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹೀಗಾಗಿ ಮೋದಿಗೆ ಮತ ಚಲಾಯಿಸದರೆ ಪಾಕಿಸ್ತಾನಕ್ಕೆ ಮತ ಚಲಾಯಿಸಿದಂತೆ” ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಸರಣಿ ಟ್ವೀಟ್​ನಲ್ಲಿ ಮೋದಿ ವಿರುದ್ಧ ಹರಿಹಾಯ್ದಿರುವ ಅವರು, “ಕಾಂಗ್ರೆಸ್ ನರೇಂದ್ರ ಮೋದಿಯಂತೆ ಎಂದಿಗೂ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಬಲಿಕೊಡಲಿಲ್ಲ. ಆದರೆ, ತಮ್ಮ ರಾಜಕೀಯ ಲಾಭ ಮೋದಿ ರಾಷ್ಟ್ರೀಯತೆಯ ಹೆಸರಿನಲ್ಲಿ ಪಾಕಿಸ್ತಾನದ ಜೊತೆಗೂಡಿದ್ದಾರೆ. ಪರಿಣಾಮ ನಾವು ನಮ್ಮ ಸೈನಿಕರನ್ನು ಕಳೆದುಕೊಂಡು ದುಖಃತಪ್ತರಾಗಿದ್ದೇವೆ” ಎಂದು ಮೋದಿ ವಿರುದ್ಧ ಆರೋಪಿಸಿದ್ದಾರೆ.

ಇದನ್ನೂ ಓದಿ : Lok Sabha Election 2019 | 'ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಹೇಳಿಕೆ ನಿಜವಾಗಲು ಬಿಡಬೇಡಿ'; ಮತದಾರರಿಗೆ ಒವೈಸಿ ಮನವಿ

ಅಲ್ಲದೆ “ಬಹಿರಂಗವಾಗಿ ಪಾಕಿಸ್ತಾನದ ಹೆಸರೆತ್ತಿದರೆ ನಖಶಿಖಾಂತ ಉರಿಯುವ ಬಿಜೆಪಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್ ಪ್ರಧಾನಿ ಜತೆಗಿನ ಅಂತರಂಗದ ‘ಕುಚುಕು ಕುಚುಕು’ ಪ್ರೀತಿಯ ಗುಟ್ಟೇನು?” ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ “ನಮ್ಮ ಕಡೆ ಕಳ್ಳರಿಗೆ ಕಳ್ಳರೇ ದೋಸ್ತಿ ಅಂತಾರೆ” ಎಂದು ಮೋದಿ ಹಾಗೂ ಇಮ್ರಾನ್ ಖಾನ್ ನಡುವಿನ ಸಂಬಂಧವನ್ನೆ ಹೀಯಾಳಿಸಿದ್ದಾರೆ.
First published:April 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading