Vehicle Rules: ಕಾರಿನ ಕಿಟಕಿಗೆ 'ಬ್ಲ್ಯಾಕ್ ಸನ್ ಫಿಲ್ಮ್' ಹಾಕಿದ್ದೀರಾ? ಭಾರೀ ದಂಡ ಕಟ್ಟಬೇಕಾದೀತು ಎಚ್ಚರ!

ಕಳೆದ ಕೆಲವು ತಿಂಗಳುಗಳಿಂದ ಹೈದರಾಬಾದ್ ನಗರದಲ್ಲಿ ಸಂಚಾರ ಪೊಲೀಸರು ಕಾರಿನ ಕಿಟಕಿಗಳ ಮೇಲೆ ಹಾಕಿಕೊಂಡಿರುವ ಬ್ಲ್ಯಾಕ್ ಸನ್ ಫಿಲ್ಮ್ಸ್ ಎಂದರೆ ಕಿಟಕಿಯ ಮೇಲೆ ಹಾಕಿಕೊಂಡಿರುವ ಕಪ್ಪು ಬಣ್ಣದ ಫಿಲ್ಮ್ಸ್ ಇರುವ ಕಾರುಗಳನ್ನು ತಡೆದು ನಿಲ್ಲಿಸಿ ಅವರ ಮೇಲೆ ದಂಡವನ್ನು ವಿಧಿಸುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ನಮ್ಮ ಜನರು (People) ಏನು ಮಾಡಬಾರದು ಎಂದು ಹೇಳುತ್ತಾರೋ, ಅದನ್ನೇ ಹೆಚ್ಚಾಗಿ ಮಾಡುವಂತೆ ಕಾಣುತ್ತಾರೆ ನೋಡಿ. ದ್ವಿಚಕ್ರ (Two wheeler) ವಾಹನದ ಮೇಲೆ ಇಬ್ಬರಿಗಿಂತಲೂ ಹೆಚ್ಚು ಜನರು ಕುಳಿತುಕೊಂಡು ಹೋಗಬಾರದು ಅಂತ ಹೇಳಿದರೂ ರಸ್ತೆಯಲ್ಲಿ (Road) ಇವತ್ತಿಗೂ ಒಂದು ಬೈಕ್  ಮೇಲೆ ಮೂವರು ಮತ್ತು ಕೆಲವೊಮ್ಮೆ ನಾಲ್ಕು ಜನರು ಕುಳಿತುಕೊಂಡು ಹೋಗುವುದನ್ನು ನಾವು ನೋಡುತ್ತೇವೆ. ಹಾಗೆಯೇ ಈ ರಸ್ತೆಯಲ್ಲಿ ಕೇವಲ ವಾಹನಗಳು (Vehicle) ಹೋಗುವುದಕ್ಕೆ ಮಾತ್ರ ಅವಕಾಶವಿದೆ, ಬರುವುದಕ್ಕೆ ಅವಕಾಶವಿಲ್ಲ ಅಂತ ಹೇಳಿ ಇದು ‘ಒನ್ ವೇ’ ಅಂತ ಬೋರ್ಡ್ ಹಾಕಿದರೂ ಸಹ ಜನರು ಬೈಕ್ ತೆಗೆದುಕೊಂಡು ಹಾಗೆಯೇ ಈ ರಸ್ತೆಗೆ ನುಸುಳಿ ಬಿಡುತ್ತಾರೆ. 

ಸಾರ್ವಜನಿಕರ ಹಿತಕ್ಕಾಗಿ ಇರುವಂತಹ ರಸ್ತೆ ನಿಯಮಗಳು 
ಒಟ್ಟಿನಲ್ಲಿ ಸಾರ್ವಜನಿಕರ ಹಿತಕ್ಕಾಗಿ ಜಾರಿಗೆ ತಂದಂತಹ ನಿಯಮಗಳನ್ನು ಗಾಳಿಗೆ ತೂರುವುದರಲ್ಲಿ ಎತ್ತಿದ ಕೈ ಇವರದು. ಇನ್ನೂ ಹೆಲ್ಮೆಟ್ ಇರದೇ ಬೈಕ್ ಚಲಾಯಿಸಬೇಡಿ ಅಂತ ಹೇಳಿದರೂ ಸಹ ಹೆಲ್ಮೆಟ್ ಇರದೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುವುದನ್ನು ನಾವು ನೋಡುತ್ತೇವೆ. ಹೀಗೆ ಮಾಡಿರುವ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಅಂತ ಗೊತ್ತಿದ್ದೆ ಸಂಚಾರಿ ಪೊಲೀಸರು ರಸ್ತೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತಾರೆ. ಇಂತಹ ಯಾವುದೇ ಉಲ್ಲಂಘನೆ ಕಣ್ಣಿಗೆ ಬಿದ್ದರೆ ಸಾಕು, ತಕ್ಷಣವೇ ವಾಹನವನ್ನು ತಡೆದು ನಿಲ್ಲಿಸಿ ಚಾಲಕರ ಮೇಲೆ ಸರಿಯಾದ ದಂಡವನ್ನು ವಿಧಿಸುತ್ತಾರೆ.

ಬ್ಲ್ಯಾಕ್ ಸನ್ ಫಿಲ್ಮ್ಸ್ ಹಾಕಿಕೊಂಡಿರುವ ಕಾರುಗಳಿಗೆ ದಂಡ
ಈ ನಿಯಮಗಳ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬಹುದು. ಕಳೆದ ಕೆಲವು ತಿಂಗಳುಗಳಿಂದ ಹೈದರಾಬಾದ್ ನಗರದಲ್ಲಿ ಸಂಚಾರ ಪೊಲೀಸರು ಕಾರಿನ ಕಿಟಕಿಗಳ ಮೇಲೆ ಹಾಕಿಕೊಂಡಿರುವ ಬ್ಲ್ಯಾಕ್ ಸನ್ ಫಿಲ್ಮ್ಸ್ ಎಂದರೆ ಕಿಟಕಿಯ ಮೇಲೆ ಹಾಕಿಕೊಂಡಿರುವ ಕಪ್ಪು ಬಣ್ಣದ ಫಿಲ್ಮ್ಸ್ ಇರುವ ಕಾರುಗಳನ್ನು ತಡೆದು ನಿಲ್ಲಿಸಿ ಅವರ ಮೇಲೆ ದಂಡವನ್ನು ವಿಧಿಸುತ್ತಿದ್ದಾರೆ.

ಇದನ್ನೂ ಓದಿ: KYC: ದೇಶದ ಪ್ರಮುಖ ಬ್ಯಾಂಕ್ ಗ್ರಾಹಕರೇ ಎಚ್ಚರ; 2 ದಿನದಲ್ಲಿ ಹೀಗೆ ಮಾಡಿ

ಸಂಚಾರ ಪೊಲೀಸರ ತಂಡಗಳು ಈ ಬ್ಲ್ಯಾಕ್ ಸನ್ ಫಿಲ್ಮ್ಸ್ ಹೊಂದಿರುವ ವಾಹನಗಳನ್ನು ತಡೆದು ನಿಲ್ಲಿಸಿ ಅವುಗಳ ಕಿಟಕಿಯ ಮೇಲಿರುವ ಈ ಕಪ್ಪು ಫಿಲ್ಮ್ಸ್ ಅನ್ನು ತೆಗೆದು ಅವರ ಮೇಲೆ ಭಾರಿ ದಂಡವನ್ನು ವಿಧಿಸುತ್ತಿರುವ ದೃಶ್ಯಗಳನ್ನು ನಾವು ಅನೇಕ ರಸ್ತೆಗಳಲ್ಲಿ ನೋಡಬಹುದಾಗಿದೆ.

ಕಾರಿನ ಕಿಟಕಿಗಳ ಮೇಲೆ ವಿಂಡ್ ಸ್ಕ್ರೀನ್ ಎಷ್ಟಿರಬೇಕು?
ಕಾನೂನಿನ ಪ್ರಕಾರ, ಈ ಕಪ್ಪು ಬಣ್ಣದ ಸನ್ ಫಿಲ್ಮ್ಸ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದಾಗ್ಯೂ, ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ಕಿಟಕಿ ಗಾಜು ಕನಿಷ್ಠ 70 ಪ್ರತಿಶತದಷ್ಟು ಗೋಚರತೆಯನ್ನು ಹೊಂದಿದ್ದರೆ ಮತ್ತು ಬದಿಯ ಕಿಟಕಿಗಳು ಕನಿಷ್ಠ 50 ಪ್ರತಿಶತದಷ್ಟು ಗೋಚರತೆಯನ್ನು ಹೊಂದಿರುವ ಟಿಂಟೆಡ್ ಗಾಜನ್ನು ಬಳಸಬಹುದು.

ಬ್ಲ್ಯಾಕ್ ಸನ್ ಫಿಲ್ಮ್ಸ್ ಅನ್ನು ತೆಗೆಯುವುದು ಹೇಗೆ
ನೀವು ನಿಮ್ಮ ಕಾರಿನ ಕಿಟಕಿಗಳಿಗೆ ಸನ್ ಫಿಲ್ಮ್ ಅನ್ನು ಹಾಕಿಸಿದರೆ ಮತ್ತು ಅದನ್ನು ಈಗ ತೆಗೆದು ಹಾಕಲು ಬಯಸಿದರೆ, ಸನ್ ಫಾಯಿಲ್ ನ ಅಂಟನ್ನು ಕರಗಿಸಲು ನೀವು ಹೀಟ್ ಗನ್ ಅಥವಾ ಹೇರ್ ಡ್ರೈಯರ್ ಅನ್ನು ಬಳಸಬಹುದು. ಈ ಕಾರ್ಯ ವಿಧಾನಗಳು ಗಾಜಿನ ಮೇಲೆ ಯಾವುದೇ ರೀತಿಯ ಗೀರುಗಳು ಬೀಳುವುದಕ್ಕೆ ಕಾರಣವಾಗುವುದಿಲ್ಲ.

ಇದನ್ನೂ ಓದಿ: Pakistan Floods 2022: ಟೊಮ್ಯಾಟೊ ಕೆಜಿಗೆ 500, ಈರುಳ್ಳಿ 400 ರೂಪಾಯಿ! ಪ್ಲೀಸ್, ಸಹಾಯ ಮಾಡಿ ಎಂದ ಪಾಕ್

ಟಿಂಟೆಡ್ ಫಾಯಿಲ್ ಅನ್ನು ತೆಗೆದು ಹಾಕಿದ ನಂತರ, ಉಳಿದ ಅಂಟನ್ನು ತೊಡೆದು ಹಾಕಲು ನೀವು ಸಾಬೂನಿನ ನೀರನ್ನು ಬಳಸಬಹುದು. ಅಂತಿಮವಾಗಿ, ನೀವು ಸ್ಪಷ್ಟವಾದ ಮತ್ತು ಸ್ವಚ್ಛವಾದ ಗಾಜನ್ನು ಹೊಂದುವಿರಿ. ಚೂಪಾದ ಸಾಧನವನ್ನು ಬಳಸಿ ಫಿಲ್ಮ್ ಅನ್ನು ಸ್ಕ್ರ್ಯಾಪ್ ಮಾಡುವುದರಿಂದ ಸಹ ಗಾಜುಗಳಿಗೆ ಗೀರುಗಳು ಬೀಳುತ್ತವೆ. ಆದ್ದರಿಂದ, ಮೇಲೆ ಹೇಳಿದ ಈ ಕಾರ್ಯ ವಿಧಾನಗಳನ್ನು ಅನುಸರಿಸುವುದರಿಂದ ಗಾಜಿನ ಮೇಲೆ ಯಾವುದೇ ಗೀರುಗಳು ಉಂಟಾಗುವುದಿಲ್ಲ.
Published by:Ashwini Prabhu
First published: