• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ರೆ ಕೂಡಲೇ ಕ್ಲೋಸ್​ ಮಾಡಿ

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ರೆ ಕೂಡಲೇ ಕ್ಲೋಸ್​ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಷ್ಕ್ರಿಯ ಖಾತೆಯನ್ನು ಸರಿಯಾಗಿ ಬಳಸದಿದ್ದರೆ ಅದು ನಿಮಗೆ ನಷ್ಟವಾಗುತ್ತದೆ. ಬ್ಯಾಂಕ್​ ನಿಮಗೆ ದಂಡ ವಿಧೀಸುವುದರಿಂದ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ 4 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಕನಿಷ್ಠ 10 ಸಾವಿರ ಹಣವನ್ನು ಖಾತೆಯಲ್ಲಿ ಇಡಬೇಕಾಗುತ್ತದೆ.

ಮುಂದೆ ಓದಿ ...
 • Share this:

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದರೆ, ತುಂಬಾ ಸಮಯದಿಂದ ಆ ಖಾತೆಯನ್ನು ಬಳಸದಿದ್ದರೆ ಕೂಡಲೇ ಆ ಅಕೌಂಟ್​​ನ್ನು ಕ್ಲೋಸ್​ ಮಾಡಿಸಬೇಕಾಗುತ್ತದೆ. ಒಂದು ವೇಳೆ, ಅಕೌಂಟ್​ ಕ್ಲೋಸ್​ ಮಾಡಿಸದಿದ್ದರೆ, ಬ್ಯಾಂಕ್​ಗೆ ನೀವು ಹೆಚ್ಚಿನ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಬ್ಯಾಂಕ್​ ಗ್ರಾಹಕರು ತಿಳಿದುಕೊಳ್ಳಬೇಕಾದ ಹೆಚ್ಚಿನ ಅಂಶಗಳು ಇಲ್ಲಿವೆ.

ನಿಮ್ಮ ಹೆಸರಿನಲ್ಲಿ ಬ್ಯಾಂಕ್​ ಖಾತೆ ಇದ್ದು, ಅದನ್ನು ನೀವು ತುಂಬಾ ದಿನಗಳಿಂದ ಬಳಸದಿದ್ದರೆ, ಈಗ ಆ ಖಾತೆಯನ್ನು ಮುಚ್ಚುವುದು ಉತ್ತಮ. ಬ್ಯಾಂಕ್​​​ನ ನಿಯಮದ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣವನ್ನು ಇಟ್ಟು, ನಿಯಮಿತವಾಗಿ ಹಣ ವ್ಯವಹಾರ ಮಾಡಬೇಕು. ಇಲ್ಲವಾದರೆ ಬ್ಯಾಂಕ್​ ನಿಮಗೆ ಹೆಚ್ಚಿನ ದಂಡ ವಿಧಿಸುತ್ತದೆ.

ಹೀಗಾಗಿ, ಬ್ಯಾಂಕ್​ ಖಾತೆಯನ್ನು ನಿಷ್ಕ್ರಿಯೆಗೊಳಿಸಿ ಎಂದು ಪರಿಣಿತರು ಸಲಹೆ ನೀಡಿದ್ದಾರೆ. ನಿಮ್ಮ ಬ್ಯಾಂಕ್​ ಖಾತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೊತೆ ಕೂಡಲೇ ಬ್ಯಾಂಕ್​ಗೆ ಹೋಗಿ ಖಾತೆಯನ್ನು ಕ್ಲೋಸ್​ ಮಾಡಿಸುವುದು ಒಳಿತು. ಯಾಕೆಂದರೆ, ನಿಮ್ಮ ಎಲ್ಲಾ ಹೂಡಿಕೆಗಳು, ಸಾಲ, ವ್ಯಾಪಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್​​ ಮತ್ತು ವಿಮೆ (ಇನ್ಷೂರೆನ್ಸ್​) ಯೊಂದಿಗೆ ಸಂಪರ್ಕ ಹೊಂದಿರುವ ಪೇಮೆಂಟ್​​​​​ಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್​ ಮಾಡಲಾಗಿರುತ್ತದೆ.

ನಿಮ್ಮ ಬ್ಯಾಂಕ್​ ಖಾತೆಯನ್ನು ಕ್ಲೋಸ್​ ಮಾಡುವುದು ಹೇಗೆ?


 • ಇಂದಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಹಾಗೂ ಮತ್ತಿತರ ಕಾರಣಗಳಿಂದ ಆಗಾಗ್ಗೆ ತಮ್ಮ ಉದ್ಯೋಗಗಳನ್ನು ಬದಲಾಯಿಸುತ್ತಾರೆ. ಪ್ರತಿಯೊಂದು ಕಂಪನಿಯು ತನ್ನದೇಯಾದ ನಿಯಮ ಹಾಗೂ ಷರತ್ತುಗಳನ್ನು ಹೊಂದಿರುತ್ತದೆ. ಹೊಸ ಕಂಪನಿಗೆ ಕೆಲಸಕ್ಕೆಂದು ಹೋದಾಗ ಅಲ್ಲಿನ ಷರತ್ತುಗಳಿಗೆ ಅನುಗುಣವಾಗಿ ಬ್ಯಾಂಕ್​ ಖಾತೆ ತೆರೆಯಬೇಕಾಗುತ್ತದೆ. ಈ ವೇಳೆ, ನೀವು ಹಿಂದಿನ ಸಂಸ್ಥೆಯಲ್ಲಿ ಬಳಸುತ್ತಿದ್ದ ಸ್ಯಾಲರಿ ಅಕೌಂಟ್​(ಸಂಬಳ ಖಾತೆ) ನಿಷ್ರ್ಕಿಯಗೊಳ್ಳುತ್ತದೆ. ಸಂಬಳ ಬರುವುದು ನಿಂತಾಗ, ಅದು ಸೇವಿಂಗ್ಸ್​ ಅಕೌಂಟ್​(ಉಳಿತಾಯ ಖಾತೆ) ಆಗಿ ಮಾರ್ಪಡುತ್ತದೆ.

 • ಯಾವಾಗ ಖಾತೆಯ ಸ್ವರೂಪ ಬದಲಾಗುತ್ತದೋ, ಆಗ ಬ್ಯಾಂಕಿನ ನಿಯಮಗಳು ಕೂಡ ಬದಲಾಗುತ್ತವೆ. ಈ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತದ ಹಣ ಇಟ್ಟು, ಖಾತೆಯನ್ನು ಜೀವಂತವಾಗಿಡಬೇಕು. ಹೀಗೆ ಮಾಡಲು ನೀವು ವಿಫಲವಾದರೆ, ಬ್ಯಾಂಕ್​ ನಿಮ್ಮ ಖಾತೆಯಲ್ಲಿನ ಹಣವನ್ನು ಕಡಿತಗೊಳಿಸುವ ಮೂಲಕ ದಂಡ ವಿಧಿಸಲು ಪ್ರಾರಂಭಿಸುತ್ತದೆ.

 • ಒಂದಕ್ಕಿಂತ ಹೆಚ್ಚಿನ ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಆದಾಯ ತೆರಿಗೆ ಸಲ್ಲಿಸುವಾಗ(ಐಟಿ ರಿಟನ್​​​) ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ನೀವು ಎಲ್ಲಾ ಖಾತೆಗಳ ಪ್ರತಿಯೊಂದು ವಿವರವನ್ನು ತಪ್ಪದೇ ನೀಡಬೇಕಾಗುತ್ತದೆ. ಐಟಿ ರಿಟನ್​​ ಸಲ್ಲಿಸುವ ವೇಳೆ, ಎಲ್ಲಾ ಅಕೌಂಟ್​​ಗಳ ಸ್ಟೇಟ್​​ಮೆಂಟ್ಸ್​​ನ್ನು ಕೂಡ ನೀಡಬೇಕಾಗುತ್ತದೆ. ಇದು ನಿಮನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುತ್ತದೆ.

 • ನಿಷ್ಕ್ರಿಯ ಖಾತೆಯನ್ನು ಸರಿಯಾಗಿ ಬಳಸದಿದ್ದರೆ ಅದು ನಿಮಗೆ ನಷ್ಟವಾಗುತ್ತದೆ. ಬ್ಯಾಂಕ್​ ನಿಮಗೆ ದಂಡ ವಿಧೀಸುವುದರಿಂದ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ 4 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದರೆ, ಕನಿಷ್ಠ 10 ಸಾವಿರ ಹಣವನ್ನು ಖಾತೆಯಲ್ಲಿ ಇಡಬೇಕಾಗುತ್ತದೆ.

 • ನಿಮ್ಮ ಖಾತೆಯಲ್ಲಿ ಕನಿಷ್ಠ ಹಣವಿದ್ದರೆ, ಬ್ಯಾಂಕ್​ ಶೇ.4ರ ದರದಲ್ಲಿ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಆಗ, ನಿಮಗೆ 1600 ರೂ. ಬಡ್ಡಿ ಹಣ ಸಿಗುತ್ತದೆ.
  ಬ್ಯಾಂಕ್​ ಖಾತೆಯನ್ನು ಕ್ಲೋಸ್​ ಮಾಡಿ, ಮ್ಯೂಚುಯಲ್​ ಫಂಡ್ಸ್​​ನಲ್ಲಿ ನೀವು ಹೂಡಿಕೆ ಮಾಡಿದರೆ, ಬ್ಯಾಂಕ್​ ನಿಮಗೆ ಶೇ.10ರ ದರದಲ್ಲಿ ವಾರ್ಷಿಕ ಬಡ್ಡಿ ನೀಡುತ್ತದೆ.


 ಬ್ಯಾಂಕ್​ ಖಾತೆ ಕ್ಲೋಸ್​ ಮಾಡಿಸಲು ಹೀಗೆ ಮಾಡಿ

 • ಖಾತೆ ನಿಷ್ಕ್ರಿಯಗೊಳಿಸುವ ಅಫ್ಲಿಕೇಶನ್​ನಲ್ಲಿ ಅಲ್ಲಿ ಕೇಳಿರುವ ಸೂಕ್ತ ಮಾಹಿತಿಯನ್ನು ಭರ್ತಿ ಮಾಡಬೇಕು.

 • ಖಾತೆ ಮುಚ್ಚಲು ಕಾರಣ ಏನೆಂದು ನಮೂದಿಸಬೇಕು. ಜಂಟಿ ಖಾತೆಯಾಗಿದ್ದರೆ, ಎಲ್ಲಾ ಖಾತೆದಾರರು ಸಹಿ ಮಾಡಬೇಕು.

 • ನಿಮ್ಮ ಹಣ ವರ್ಗಾಯಿಸಲು ನೀವು ಬಯಸುವ ನಿಮ್ಮ ಖಾತೆಯ ವಿವರಗಳನ್ನು ಒದಗಿಸಬೇಕು.

 • ಖಾತೆಯನ್ನು ಮುಚ್ಚಲು ಖಾತೆದಾರರು ಬ್ಯಾಂಕ್​ಗೆ ಹೋಗಬೇಕು. ಆನ್​ಲೈನ್​ ಮೂಲಕ ಸಾಧ್ಯವಿಲ್ಲ.      


ಅಕೌಂಟ್​​ ಕ್ಲೋಸ್​ ಮಾಡಿಸಲು ಕಟ್ಟಬೇಕಾದ ಶುಲ್ಕ

ಖಾತೆದಾರ ತನ್ನ ಖಾತೆ ತೆರೆದು 14 ದಿನಗಳೊಳಗೆ ಮುಚ್ಚಿದರೆ ಬ್ಯಾಂಕ್​ಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. 1 ವರ್ಷಕ್ಕೆ ತೆರೆದ ನಂತರ 14 ದಿನಗಳ ಅವಧಿಯಲ್ಲಿ ಅದನ್ನು ಮುಚ್ಚಲು ಯಾರಾದರೂ ಬಯಸಿದರೆ, ಅವನು ಖಾತೆ ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ, ನೀವು ಒಂದು ವರ್ಷಕ್ಕಿಂತ ಹಳೆಯದಾದ ಖಾತೆಯನ್ನು ಮುಚ್ಚಿದರೆ ಯಾವುದೇ ಶುಲ್ಕವಿರುವುದಿಲ್ಲ.

ಒದಗಿಸಬೇಕಾದ ದಾಖಲೆಗಳು:

ಖಾತೆ ಮುಚ್ಚುವ ಅಫ್ಲಿಕೇಶನ್​​ ಜೊತೆಗೆ ಬಳಕೆಯಾಗದ ಚೆಕ್ ಬುಕ್ ಮತ್ತು ಡೆಬಿಟ್ ಕಾರ್ಡ್​​ನ್ನು ಬ್ಯಾಂಕ್​ಗೆ ನೀಡಬೇಕು.

ಖಾತೆಯಲ್ಲಿ ಹಣವಿದ್ದರೆ:

ಮುಚ್ಚಬೇಕಾದ ಖಾತೆಯಲ್ಲಿ ಹಣವಿದ್ದರೆ, 20,000 ರೂ. ವರೆಗೆ ಮಾತ್ರ ನಗದು ರೂಪದಲ್ಲಿ ಹಣ ತೆಗೆದುಕೊಳ್ಳಬಹುದು. ಈ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸುವ ಅವಕಾಶವಿದೆ. ಒಂದು ವೇಳೆ ಖಾತೆಯಲ್ಲಿ ದೊಡ್ಡ ಮೊತ್ತದ ಹಣವಿದ್ದರೆ, ಅದನ್ನು ಕ್ಲೋಸ್​ ಮಾಡಿಸುವ  ಮೊದಲು ಮತ್ತೊಂದು ಖಾತೆಗೆ ವರ್ಗಾಯಿಸುವುದು ಉತ್ತಮ.

First published: