ಕಳೆದುಹೋದ ಬೆಕ್ಕು ಹುಡುಕಿಕೊಟ್ಟರೆ, ಲಕ್ಷ ಬಹುಮಾನ; ಶ್ರೀಲಂಕಾ ಮಾಲೀಕನ ಅಳಲು

ಕಳೆದು ಹೋದ ಬೆಕ್ಕನ್ನು ಹುಡುಕಲು ಉಪಾಯವೊಂದನ್ನು ಮಾಡಿರುವ ಶ್ರೀಲಂಕಾದ ವ್ಯಕ್ತಿ ತನ್ನು ಮುದ್ದಿನ ಬೆಕ್ಕನ್ನು ಹುಡುಕಿಕೊಟ್ಟರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

news18-kannada
Updated:September 11, 2019, 3:38 PM IST
ಕಳೆದುಹೋದ ಬೆಕ್ಕು ಹುಡುಕಿಕೊಟ್ಟರೆ, ಲಕ್ಷ ಬಹುಮಾನ; ಶ್ರೀಲಂಕಾ ಮಾಲೀಕನ ಅಳಲು
ಕಿಬಾ ಬೆಕ್ಕು
  • Share this:
ಕೆಲವೊಮ್ಮೆ ತಮ್ಮ ಮನೆಯ ಹಿರಿಯರೋ ಇನ್ಯಾರೋ ಕಾಣೆಯಾದರೂ ಅನೇಕರು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಆದರೆ, ಶ್ರೀಲಂಕಾದ ವ್ಯಕ್ತಿಯೊಬ್ಬರು ತನ್ನ ಮುದ್ದಿನ ಬೆಕ್ಕು ಕಾಣೆಯಾಗಿದ್ದಕ್ಕೆ ಕಂಗಾಲಾಗಿದ್ದಾರೆ. ಮನೆ ತುಂಬ ಲವಲವಿಕೆಯಿಂದ ಓಡಾಡಿಕೊಂಡಿರುತ್ತಿದ್ದ ಬೆಕ್ಕು ನಾಪತ್ತೆಯಾಗಿರುವುದಕ್ಕೆ ತಲೆ ಕೆಡಿಸಿಕೊಂಡಿರುವ ಅವರು ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದಾರೆ. ಆದರೆ, ಬೆಕ್ಕು ಪತ್ತೆಯಾಗದ ಕಾರಣ ಅವರು ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದಾರೆ.

ಕಳೆದು ಹೋದ ಬೆಕ್ಕನ್ನು ಹುಡುಕಲು ಉಪಾಯವೊಂದನ್ನು ಮಾಡಿರುವ ಶ್ರೀಲಂಕಾದ ವ್ಯಕ್ತಿ ತನ್ನು ಮುದ್ದಿನ ಬೆಕ್ಕನ್ನು ಹುಡುಕಿಕೊಟ್ಟರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋದೊಂದಿಗೆ ಪೋಸ್ಟ್​ ಮಾಡಿರುವ ಆ ವ್ಯಕ್ತಿ ಇನ್ನಾದರೂ ತನ್ನ ಬೆಕ್ಕು ವಾಪಾಸ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಲ್ಮೆಟ್​ ಫ್ರೀ; ವಿನೂತನ ಅಭಿಯಾನಕ್ಕೆ ಮುಂದಾದ ಒರಿಸ್ಸಾ ಸರ್ಕಾರ

ಕಿಬಾ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ನೀಡಿದ ಜಾಹೀರಾತು


ಬೆಕ್ಕಿನ ಹೆಸರು ಕಿಬಾ ಎಂದಾಗಿದ್ದು, ಕಾಣೆಯಾದ ಬೆಕ್ಕಿನ ಹುಡುಕಾಟಕ್ಕೆ ಜಾಹೀರಾತು ನೀಡಿದ್ದಾರೆ. ಜಾಹೀರಾತಿನಲ್ಲಿ 2 ವರ್ಷದ ಕಿಬಾ ಪರ್ಷಿಯನ್​ ಬೆಕ್ಕಾಗಿದ್ದು ಗಂಡು ಜಾತಿಗೆ ಸೇರಿದೆ. ಡಬ್ಲ್ಯೂ.ಎ ಸಿಲ್ವಾ ಮಾವತೆ, ವೆಲ್ಲಾವಟ್ಟೆಯಿಂದ 30/08/19 ರಂದು ಕಾಣೆಯಾಗಿದೆ ಎಂದು ಜಾಹಿರಾತನ್ನು ನೀಡಿದ್ದಾರೆ. ಕಿಬಾ ಕಂಡರೆ ಹಿಡಿದು ಕರೆ ಮಾಡಿ ಎಂದು ತಿಳಿಸಿದ್ದಾರೆ.

ಕಿಬಾ ನಮಗೆ ತುಂಬಾ ಅತ್ಯಮೂಲವಾಗಿದೆ. ಕಿಬಾ ಕಾಣೆಯಾದ ದಿನದಿಂದ ಏನನ್ನೋ ಕಳೆದುಕೊಂಡ ಭಾವನೆ ಬರುತ್ತಿದೆ. ದಯಮಾಡಿ ಕಿಬಾ ಬೆಕ್ಕನ್ನು ಹುಡುಕಿ ಕೊಡಿ ಎಂದು ಹೇಳಿದ್ದಾರೆ.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading