ಹಣ ವಹಿವಾಟಿನ ವೇಳೆ ತಪ್ಪು ಆಧಾರ್ ಮಾಹಿತಿ ನೀಡಿದರೆ ತೆರಬೇಕಾಗುತ್ತೆ ಭಾರೀ ದಂಡ!

ದೊಡ್ಡ ಮೊತ್ತದ ಹಣ ವರ್ಗಾವಣೆ ವೇಳೆ ತಪ್ಪು ಆಧಾರ್​ ಸಂಖ್ಯೆ ನಮೂದಿಸಿದರೆ ದಂಡ ವಿಧಿಸುವ ಬಗ್ಗೆಯೂ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಹಾಗಾಗಿ, ಸೆಪ್ಟೆಂಬರ್​ 1ರಿಂದ ಈ ನಿಯಮ ಜಾರಿಗೆ ಬರಲಿದೆ.

Rajesh Duggumane | news18
Updated:July 14, 2019, 9:25 AM IST
ಹಣ ವಹಿವಾಟಿನ ವೇಳೆ ತಪ್ಪು ಆಧಾರ್ ಮಾಹಿತಿ ನೀಡಿದರೆ ತೆರಬೇಕಾಗುತ್ತೆ ಭಾರೀ ದಂಡ!
ಸಾಂದರ್ಭಿಕ ಚಿತ್ರ
  • News18
  • Last Updated: July 14, 2019, 9:25 AM IST
  • Share this:
ನವದೆಹಲಿ (ಜು.14): ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವಾಗ ತಪ್ಪು ಆಧಾರ್​ ಸಂಖ್ಯೆ ನಮೂದಿಸಿದರೆ 10,000 ರೂಪಾಯಿ ದಂಡ ತೆರಬೇಕು! ಹೀಗೊಂದು ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಪಾನ್​ ಕಾರ್ಡ್​ ಇಲ್ಲದವರು ಆಧಾರ್ ಕಾರ್ಡ್​​​ ಮೂಲಕ ಐ-ಟಿ ರಿಟರ್ನ್ಸ್​​ ಸಲ್ಲಿಸಬಹುದು. ಅಲ್ಲದೆ, ಪಾನ್​ ಕಾರ್ಡ್​​ ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆಯೋ ಅಲ್ಲಿ ಆಧಾರ್​ ಕಾರ್ಡ್​​ ಬಳಕೆ ಮಾಡಬಹುದು ಎಂದು ಬಜೆಟ್​ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದರು.

ಇದು ಜಾರಿಗೆ ಬರಲು ತೆರಿಗೆ ಇಲಾಖೆ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕಿದೆ. ಇದರ ಜೊತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ವೇಳೆ ತಪ್ಪು ಆಧಾರ್​ ಸಂಖ್ಯೆ ನಮೂದಿಸಿದರೆ ದಂಡ ವಿಧಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಹಾಗಾಗಿ, ಸೆಪ್ಟೆಂಬರ್​ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ದೇಶದಲ್ಲಿ 120 ಕೋಟಿ ಆಧಾರ್​ ಕಾರ್ಡ್​​ ನೀಡಲಾಗಿದೆ., 41 ಕೋಟಿ ಜನರು ಪಾನ್​ಕಾರ್ಡ್​​ ಹೊಂದಿದ್ದಾರೆ. ಇದರಲ್ಲಿ 22 ಕೋಟಿ ಪಾನ್​ ಕಾರ್ಡ್​​-ಆಧಾರ್​ ಕಾರ್ಡ್​ ಲಿಂಕ್​ ಆಗಿವೆ.

ಇದನ್ನೂ ಓದಿ: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ