News18 India World Cup 2019

ಜಗನ್ ಭರ್ಜರಿ ಗೆಲುವಿನ ಹಿಂದಿನ ಐ-ಪ್ಯಾಕ್ ಶಕ್ತಿ ಪಡೆಯಲು ನಾಯ್ಡು ಪ್ರಯತ್ನ

ಈ ಹಿಂದೆಯೇ 2017ರಲ್ಲಿ ಪ್ರಶಾಂತ್​​ ಕಿಶೋರ್​​ ಜಗನ್​​ ವಿಶೇಷ ರಾಜಕೀಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಈ ಮೂಲಕ ಚಂದ್ರಬಾಬು ನಾಯ್ಡು ಅವರ ವಿರುದ್ಧ ರಣತಂತ್ರ ರೂಪಿಸಲು ಆರಂಭಿಸಿದರು.

Ganesh Nachikethu | news18
Updated:June 14, 2019, 7:10 PM IST
ಜಗನ್ ಭರ್ಜರಿ ಗೆಲುವಿನ ಹಿಂದಿನ ಐ-ಪ್ಯಾಕ್ ಶಕ್ತಿ ಪಡೆಯಲು ನಾಯ್ಡು ಪ್ರಯತ್ನ
ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಪ್ರಶಾಂತ್​​ ಕಿಶೋರ್​​
Ganesh Nachikethu | news18
Updated: June 14, 2019, 7:10 PM IST
ನವದೆಹಲಿ(ಜೂನ್​​.14): ಇತ್ತೀಚೆಗಿನ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಕಂಡಿದ್ದು, ವೈಎಸ್‍ಆರ್ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸಿಎಂ ವೈ.ಎಸ್. ಜಗನ್‍ಮೋಹನ್ ರೆಡ್ಡಿ ನೇತೃತ್ವದಲ್ಲಿ ಎಂಟು ವರ್ಷಗಳ ಹಿಂದೆಯೇ 2011ರಲ್ಲಿ ವೈಎಸ್‍ಆರ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಎಷ್ಟೇ ಪರಿಶ್ರಮ ಪಟ್ಟಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ತಂತ್ರಗಾರಿಕೆಯಿಂದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಜಯಶಾಲಿಯಾಗಿದ್ದಾರೆ.

ಈ ಬೆನ್ನಲೀಗ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೋಲಿಗೆ ಕಾರಣವೇನು? ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಮೀಕ್ಷೆ ನಡೆಸಿದ್ದಾರೆ. ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರ ರೂಪಿಸುವಲ್ಲಿ ಯಾಕೇ ವಿಫಲವಾದೆವು? ಎಂದು ಅವಲೋಕನ ನಡೆಸಿದ್ದಾರೆ. ಟಿಡಿಪಿ ನಾಯಕ ನಾಯ್ಡು ನಡೆಸಿದ ಬಹುತೇಕ ಸಭೆಗಳಲ್ಲಿ ತಮ್ಮ ಸೋಲಿಗೆ ಮತ್ತು ಸಿಎಂ ಜಗನ್​​ ಯಶಸ್ಸಿಗೆ ಐ-ಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸದ್ಯ ಟಿಡಿಪಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಲು ಮುಂದಾಗಿರುವ ನಾಯ್ಡು, ಮುಂದಿನ ಚುನಾವಣೆಗಾಗಿ ತಮ್ಮ ವಿಶೇಷ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದ್ಧಾರೆ ಎಂಬ ಚರ್ಚೆಯೀಗ ಆಂಧ್ರ ರಾಜಕೀಯ ವಲಯದಲ್ಲಿ ಶುರುವಾಗಿದೆ. ಹೇಗಿದ್ದರೂ ವೈ.ಎಸ್​​ ಜಗನ್​​ ಮತ್ತು ಪ್ರಶಾಂತ್​ ಕಿಶೋರ್​​ ನಡುವಿನ ಚುನಾವಣಾ ಒಪ್ಪಂದ ಮುಗಿದಿದೆ. ಹಾಗಾಗಿ ಮುಂದಿನ ಚುನಾವಣೆ ದೃಷ್ಟಿಯಲ್ಲಿ ಪ್ರಶಾಂತ್​ ಕಿಶೋರ್​​ ನೇಮಕ ಮಾಡಿಕೊಂಡರೆ, ಗೆಲವು ನಮ್ಮದೇ ಎಂಬುದು ನಾಯ್ಡು ಲೆಕ್ಕಚಾರ.

ಇದನ್ನೂ ಓದಿ: ನೀತಿ ಆಯೋಗ ಸಭೆಗೆ ಸಿಎಂ ಜಗನ್​​: ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಪಟ್ಟು

ಈ ಹಿಂದೆಯೇ 2017ರಲ್ಲಿ ಪ್ರಶಾಂತ್​​ ಕಿಶೋರ್​​ ಜಗನ್​​ ವಿಶೇಷ ರಾಜಕೀಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಈ ಮೂಲಕ ಚಂದ್ರಬಾಬು ನಾಯ್ಡು ಅವರ ವಿರುದ್ಧ ರಣತಂತ್ರ ರೂಪಿಸಲು ಆರಂಭಿಸಿದರು. ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಲು ರೂಪಿಸಿದ ಹಲವು ಕಾರ್ಯತಂತ್ರಗಳ ಪೈಕಿ ವಿಶೇಷ ವರ್ಗಗಳ ಸ್ಥಾನಮಾನ (ಎಸ್‍ಸಿಎಸ್) ಕೂಡ ಒಂದಾಗಿತ್ತು.

2017 ನವೆಂಬರ್ 6ರಂದು ಆರಂಭವಾದ ‘ಪ್ರಜಾ ಸಂಕಲ್ಪ ಯಾತ್ರಾ’ ಮೂಲಕ ಜಗನ್‍ಮೋಹನ್ ಅವರು ಎಸ್‍ಸಿಎಸ್ ವಿವಾದವನ್ನು ಎತ್ತಿದರು. ಈ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ವಾಗ್ದಾಳಿ ನಡೆಸಿದರು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಎಸ್‍ಸಿಎಸ್ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರು ಮೃದು ಧೋರಣೆ ತೋರಿದರು. ಇದರಿಂದಾಗಿ ಬಿಜೆಪಿ ಕೂಡ ಎಸ್‍ಸಿಎಸ್ ಬೇಡಿಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದ್ದರು.
Loading...

ಜಗನ್‍ಮೋಹನ್ ರೆಡ್ಡಿ ಅವರು, ಆಂಧ್ರ ಪ್ರದೇಶದಾದ್ಯಂತ 3,641 ಕಿ.ಮೀ ಪಾದಯಾತ್ರೆ ನಡೆಸಿದ್ದರು. ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಆಲಿಸಿದ್ದರು. ಜಗನ್ ಅವರು ತಮ್ಮ 14 ತಿಂಗಳ ಸುದೀರ್ಘ ಪಾದಯಾತ್ರೆಯಲ್ಲಿ ಸುಮಾರು 2 ಕೋಟಿ ಜನರನ್ನು ಭೇಟಿ ಮಾಡಿದ್ದರು. ಇದು ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ನೆರವಾಯಿತು. ಅಷ್ಟೇ ಅಲ್ಲದೆ ಲಕ್ಷಾಂತರ ಜನರು ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲ ಜಗನ್‍ಮೋಹನ್ ರೆಡ್ಡಿ ಜನಪ್ರಿಯತೆ ಅರಿತ ಟಿಡಿಪಿ ನಾಯಕರು ರಾಜೀನಾಮೆ ನೀಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಸಿದ್ಧಪಡಿಸಿದ ರಾವಾಲಿ ಜಗನ್ (ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‍ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿಗೂ ಅಧಿಕ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಜಗನ್‍ಮೋಹನ್ ಅವರು ಸಮರ್ಪಕವಾಗಿ ಬಳಸಿಕೊಂಡರು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಿದರು. ಜಗನ್‍ಮೋಹನ್ ಅವರ ಈ ಎಲ್ಲ ಯಶಸ್ವಿ ಪ್ರಚಾರದ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಅಡಗಿತ್ತು.

ಇದನ್ನೂ ಓದಿ: ರೆಡ್ಡಿಯ ಪ್ರತೀಕಾರ, ಆಂಧ್ರದ ಶಾಪ, ಸೋನಿಯಾರ ನಿಂದನೆ: ಜಗನ್​​ ಮೋಹನ್​​​ ಬೆಳೆದ ಕಥೆ ರೋಚಕ

ಇದರ ಫಲವಾಗಿಯೇ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಪರ ಶೇ. 49.9ರಷ್ಟು ಮತದಾನವಾಗಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಉಳಿದಂತೆ ತೆಲುಗು ದೇಶಂ ಪಕ್ಷವು 23 ಹಾಗೂ ಜನಸೇನಾ ಪಾರ್ಟಿ 1 ಕ್ಷೇತ್ರದಲ್ಲಿ ಜಯ ಗಳಿಸಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಶೇ 1.17 ಹಾಗೂ ಬಿಜೆಪಿ ಶೇ. 0.84 ಮತ ಪಡೆದಿದ್ದರೂ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.
------------
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...