ನಾವು ಕಾಶ್ಮೀರ ಗಮನಿಸುತ್ತಿದ್ದೇವೆ ಎಂದು ಚೀನಾ ಹೇಳಿದಾಗ ನಾವೂ ಹಾಂಕಾಂಗ್ ನೋಡುತ್ತಿದ್ದೇವೆ ಎಂದು ಮೋದಿ ಏಕೆ ಹೇಳಲಿಲ್ಲ; ಮನೀಶ್ ತಿವಾರಿ ಪ್ರಶ್ನೆ

ಪ್ರಸ್ತುತ ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ನಾಯಕರ ನಡುವಿನ ಈ ಎರಡನೇ ಶೃಂಗಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

HR Ramesh | news18-kannada
Updated:October 10, 2019, 8:03 PM IST
ನಾವು ಕಾಶ್ಮೀರ ಗಮನಿಸುತ್ತಿದ್ದೇವೆ ಎಂದು ಚೀನಾ ಹೇಳಿದಾಗ ನಾವೂ ಹಾಂಕಾಂಗ್ ನೋಡುತ್ತಿದ್ದೇವೆ ಎಂದು ಮೋದಿ ಏಕೆ ಹೇಳಲಿಲ್ಲ; ಮನೀಶ್ ತಿವಾರಿ ಪ್ರಶ್ನೆ
ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ
HR Ramesh | news18-kannada
Updated: October 10, 2019, 8:03 PM IST
ನವದೆಹಲಿ: ಚೀನಾದ ಅಧ್ಯಕ್ಷ ಕ್ಸಿ-ಜಿನ್​ಪಿಂಗ್ ಅವರು ಕಾಶ್ಮೀರವನ್ನು ಚೀನಾ ಗಮನಿಸುತ್ತಿದೆ ಎಂದು ಹೇಳಿದಾಗ ಪ್ರಧಾನಿ ಮೋದಿ ಅವರು, ಚೀನಾದ ಹಾಂಕಾಂಗ್​ನಲ್ಲಿ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಹತ್ತಿಕ್ಕುತ್ತಿರುವುದನ್ನು ಭಾರತ ಗಮನಿಸುತ್ತಿದೆ ಎಂದು ಏಕೆ ಹೇಳಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಪ್ರಶ್ನೆ ಮಾಡುವ ಮೂಲಕ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ-ಜಿನ್​ಪಿಂಕ್​ ಅವರ ಭಾರತ ಭೇಟಿ ಬಳಿಕ ಮಾತನಾಡಿರುವ ತಿವಾರಿ, ಭಾರತದ ಆಂತರಿಕ ವಿಚಾರದ ಬಗ್ಗೆ ಚೀನಾ ಮೂಗುತೂರಿಸುವುದನ್ನು ತಡೆಗಟ್ಟಲು ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕೆ ಮಾಡಿದರು.


Loading...

 ನಾಳೆ ಭಾರತಕ್ಕೆ ಚೀನಾ ಅಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕ್ಸಿ ಜಿನ್​ಪಿಂಗ್ ಕಳೆದ ವರ್ಷ ಏಪ್ರಿಲ್​ನಲ್ಲಿ ಚೀನಾದ ವುಹಾನ್ ಎಂಬಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮತ್ತೆ ಭೇಟಿಯಾಗಲಿದ್ದಾರೆ. ಅಕ್ಟೋಬರ್ 11 ಮತ್ತು 12 ರಂದು ತಮಿಳುನಾಡಿನಲ್ಲಿ ಈ ಅನೌಪಚಾರಿಕ ಶೃಂಗಸಭೆಗೆ  ನಡೆಯಲಿದೆ. ಪ್ರಸ್ತುತ ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ನಾಯಕರ ನಡುವಿನ ಈ ಎರಡನೇ ಶೃಂಗಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನು ಓದಿ: ಚೆನ್ನೈನಲ್ಲಿ ಅ.11ರಂದು ಮೋದಿ, ಜಿನ್​ಪಿಂಗ್ ಶೃಂಗಸಭೆ; ಕಾಶ್ಮೀರ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ ನಡೆಸುವ ಸಾಧ್ಯತೆ? 

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...