ಮೊಬೈಲ್ ಕವರ್​ ಹಿಂದೆ ತುಳಸಿ ದಳ ಇಟ್ಟುಕೊಂಡರೆ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು; ಬಾಬಾ ರಾಮದೇವ್

ತುಳಸಿ ದಳ ಬಳಸಿ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸುತ್ತಿರುವುದಾಗಿಯೂ ಬಾಬಾ ರಾಮದೇವ್ ಹೇಳಿದರು.

news18-kannada
Updated:November 16, 2019, 9:24 PM IST
ಮೊಬೈಲ್ ಕವರ್​ ಹಿಂದೆ ತುಳಸಿ ದಳ ಇಟ್ಟುಕೊಂಡರೆ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು; ಬಾಬಾ ರಾಮದೇವ್
ಬಾಬಾ ರಾಮದೇವ್
  • Share this:
ಉಡುಪಿ: ಮೊಬೈಲ್ ಕವರ್​ನ ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದರು.

ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಯೋಗ ಶಿಬಿರದಲ್ಲಿ ಪಾಲ್ಗೊಂಡಿರುವ ರಾಮದೇವ್ ಅವರು ರೇಡಿಯೇಷನ್​ನಿಂದ ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್ ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಮನೆಯಲ್ಲಿರುವ ಟಿವಿ, ಲ್ಯಾಪ್​ಟಾಪ್, ಮೊಬೈಲ್, ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ವಿಕಿರಣಗಳನ್ನು ಹೊರಸೂಸುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ತುಳಸಿ ದಳ ಬಳಸಿ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸುತ್ತಿರುವುದಾಗಿಯೂ ಬಾಬಾ ರಾಮದೇವ್ ಹೇಳಿದರು.

ಇದನ್ನು ಓದಿ: ಮಂಡಲ ಪೂಜೆಗಾಗಿ ಇಂದು ಸಂಜೆ ತೆರೆಯಲಿದೆ ಶಬರಿಮಲೆಯ ದೇಗುಲದ ಬಾಗಿಲು

First published: November 16, 2019, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading