ಮುಸ್ಲಿಮರಿಗೆ ಭಾರತ ಸ್ವರ್ಗ; ಇದು ಯಾಕೆ ಇವರಿಗೆ ಕಾಣುತ್ತಿಲ್ಲ?: ಒಐಸಿ ವಿರುದ್ಧ ನಖ್ವಿ ಕಿಡಿ

ಭಾರತದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯದ ಹಕ್ಕುಗಳನ್ನ ರಕ್ಷಿಸಲು ಮತ್ತು ಇಸ್ಲಾಮೋಫೋಬಿಯಾ ಘಟನೆಗಳನ್ನ ನಿಲ್ಲಿಸಲು ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಹೇಳಿತ್ತು.

news18
Updated:April 21, 2020, 4:18 PM IST
ಮುಸ್ಲಿಮರಿಗೆ ಭಾರತ ಸ್ವರ್ಗ; ಇದು ಯಾಕೆ ಇವರಿಗೆ ಕಾಣುತ್ತಿಲ್ಲ?: ಒಐಸಿ ವಿರುದ್ಧ ನಖ್ವಿ ಕಿಡಿ
ಮುಖ್ತರ್ ಅಬ್ಬಾಸ್ ನಖ್ವಿ
  • News18
  • Last Updated: April 21, 2020, 4:18 PM IST
  • Share this:
ನವದೆಹಲಿ(ಏ. 21): ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಇಸ್ಲಾಮೋಫೋಬಿಯಾ ಅಥವಾ ಇಸ್ಲಾಮ್ ವಿರೋಧಿ ಮಾನಸಿಕತೆ ಹೆಚ್ಚುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಕೊರೋನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ಸಭೆಯನ್ನ ಇಟ್ಟುಕೊಂಡು ಮುಸ್ಲಿಮರನ್ನ ನಿಂದಿಸಲಾಗುತ್ತಿದೆ, ಅನುಮಾನದಿಂದ ನೋಡಲಾಗುತ್ತಿದೆ ಎಂದೂ ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಈ ವಿಚಾರವನ್ನು ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿತ್ತು. ಓಐಸಿಯ ಈ ಟೀಕೆಗೆ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ತಿರುಗೇಟು ನೀಡಿದ್ಧಾರೆ.

ಮುಸ್ಲಿಮರು ಭಾರತದಲ್ಲಿ ಸಮೃದ್ಧಿಯಿಂದ ಇದ್ದಾರೆ. ಈ ವಾತಾವರಣಕ್ಕೆ ವಿಷ ತುಂಬುತ್ತಿರುವವರು ಮುಸ್ಲಿಮರ ಹಿತೈಷಿಗಳೆನಿಸುವುದಿಲ್ಲ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ವಿರುದ್ಧ ನಖ್ವಿ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ಭಾರತದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯದ ಹಕ್ಕುಗಳನ್ನ ರಕ್ಷಿಸಲು ಮತ್ತು ಇಸ್ಲಾಮೋಫೋಬಿಯಾ ಘಟನೆಗಳನ್ನ ನಿಲ್ಲಿಸಲು ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ನಖ್ವಿ, ಭಾರತದಲ್ಲಿ ಇಸ್ಲಾಮಾಫೋಬಿಯಾ ಇರುವುದನ್ನು ತಳ್ಳಿಹಾಕಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಕಾಲ್ತೆಗೆಯಲಿರುವ ದಕ್ಷಿಣ ಕೊರಿಯಾದ ಕಂಪನಿಗಳ ಚಿತ್ತ ಭಾರತದತ್ತ?

“ನಾವು ನಮ್ಮ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇವೆ. ಪ್ರಧಾನಿಗಳು ಮಾತನಾಡಿದಾಗೆಲ್ಲಾ ದೇಶದ 130 ಕೋಟಿ ಜನರ ಹಿತ ಮತ್ತು ಹಕ್ಕಿ ಬಗ್ಗೆಯೇ ಹೇಳುತ್ತಾರೆ” ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

“ಇದು ಯಾರಿಗಾದರೂ ಕಾಣಿಸದೇ ಇದ್ದರೆ ಅದು ಅವರ ಸಮಸ್ಯೆ ಅಷ್ಟೇ. ಭಾರತದ ಮುಸ್ಲಿಮರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ವರ್ಗದವರೂ ಸಮೃದ್ಧಿಯಿಂದ ಇದ್ದಾರೆ. ಇಂಥ ವಾತಾವರಣವನ್ನ ಕಲುಷಿತಗೊಳಿಸಲು ಯತ್ನಿಸುತ್ತಿರುವ ಜನರು ಭಾರತೀಯ ಮುಸ್ಲಿಮರ ಸ್ನೇಹಿತರಾಗಿರಲು ಸಾಧ್ಯವಿಲ್ಲ” ಎಂದು ನಖ್ವಿ ಕುಟುಕಿದ್ದಾರೆ.

ಜಾತ್ಯತೀತತೆ ಮತ್ತು ಸೌಹಾರ್ದತೆ ಎಂಬುದು ಪೊಲಿಟಿಕಲ್ ಫ್ಯಾಷನ್ ಅಲ್ಲ. ಅದು ಭಾರತೀಯರಿಗೆ ಪರ್ಫೆಕ್ಟ್ ಪ್ಯಾಷನ್ ಎಂದು ಕೇಂದ್ರ ಸಚಿವರು ತಿಳಿಸಿದ್ಧಾರೆ.ಪಿಟಿಐ ಸುದ್ದಿ ಸಂಸ್ಥೆ ವರದಿ

First published: April 21, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading