Pet Dog Owners Alert: ಶ್ವಾನ ಮಾಲೀಕರೇ ಎಚ್ಚರ.. ಸಾರ್ವಜನಿಕ ಸ್ಥಳದಲ್ಲಿ ನಾಯಿ ಶೌಚ ಮಾಡಿದ್ರೆ ಬೀಳಲಿದೆ ದಂಡ!

ಸಾಕು ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಶೌಚ (Pet Dogs Defecate) ಮಾಡಿದ್ರೆ ಮಾಲೀಕರಿಗೆ ದಂಡ ಹಾಕಲಾಗುವುದು ಎಂದು ನಗರ ಪಾಲಿಕೆ ಆದೇಶ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೋಪಾಲ್: ನಿಮ್ಮ ಮುದ್ದಿನ ಶ್ವಾನವನ್ನು ಹೊರಗೆ ವಾಕ್​​ ಮಾಡಲು ಕರೆದೊಯ್ದಾಗ ನಾಯಿ ರಸ್ತೆಯಲ್ಲಿ ಶೌಚ ಮಾಡಿದ್ರೆ ನೀವು ಭಾರೀ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಸಾಕು ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಶೌಚ (Pet Dogs Defecate) ಮಾಡಿದ್ರೆ ಮಾಲೀಕರಿಗೆ ದಂಡ ಹಾಕಲಾಗುವುದು ಎಂದು ಜಬಲ್ಪುರ ನಗರ ಪಾಲಿಕೆ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಜನರು ತಮ್ಮ ಸಾಕು ನಾಯಿ(Pet Dogs)ಗಳ ಜೊತೆ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕ ಸ್ಥಳಗಳಿಗೆ ಬರುತ್ತಾರೆ. ಇದೇ ವೇಳೆ ಅದೇ ಸ್ಥಳಗಳಲ್ಲಿಯೇ ನಾಯಿಗಳು ಶೌಚ ಮಾಡುತ್ತವೆ. ಇನ್ನೂ ಕೆಲವರು ರಾತ್ರಿ ನಾಯಿಗಳೊಂದಿಗೆ ವಾಕ್ ಬಂದು ಅವುಗಳ ಶೌಚ ಮಾಡಿಸುವ ಮೂಲಕ ಪರಿಸರವನ್ನು ಗಲೀಜು ಮಾಡುತ್ತಾರೆ.

ಒಂದು ಸಾವಿರ ದಂಡ ಫಿಕ್ಸ್..!

ಈ ಸಮಸ್ಯೆಯನ್ನು ಗಮನಿಸಿರುವ ನಗರ ಪಾಲಿಕೆ ಮಹತ್ವದ ಆದೇಶವನ್ನು ಹೊರಡಿಸಿದೆ. ಸ್ವಚ್ಛತಾ ಅಭಿಯಾನವನ್ನು ಗಮನದಲ್ಲಿರಿಸಿ ಆದೇಶ ಹೊರಡಿಸಲಾಗಿದೆ ಎಂದು ಪಾಲಿಕೆ ಹೇಳಿದೆ. ನಗರ ಪಾಲಿಕೆಯ ಅಧಿನಿಯಮ 1956ರ ಪ್ರಕಾರ, ಸಾಕು ಪ್ರಾಣಿಗಳೊಂದಿಗೆ ಸಾರ್ವಜನಿಕ ಸ್ಥಳ (ಗಾರ್ಡನ್, ರಸ್ತೆ, ಬಯಲು ಪ್ರದೇಶ)ಗಳಲ್ಲಿ ತಿರುಗಾಡುವುದು, ಗಲೀಜು ಮಾಡುವುದು ಮತ್ತು ಅಲ್ಲಿಯೇ ಪ್ರಾಣಿ ಗಳ ಮಲ-ಮೂತ್ರ ಮಾಡಿಸುವುದು ನಿರ್ಬಂಧ. ಸಾಕು ನಾಯಿಗಳ ಜೊತೆ ವಾಯು ವಿಹಾರದ ನೆಪದಲ್ಲಿ ಬರುವ ಮಾಲೀಕರಿಗೆ 1 ಸಾವಿರ ರೂ. ದಂಡ ಹಾಕಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಸ್ವಚ್ಛತಾ ನಿರೀಕ್ಷಕರ ಕಣ್ಗಾವಲು..!  

ಜನರು ಪಾಲಿಕೆಯ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪ್ರಕಟನೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಚಚ್ಛತಾ ನಿರೀಕ್ಷಕರನ್ನು ನೇಮಿಸಲು ಪಾಲಿಕೆ ನಿರ್ಧರಿಸಿದೆ. ಪಾರ್ಕ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪಾಲಿಕೆ ಸಿಬ್ಬಂದಿ ಇರಲಿದ್ದಾರೆ.

ಜನತೆಗೆ ಸಲಹೆ ನೀಡಿದ ಪಾಲಿಕೆ ಆಯುಕ್ತರು

ಆದೇಶದ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯಕ್ತ ಸಂದೀಪ್ ಜಿ .ಆರ್, ಕೆಲ ಜನರು ಸಾರ್ವಜನಿಕ ಸ್ಥಳಗಳಲ್ಲಿಯೇ ಸಾಕು ಪ್ರಾಣಿಗಳ ಶೌಚ ಮಾಡಿಸುತ್ತಾರೆ. ಇದರಿಂದ ನಗರದಲ್ಲಿ ಸ್ವಚ್ಛತೆ ಮಾಯವಾಗುತ್ತಿದೆ. ಈ ರೀತಿ ಶೌಚ ಮಾಡಿಸುವದರಿಂದ ಸಾಂಕ್ರಾಮಿಕ ರೋಗಗಳು ಪಸರಿಸುವ ಆತಂಕ ಸಹ ಎದುರಾಗಿದೆ. ನಗರದ ಸ್ವಚ್ಛತೆಗಾಗಿ ಈ ಕಟ್ಟುನಿಟ್ಟಿನ ಆದೇಶ ತರಲಾಗುತ್ತಿದೆ. ಜನರು ತಮ್ಮ ಆರೋಗ್ಯದ ಜೊತೆ ನಗರದ ಸ್ವಚ್ಛತೆ ಬಗ್ಗೆಯೂ ಗಮನ ಕೊಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Girl Stuck In Dress: ಟೈಟ್ ಡ್ರೆಸ್​​​ನಲ್ಲಿ ಸಿಕ್ಕಾಕೊಂಡು ಬಾತ್ ಟಬ್​​ಗೆ ಬಿದ್ದ ಯುವತಿಯ ಕಾಮಿಡಿ ವಿಡಿಯೋ ವೈರಲ್!

ಜನರು ಸಾಕು ನಾಯಿಗಳ ಜೊತೆ ವಾಯು ವಿಹಾರಕ್ಕೆ ಬರಬಾರದು ಎಂದು ಆದೇಶದಲ್ಲಿ ಹೇಳಿಲ್ಲ. ಆದ್ರೆ ಅವುಗಳು ಗಲೀಜು ಮಾಡದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವುಗಳ ಮಲ-ಮೂತ್ರ ಮಾಡಿದ್ದಲ್ಲಿ ಅದರ ರವಾನೆಗಾಗಿ ಪಪ್ಪು ಸ್ಕೂಪ್ಪರ್, ಪಪ್ಪು ಬ್ಯಾಗ್, ವೇಸ್ಟ್ ಕ್ಯಾರಿ ಬ್ಯಾಗ್, ಲಿಟರ್ ಸ್ಕೂರ್ ಜೊತೆಗೆ ತೆಗೆದುಕೊಂಡು ಬರಬೇಕು. ತದನಂತರ ನಿಗದಿತ ಸ್ಥಳದಲ್ಲಿಯೇ ಎಸೆಯಬೇಕು ಎಂದು ಸಲಹೆ ನೀಡಿದ್ದಾರೆ.

ಮಹ್ಮದ್ ರಫೀಕ್ ಕೆ.
Published by:Kavya V
First published: