ಶಾಹಿನ್ ಬಾಗ್​ ಗುಂಡಿನ ದಾಳಿಕೋರ 'ಎಎಪಿ'ಯವನಾಗಿದ್ದರೆ ಆತನಿಗೆ ಎರಡು ಪಟ್ಟು ಶಿಕ್ಷೆ ಕೊಡಿ; ಅರವಿಂದ ಕೇಜ್ರಿವಾಲ್​

ಶಾಹಿನ್ ಬಾಗ್ ಗುಂಡಿನ ದಾಳಿಕೋರನಿಗೂ ಎಎಪಿಗೂ ಸಂಬಂಧ ಇದೆ ಎಂಬ ವಿಚಾರವನ್ನೂ ಅಲ್ಲಗೆಳೆದಿರುವ ಕೇಜ್ರಿವಾಲ್, "ಇದೆಲ್ಲಾ ಅಮಿತ್​ ಶಾ ಅವರ ಕುತಂತ್ರ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಕಪಿಲ್​ ಗುಜ್ಜರ್​​ ಪೊಲೀಸ್​ ವಿಚಾರಣೆಯಲ್ಲಿ ಬಿಜೆಪಿ ಕೈವಾಡವಿದೆ" ಎಂದು ಅವರು ಆರೋಪ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • Share this:
  ದೆಹಲಿ (ಫೆ. 05): ದೆಹಲಿಯ ಶಾಹಿನ್ ಬಾಗ್ ​ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಕಪಿಲ್​ ಗುಜ್ಜರ್​​​ ಹಾಗೂ ಅವರ ತಂದೆ ಆಮ್​ ಆದ್ಮಿ ಪಕ್ಷಕ್ಕೆ ಸೇರಿದವರು ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಆದರೆ, ಇಂದು ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​, "ಶಾಹಿನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿ ಎಎಪಿ ಪಕ್ಷದವನಾಗಿದ್ದರೆ, ಆತನಿಗೆ ಎರಡು ಪಟ್ಟು ಶಿಕ್ಷೆ ಕೊಡಬೇಕು" ಎಂದು ಹೇಳಿದ್ದಾರೆ.

  ದೆಹಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿರುವ  ಅರವಿಂದ್ ಕೇಜ್ರಿವಾಲ್, ಶಾಹಿನ್ ಬಾಗ್ ಶೂಟ್​ಔಟ್​ ಪ್ರಕರಣಕ್ಕೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, "ಈ ರೀತಿಯ ಅಪರಾಧ ಪ್ರಕರಣಗಳಿಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗುತ್ತದೆ. ಒಂದು ವೇಳೆ ದಾಳಿಕೋರ​ ಎಎಪಿ ಸದಸ್ಯನಾಗಿದ್ದರೆ ಆತನಿಗೆ 20 ವರ್ಷ ಜೈಲು ಶಿಕ್ಷೆ ನೀಡಲಿ" ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

  ‘ಶಹೀನ್​​ ಬಾಗ್​​ ಪ್ರತಿಭಟನಾಕಾರರ ತೆರವುಗೊಳಿಸಿ‘: ಸುಪ್ರೀಂಕೋರ್ಟ್​ ಮೊರೆ ಹೋದ ಬಿಜೆಪಿ ನಾಯಕರು

  ಪ್ರಕರಣ ಸಂಬಂಧ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದ ದೆಹಲಿ ಪೊಲೀಸರು, ಶಹೀನಾ ಬಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಕಪಿಲ್ ಗುಜ್ಜರ್​ ಆಮ್​ ಆದ್ಮಿ ಪಕ್ಷಕ್ಕೆ ಸೇರಿದವನು ಎಂದು ತಿಳಿಸಿದ್ದರು. ಅಲ್ಲದೇ ಇದಕ್ಕೆ ಸಾಕ್ಷಿಯಾಗಿ ಆರೋಪಿ ಕಪಿಲ್​ ಗುಜ್ಜರ್​ ಎಎಪಿ ನಾಯಕರಾದ ಸಂಜಯ್​ ಸಿಂಗ್, ಅತಿಶಿ​ ಹಾಗೂ​ ಮತ್ತಿತರರ ಜೊತೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಪೊಲೀಸರ ಈ ಹೇಳಿಕೆಯನ್ನು ಕೇಜ್ರಿವಾಲ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

  ಇತ್ತೀಚೆಗೆ ಸಿಎಂ ಅರವಿಂದ್​ ಕೇಜ್ರಿವಾಲ್ ದೆಹಲಿ ಚುನಾವಣೆ ಸಂಬಂಧ ಯಾವುದೇ ಚರ್ಚೆಗೆ ಸಿದ್ದ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಬಹಿರಂಗ ಸವಾಲು ಹಾಕಿದ್ದರು.
  "ನಾನು ಅಮಿತ್ ಶಾ ಜೊತೆ ಯಾವುದೇ ಚರ್ಚೆಗೆ ಸಿದ್ದನಿದ್ದೇನೆ. ದೆಹಲಿಯ ಜನ ತಾವೇಕೆ ಬಿಜೆಪಿಗೆ ಮತ ಹಾಕಬೇಕು? ಎಂಬುದನ್ನು ತಿಳಿದುಕೊಳ್ಳಬೇಕು," ಎಂದು ಹೇಳಿದ್ದರು.

  ಶಾಹಿನ್ ಬಾಗ್ ಗುಂಡಿನ ದಾಳಿಕೋರನಿಗೂ ಎಎಪಿಗೂ ಸಂಬಂಧ ಇದೆ ಎಂಬ ವಿಚಾರವನ್ನೂ ಅಲ್ಲಗೆಳೆದಿರುವ ಕೇಜ್ರಿವಾಲ್, "ಇದೆಲ್ಲಾ ಅಮಿತ್​ ಶಾ ಅವರ ಕುತಂತ್ರ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಕಪಿಲ್​ ಗುಜ್ಜರ್​​ ಪೊಲೀಸ್​ ವಿಚಾರಣೆಯಲ್ಲಿ ಬಿಜೆಪಿ ಕೈವಾಡವಿದೆ" ಎಂದು ಅವರು ಆರೋಪ ಮಾಡಿದ್ದಾರೆ.

  ಶಹೀನ್​ಬಾಗ್ ಗುಂಡಿನ ದಾಳಿಕೋರ ಗುಜ್ಜರ್, ಆತನ ತಂದೆ ಕಳೆದ ವರ್ಷ ಎಎಪಿ ಸೇರ್ಪಡೆಗೊಂಡಿದ್ದರು; ದೆಹಲಿ ಪೊಲೀಸರು

  "ವಿಚಾರಣೆ ವೇಳೆ ಕಪಿಲ್ ಮತ್ತು ಆತನ ತಂದೆ ಕಳೆದ ವರ್ಷ ಎಎಪಿಗೆ ಸೇರ್ಪಡೆಗೊಂಡಿದ್ದ ಫೋಟೋಗಳು ಆತನ ಮೊಬೈಲ್​ನಲ್ಲಿ ಪತ್ತೆಯಾಗಿವೆ. ಆತ ಅದನ್ನು ಈಗಾಗಲೇ ಬಹಿರಂಗಪಡಿಸಿದ್ದಾನೆ. ಪ್ರಕರಣ ಸಂಬಂಧ ಇನ್ನೂ ಎರಡು ದಿನಗಳ ಕಾಲ ವಿಚಾರಣೆ ನಡೆಸಲಾಗುವುದು" ಎಂದು ದೆಹಲಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಡಿಯೋ ತಿಳಿಸಿದ್ದಾರೆ.
  First published: