ಭಾರತದ ವಿಮಾನಗಳಿಗೆ ಪಾಕ್ ತನ್ನ ವಾಯುಪ್ರದೇಶ ನಿರ್ಬಂಧಿಸಿದರೆ ಅದು ಅವರಿಗೆ ಸಮಸ್ಯೆ; ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ

ಮಾರ್ಚ್​ನಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಎಲ್ಲ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿತು. ಆದರೆ, ಭಾರತದ ವಿಮಾನಗಳಿಗೆ ನಿರ್ಬಂಧ ಮುಂದುವರೆಸಿತ್ತು. ಹೀಗಾಗಿ ಪಾಕಿಸ್ತಾನದ ಮೇಲೆ ಭಾರತದ ವಿಮಾನಗಳು ಹಾರುವಂತಿರಲಿಲ್ಲ.

HR Ramesh | news18
Updated:June 24, 2019, 4:23 PM IST
ಭಾರತದ ವಿಮಾನಗಳಿಗೆ ಪಾಕ್ ತನ್ನ ವಾಯುಪ್ರದೇಶ ನಿರ್ಬಂಧಿಸಿದರೆ ಅದು ಅವರಿಗೆ ಸಮಸ್ಯೆ; ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ
ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ
  • News18
  • Last Updated: June 24, 2019, 4:23 PM IST
  • Share this:
ಗ್ವಾಲಿಯರ್: ಪಾಕಿಸ್ತಾನ ತನ್ನ ವಾಯುಯಾನ ಪ್ರದೇಶವನ್ನು ಮುಚ್ಚಿದರೆ ಅದು ಪಾಕಿಸ್ತಾನಕ್ಕೆ ತೊಂದರೆಯಾಗಲಿದೆ. ಭಾರತೀಯ ವಾಯುಪಡೆ ಯಾವುದೇ ಕಾರಣಕ್ಕೂ ತನ್ನ ದೇಶದಲ್ಲಿ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನಕ್ಕೆ ನಿರ್ಬಂಧಿಸಿಲ್ಲ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವಾ ಹೇಳಿದ್ದಾರೆ.

ಅವರು (ಪಾಕಿಸ್ತಾನ) ತನ್ನ ವಾಯುಪ್ರದೇಶವನ್ನು ಮುಚ್ಚಿರುವುದು ಅವರಿಗೆ ಸಮಸ್ಯೆ ತಂದೊಡ್ಡಲಿದೆ. ನಮ್ಮ ಆರ್ಥಿಕತೆ ಸುಭದ್ರವಾಗಿದೆ. ಮತ್ತು ವಾಯು ಸಂಚಾರ ಪ್ರಮುಖವಾದ ಭಾಗ. ವಾಯುಪಡೆ ಯಾವುದೇ ಕಾರಣಕ್ಕೂ ನಾಗರಿಕ ವಿಮಾನಗಳ ಹಾರಾಟಕ್ಕೆ ತಡೆಹಾಕಿಲ್ಲ ಎಂಬುದನ್ನು ನೀವು ಗಮನಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾರತದ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಹಾರದಂತೆ ವಿಧಿಸಿರುವ ನಿರ್ಬಂಧವನ್ನು ಜೂನ್​ 28ರವರೆಗೆ ವಿಸ್ತರಿಸಿದೆ. ಫೆಬ್ರವರಿ 26ರಂದು ಬಾಲಾಕೋಟ್​ನಲ್ಲಿದ್ದ ಜೈಷ್​-ಎ-ಮೊಹಮ್ಮದ್​ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ಏರ್​ ಸ್ಟ್ರೈಕ್​ ನಡೆಸಿತ್ತು. ಆನಂತರ ಭಾರತದ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದಲ್ಲಿ ಹಾರದಂತೆ ಪಾಕ್ ನಿರ್ಬಂಧ ವಿಧಿಸಿತ್ತು.

ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್-ಎ-ಮೊಹಮ್ಮದ್​ ಸಂಘಟನೆಯ ಉಗ್ರ ಸಿಆರ್​ಪಿಎಫ್​ ವಾಹನ ಸ್ಫೋಟಿಸಿ, 40 ಜನ ಸಿಆರ್​ಪಿಎಫ್​ ಯೋಧರ ಸಾವಿಗೆ ಕಾರಣನಾಗಿದ್ದ. ಇದರ ಪ್ರತೀಕಾರವಾಗಿ ಭಾರತ ಬಾಲಾಕೋಟ್​ ಮೇಲೆ ವಾಯು ದಾಳಿ ನಡೆಸಿತ್ತು.

ಮಾರ್ಚ್​ನಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಎಲ್ಲ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿತು. ಆದರೆ, ಭಾರತದ ವಿಮಾನಗಳಿಗೆ ನಿರ್ಬಂಧ ಮುಂದುವರೆಸಿತ್ತು. ಹೀಗಾಗಿ ಪಾಕಿಸ್ತಾನದ ಮೇಲೆ ಭಾರತದ ವಿಮಾನಗಳು ಹಾರುವಂತಿರಲಿಲ್ಲ. ಇದರಿಂದ ಯೂರೋಪ್​ನಿಂದ ದಕ್ಷಿಣ ಏಷ್ಯಾ ನಡುವೆ ಸಂಚರಿಸುವ ವಿಮಾನಗಳಿಗೆ ತೊಂದರೆಯಾಗಿತ್ತು.

ಇದನ್ನು ಓದಿ: ಬಾಲಾಕೋಟ್​ ದಾಳಿಯ ಸಾಕ್ಷಿ ಕೇಳುವುದು ಪಾಕಿಸ್ತಾನಕ್ಕೆ ಬೆಂಬಲಿಸಿದಂತೆ; ಪ್ರಧಾನಿ ಮೋದಿ

ಇದೇ ವರ್ಷದ ಫೆಬ್ರವರಿ 27ರಂದು ನಾವು ಕೇವಲ ಶ್ರೀನಗರ ವಾಯುಪ್ರದೇಶವನ್ನು ನಿಲ್ಲಿಸಿದ್ದೆವು. ಅದು ಕೇವಲ ಎರಡು ಮೂರು ಗಂಟೆಗಳು ಮಾತ್ರ. ಪಾಕಿಸ್ತಾನ ಮತ್ತು ಭಾರತದ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಾವು ನಾಗರಿಕ ವಿಮಾನಗಳ ಮೇಲೆ ಏರಲಿಲ್ಲ. ಏಕೆಂದರೆ, ನಮ್ಮ ಆರ್ಥಿಕತೆ ಬೃಹತ್​ ಮಟ್ಟದಲ್ಲಿದೆ ಮತ್ತು ಅವರಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಧನೋವಾ ನೆನಪಿಸಿದರು.ನಮ್ಮ ದಾಳಿಯ ಉದ್ದೇಶ ಯಾವಾಗಲು ನಮ್ಮ ಸಾಮರ್ಥ್ಯ ಮತ್ತು  ಪರಿಹಾರಾರ್ಥವಾಗಿತ್ತು. ಯಾರು ನಮಗೆ ಹೊಡೆದರೋ ಅವರಿಗೆ ನಮ್ಮ ಸಂದೇಶ ತಿಳಿಸಬೇಕಿತ್ತು ಎಂದು ಬಾಲಾಕೋರ್ಟ್​ ವಾಯುದಾಳಿಯನ್ನು ಸಮರ್ಥಿಸಿಕೊಂಡರು.

First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ