AICC: ರಾಹುಲ್ ಒಪ್ಪದಿದ್ದರೆ ಮುಂದಿನ ಕಾಂಗ್ರೆಸ್​ ಅಧ್ಯಕ್ಷ ಯಾರು? ಕೈ ಸಾರಥಿಯಾಗುವ ರೇಸ್​ನಲ್ಲಿ ದಿಗ್ಗಜ ನಾಯಕರು!

ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್‌ನ ಅಧಿಕಾರಕ್ಕೇರುತ್ತಾರಾ ಎಂಬ ಕುತೂಹಲದ ನಡುವೆ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವು ಶೀಘ್ರದಲ್ಲೇ ತನ್ನ ಬಹುನಿರೀಕ್ಷಿತ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದ ರಾಹುಲ್ ಮತ್ತೆ ಅದನ್ನು ಸ್ವೀಕರಿಸುವ ಒತ್ತಡ ಎದುರಿಸುತ್ತಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ(ಆ.19): ಕಾಂಗ್ರೆಸ್ ನ ಮುಂದಿನ ಅಧ್ಯಕ್ಷರು (AICC President) ಯಾರಾಗುತ್ತಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿವೆ. ಒಂದೆಡೆ ರಾಹುಲ್ ಗಾಂಧಿ (Rahul Gandhi) ಮತ್ತೆ ಕಾಂಗ್ರೆಸ್‌ನ ಅಧಿಕಾರವನ್ನು ವಹಿಸಿಕೊಳ್ಳುತ್ತಾರಾ ಎಂಬ ಕುತೂಹಲವಾದರೆ, ಮತ್ತೊಂದೆಡೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವು ಶೀಘ್ರದಲ್ಲೇ ತನ್ನ ಬಹುನಿರೀಕ್ಷಿತ ಅಧ್ಯಕ್ಷರನ್ನು ಯಾವಾಗ ಆಯ್ಕೆ ಮಾಡುತ್ತೆ ಎಂಬ ಪ್ರಶ್ನೆ. ಇವೆಲ್ಲದರ ನಡುವೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಬಿಟ್ಟು ಹೋಗಿದ್ದ ಹುದ್ದೆಯನ್ನು ಮತ್ತೆ ಸ್ವೀಕರಿಸುವ ಒತ್ತಡದ ರಾಹುಲ್ ಮೇಲಿದೆ.

ಒಂದೆಡೆ ನಿಷ್ಠಾವಂತರು ಹಾಗೂ ಪಕ್ಷದ ಹಿರಿಯ ನಾಯಕರು ಮತ್ತೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಯನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಪಕ್ಷಕ್ಕೆ ಸ್ಥಿರತೆ ಒದಗಿಸಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರ ಮನವೊಲಿಸಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ 2019 ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ ಎಂಬುವುದೂ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ: Rahul Gandhi: ಟ್ವಿಟ್ಟರ್ ಫಾಲೋವರ್ಸ್ ಕಡಿಮೆ ಆಗ್ತಿರೋದಕ್ಕೆ ಕಾರಣ ಮೋದಿ, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಪತ್ರ!

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆಚ್ಚಿನ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಅಂತಿಮವಾಗಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಬಯಸುತ್ತಾರೆ. ಪಕ್ಷದ ನಾಯಕತ್ವದ ಸಮಸ್ಯೆಯನ್ನು ಸೂಕ್ತವಾಗಿ ನಿಭಾಯಿಸುವುದು ಕಾಂಗ್ರೆಸ್‌ಗೆ ಮಾತ್ರವಲ್ಲದೆ ಪ್ರತಿಪಕ್ಷಗಳ ಬಿಜೆಪಿ ವಿರೋಧಿ ರಂಗದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ 2024ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷದ ಪಾಳಯದಲ್ಲಿ ಪ್ರಧಾನಿ ಹುದ್ದೆಗೆ ಅಭ್ಯರ್ಥಿಗಳ ಸಂಖ್ಯೆ ಮತ್ತೆ ಹೆಚ್ಚಾಗತೊಡಗಿದೆ ಎಂಬುವುದೂ ಗಮನಿಸಬೇಕಾದ ವಿಚಾರ.

ಸೋನಿಯಾ ಗಾಂಧಿಯೇ ಪಕ್ಷದ ಮುಖ್ಯಸ್ಥರಾಗಿ ಉಳಿಯುವ ಸಾಧ್ಯತೆ

ಆದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಒಪ್ಪದಿದ್ದರೆ, ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುವ ಸಾಧ್ಯತೆಯಿದೆ ಅಥವಾ ಗಾಂಧಿ ಕುಟುಂಬಕ್ಕೆ ಹತ್ತಿರವಿರುವ ಮತ್ತೊಬ್ಬ ಹಿರಿಯ ನಾಯಕ ಅಧಿಕಾರ ವಹಿಸಿಕೊಳ್ಳಬಹುದೆನ್ನಲಾಗಿದೆ. ಮೂಲಗಳ ಅನ್ವಯ, ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದ ಭಿನ್ನಮತೀಯರು ಸೇರಿದಂತೆ ಕೆಲವು ನಾಯಕರು ಸಂಪರ್ಕಿಸಿದ್ದಾರೆನ್ನಲಾಗಿದೆ. ಆದರೆ ಅವರು ತಾನು 4 ವರ್ಷಗಳ ಕಾಲ ಕೆಲಸ ಮಾಡಿದ ನಂತರ ರಾಜ್ಯವನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಹಿರಿಯ ನಾಯಕರಾಗಿ, ಕಮಲ್ ನಾಥ್ ಅವರು ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದಾರೆ ಮತ್ತು ಪಕ್ಷದ ಇತರ ನಾಯಕರೂ ಅವರನ್ನು ಸ್ವೀಕರಿಸಿದ್ದಾರೆ.

राहुल गांधी नहीं माने तो कौन होगा अगला कांग्रेस अध्यक्ष? अशोक गहलोत के अलावा भी हैं कई दावेदार

ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾದರೆ ದಲಿತ ನಾಯಕರೇ ಆಯ್ಕೆಯಾಗುತ್ತಾರೆ.

ಗಾಂಧಿ ಕುಟುಂಬದ ಹೊರಗಿನವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಬೇಕಾದರೆ ಹಿರಿಯ ದಲಿತ ನಾಯಕರೊಬ್ಬರು ಆಯ್ಕೆಯಾಗಬಹುದು ಎಂದು ಕೆಲವರು ಹೇಳುತ್ತಾರೆ. ಇದರಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸ್ಪರ್ಧೆಗೂ ತೆರೆ ಬೀಳುತ್ತದೆ. ಇನ್ನು ಈ ರೇಸ್​​ನಲ್ಲಿ ಕೇಂದ್ರದ ಮಾಜಿ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಹೆಸರು ಚರ್ಚೆಗೆ ಬಂದಿದೆ ಎಂದು ಪಕ್ಷದ ಒಳಗಿನವರು ಹೇಳುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್ ಹೆಸರುಗಳ ಬಗ್ಗೆಯೂ ಊಹಾಪೋಹಗಳಿವೆ. ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: Rahul Gandhi Tweet: ಪಠ್ಯ ಪರಿಷ್ಕರಣೆ ಲೋಪ: ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟ ರಾಗಾ

ಅಶೋಕ್ ಗೆಹ್ಲೋಟ್ ಹೊರತಾಗಿ ಈ ಕಾಂಗ್ರೆಸ್ ನಾಯಕರ ಹೆಸರುಗಳೂ ಚರ್ಚೆ

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತೊಮ್ಮೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದ್ದು, ಕೆಲವರು ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಸ್ವಾತಂತ್ರ ದಿನದಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ಬಂದ ಹಿರಿಯ ನಾಯಕಿ ಅಂಬಿಕಾ ಸೋನಿ ಅವರ ಆಯ್ಕೆಯ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಅದರಲ್ಲಿ ಭವಿಷ್ಯದ ಬಗ್ಗೆ ಏನಾದರೂ ಸಂದೇಶ ಅಡಗಿದೆಯೇ ಎಂಬ ಕುತೂಹಲ ಜನರಲ್ಲಿದೆ. ಆದರೆ, ಕಾಂಗ್ರೆಸ್ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಹಿರಿಯ ನಾಯಕರೊಬ್ಬರು ಈ ಕೆಲಸವನ್ನು ನಿಯಮಿತವಾಗಿ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಕೊರೋನಾ ಪಾಸಿಟಿವ್ ಎಂಬ ಕಾರಣಕ್ಕೆ ಸಮಾರಂಭದಲ್ಲಿ ಸೋನಿಯಾ ಗಾಂಧಿ ಗೈರಾಗಿದ್ದರಿಂದ ಅಂಬಿಕಾ ಸೋನಿ ಧ್ವಜಾರೋಹಣ ನೆರವೇರಿಸಿದರು ಎನ್ನಲಾಗಿದೆ.
Published by:Precilla Olivia Dias
First published: