ಜೆಎನ್​​ಯು ಇಲ್ಲದೆ ಹೋಗಿದ್ರೆ ನಾನಿಂದು ಜವಾನ: ಫೀಸ್​​ ಹೈಕ್​​ ಪ್ರಸ್ತಾಪದ ಬೆನ್ನಲ್ಲೇ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡ ವಿದ್ಯಾರ್ಥಿ

ಈಗಾಗಲೇ ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾವವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

news18-kannada
Updated:November 13, 2019, 3:03 PM IST
ಜೆಎನ್​​ಯು ಇಲ್ಲದೆ ಹೋಗಿದ್ರೆ ನಾನಿಂದು ಜವಾನ: ಫೀಸ್​​ ಹೈಕ್​​ ಪ್ರಸ್ತಾಪದ ಬೆನ್ನಲ್ಲೇ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡ ವಿದ್ಯಾರ್ಥಿ
ಜೆಎನ್​​ಯು ಇಲ್ಲದೆ ಹೋಗಿದ್ರೆ ನಾನಿಂದು ಜವಾನ: ಫೀಸ್​​ ಹೈಕ್​​ ಪ್ರಸ್ತಾಪದ ಬೆನ್ನಲ್ಲೇ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡ ವಿದ್ಯಾರ್ಥಿ
  • Share this:
ನವದೆಹಲಿ(ನ.13): ರಮೇಶ್​​ ಕುಮಾರ್​​(22) ಪ್ರತಿಷ್ಠಿತ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ. ಜಾರ್ಖಂಡ್ ಮೂಲದ ಈ ವಿದ್ಯಾರ್ಥಿ ಬಡ ಕುಟುಂಬದಿಂದ ಬಂದವ. ಸದ್ಯ ರಮೇಶ್​​​ ಜೆಎನ್​​​ಯು ವಿವಿಯ ಸ್ಕೂಲ್ ಆಫ್ ಇಂಟರ್​​ನ್ಯಾಷನಲ್ ಸ್ಟಡೀಸ್ ಡಿಪಾರ್ಟ್​ಮೆಂಟ್​​ನ ವಿದ್ಯಾರ್ಥಿಯಾಗಿದ್ದಾರೆ. ಓದು ಮಗಿಸಿ 20 ಸಾವಿರ ರೂ. ದುಡಿಮೆ ಮಾಡಬೇಕು ಎಂಬ ಉದ್ದೇಶವೂ ಹೊಂದಿದ್ದಾರೆ. ಕೇವಲ 20 ಸಾವಿರ ರೂ. ಸಂಪಾದನೆ ಮಾಡಿದ್ರೆ ಸಾಕು ತನ್ನ ಮನೆಯ ಎಲ್ಲಾ ಸಮಸ್ಯೆಯೂ ಬಗೆಹರಿಯಲಿದೆ ಎಂದು ಭಾವಿಸಿರುವ ಈತ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಎಕ್ಸಾಮ್ಸ್​​ ಕೂಡ ಪಾಸ್​​ ಮಾಡಿದ್ಧಾರೆ. ಆದರೀಗ ಇಂತಹ ಬಡ ವಿದ್ಯಾರ್ಥಿ ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾಪದ ಬಗ್ಗೆ ನ್ಯೂಸ್​​​-18 ಕನ್ನಡದೊಂದಿಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್​​​ನ ಬಡ ಕುಟುಂಬದಿಂದ ಬಂದ ರಮೇಶ್​​ ಕುಮಾರ್, ಪೋಷಕರ ಕಷ್ಟ ನೋಡಲಾಗದೇ ತನ್ನ ಉನ್ನತ ವ್ಯಾಸಂಗ ಮಾಡದಿರಲು ಮುಂದಾಗಿದ್ದ. ಉನ್ನತ ವ್ಯಾಸಂಗ ಮಾಡದೆ ಯಾವುದಾದರೂ ಕಂಪನಿಯಲ್ಲಿ ಇಪತ್ತು ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಬೇಕು. ಹಾಗೆಯೇ ತನಗೆ ಬಂದ 20 ಸಾವಿರ ರೂ. ಸಂಬಳದಲ್ಲಿ ಕುಟುಂಬವನ್ನು ಪೋಷಿಸಬೇಕೆಂದು ಉದ್ದೇಶಿಸಿದ್ದ. ಆದರೆ, ಜಾರ್ಖಂಡ್​​ನ ಕ್ಸೇವಿಯಸ್​​​ ಕಾಲೇಜಿನಲ್ಲಿ ಓದುತ್ತಿರುವಾಗಲೇ ರಮೇಶ್​​ ಕುಮಾರ್​​ಗೆ ತನ್ನ ಫ್ರೊಪೆಸರ್​​​ ಉನ್ನತ ವ್ಯಾಸಂಗ ಮಾಡುವಂತೆ ಮನವರಿಕೆ ಮಾಡಿದರು. ಅಲ್ಲದೇ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮಾಡಲು ತನ್ನ ಹಳೆದ ಜೆಎನ್​​ಯು ವಿವಿಗೆ ಸೇರಲು ಸಲಹೆ ನೀಡಿದರು. ಅದಕ್ಕೆಂದಲೇ ಜಾರ್ಖಂಡ್​​ನ ಪ್ರೀಮಿಯರ್​​​ ಎಜುಕೇಷನಲ್​​​ ಸಂಸ್ಥೆ ಮೂಲಕ ಜೆಎನ್​​ಯು ಪ್ರವೇಶ ಪರೀಕ್ಷೆ ಕ್ಲಿಯರ್​​ ಮಾಡುವಂತೆ ಮಾಡಿದರು. ಕೊನೆಗೂ ರಮೇಶ್​ ಮನೆಯಲ್ಲಿ ಕೂತು ಓದಿ ಜೆಎನ್​​ಯು ಶೈಕ್ಷಣಿಕ ಸಾಲಿನ ಪ್ರವೇಶ ಪರೀಕ್ಷೆ ಪಾಸ್​​ ಮಾಡಿದ. ಬಳಿಕ ಜೆಎನ್​​​ಯು ವಿವಿಯ ಸ್ಕೂಲ್ ಆಫ್ ಇಂಟರ್​​ನ್ಯಾಷನಲ್ ಸ್ಟಡೀಸ್ ಡಿಪಾರ್ಟ್​ಮೆಂಟ್​​ನಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದುಕೊಂಡ.

ಇಂದು ನಾನು ಹಳೆ ರಮೇಶ್​ ಕುಮಾರ್​​ ಅಲ್ಲವೇ ಅಲ್ಲ. ಜೆಎನ್​​ಯು ವಿವಿಯಲ್ಲಿ ನಾನು ಒಂದು ವರ್ಷದ ಬಳಿಕ ಸುಲಲಿತವಾಗಿ ಇಂಗ್ಲೀಷ್​ ಮಾತಾಡುತ್ತೇನೆ. ನನಗೆ ಜಾಗತಿಕ ರಾಜಕಾರಣವೆಲ್ಲಾ ಅರ್ಥವಾಗುತ್ತಿದೆ. ಆದರೀಗ ನಾನು ಮತ್ತೆ ನನ್ನ ವಿದ್ಯಾಭ್ಯಾಸ ಜೆಎನ್​​ಯು ವಿವಿಯಲ್ಲಿ ಮುಂದುವರೆಸಲು ಸಾಧ್ಯವೋ ಇಲ್ಲವೋ ಎಂದು ಗೊತ್ತಿಲ್ಲ. ಈ ವಿವಿಯ ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ನನ್ನ ಕನಸನ್ನು ನುಚ್ಚು ನೂರು ಮಾಡಲಿದೆ. ನನ್ನ ಕುಟುಂಬ ನನ್ನ ಓದಿಗೆ ಅಷ್ಟು ಮೊತ್ತದ ಹಣ ಭರಿಸಲು ಸಾಧ್ಯವೇ ಇಲ್ಲ. ಜೆಎನ್​​ಯು ವಿವಿಯಲ್ಲಿ ಅಷ್ಟು ದುಡ್ಡು ಕೊಟ್ಟು ಓದುವುದಕ್ಕಿಂತಲೂ ಎಲ್ಲಾದರೂ 20 ಸಾವಿರ ಸಂಬಳ ಸಿಗುವ ಗುಮಾಸ್ತ(ಪಿಯೋನ್​​​)​​ ಕೆಲಸಕ್ಕೆ ಹೋಗು ಎನ್ನುತ್ತಿದ್ದಾರೆ ಎಂದು ರಮೇಶ್​​ ಕುಮಾರ್​​ ನ್ಯೂಸ್​​-18 ಜತೆಗೆ ತಮ್ಮ ಅಳಲು ತೋಡಿಕೊಂಡರು.

ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಕಾರಣದಿಂದಾಗಿ ರಮೇಶ್​​ಗೆ ಈಗ ತನ್ನ ಭವಿಷ್ಯದ ಬಗ್ಗೆ ಭರವಸೆ ಇಲ್ಲದಂತಾಗಿದೆ. ಹಾಸ್ಟೆಲ್ ನಿಯಮಾವಳಿಯಂತೆ ಸೇವಾ ಶುಲ್ಕ 1700, ಮೆಸ್​​ ಸೇರಿದಂತೆ ಸೆಕ್ಯೂರಿಟಿ ಬಿಲ್​​​ 12 ಸಾವಿರ ಕಟ್ಟುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: ವಿದ್ಯಾರ್ಥಿ ವಿರೋಧಿ ನೀತಿ ವಿರುದ್ಧ ಜೆಎನ್​ಯುನಲ್ಲಿ ಭುಗಿಲೆದ್ದ ಪ್ರತಿಭಟನೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

ಸದ್ಯ ಸಿಂಗಲ್​​ ಸೀಟರ್​​​​ ರೂಮ್​​ನ ತಿಂಗಳ ಬಿಲ್​ 20 ರೂ.ನಿಂದ 600 ರೂ.ಗೆ, ಡಬಲ್​​ ಸೀಟರ್​​ ರೂಮ್​​ ಬಿಲ್​​​​ 10 ರೂ.ನಿಂದ 300 ರೂ.ಗೆ ಹೆಚ್ಚಳವಾಗಿದೆ. ಶುಲ್ಕದಲ್ಲಿ ಹಿಂದಿನದ್ದಕ್ಕಿಂತ ಶೇ. 999ರಷ್ಟು ಹೆಚ್ಚಳವಾಗಿದೆ. ಜೆಎನ್​ಯುನಲ್ಲಿರುವ ಶೇ. 40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕಡಿಮೆ ಆದಾಯವಿರುವ ಕುಟುಂಬದಿಂದ ಬಂದವರಾಗಿದ್ದಾರೆ.

ನನ್ನ ತಂದೆ ಡ್ರೈವರ್​​, ವಿದ್ಯಾಭ್ಯಾಸಕ್ಕೆ ಇಷ್ಟು ಹಣ ನೀಡಲು ಸಾಧ್ಯವಿಲ್ಲ. ಹಾಗೆಯೇ ನನ್ನ ಎಲ್ಲಿಂದ ಬಂದೆನೋ ಅಲ್ಲಿಗೆ ವಾಪಸ್ಸು ಹೋಗಲು ಮನಸ್ಸಿಲ್ಲ ಎಂದರು ರಮೇಶ್​​.ಜೆಎನ್​​ಯು ಉಪ ಕುಲಪತಿ ಎಂ ಜಗದೀಶ್​ ಕುಮಾರ್​​​​ ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳಂತೆ(ಐಐಟಿ) ನಮ್ಮಲ್ಲೂ ಫೀಸ್​​ ಹೈಕ್​​(ಶುಲ್ಕ ಹೆಚ್ಚಳ) ಮಾಡಲು ಯತ್ನಿಸುತ್ತಿದ್ದಾರೆ. ಇದರಿಂದ ಬಡವರು ಶಿಕ್ಷಣ ವಂಚಿತರಾಗಬೇಕಾಗುತ್ತದೆ. ಶಿಕ್ಷಣ ವಂಚಿತರಾಗುವುದೆಂದರೆ ಬಹುತೇಕರಿಗೆ ಜೆಎನ್​​ಯು ಕನಸು ಭಗ್ನ ಮಾಡಿದಂತೆ ಎಂದು ರಮೇಶ್​​​ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಶುಲ್ಕದಲ್ಲಿ ಹಿಂದಿನದ್ದಕ್ಕಿಂತ ಶೇ. 999ರಷ್ಟು ಹೆಚ್ಚಳವಾದರೆ ನಾವು ಜೆಎನ್​​ಯು ವಿವಿಯನ್ನೇ ಬಿಟ್ಟು ಮನೆಗೆ ಹೋಗಬೇಕಾಗುತ್ತದೆ ಎಂದು ಹಲವರು ಬೇಸರ ಮಾತುಗಳನ್ನಾಡಿದ್ದಾರೆ.

ಜೆನ್​​ಯು ವಿದ್ಯಾರ್ಥಿಗಳು


ಇನ್ನೊಂದೆಡೆ “ಹಾಸ್ಟೆಲ್ ನಿಯಮಾವಳಿಯಲ್ಲಿ ಒಪ್ಪತಕ್ಕಂಥದ್ದಿಲ್ಲ. ಶುಲ್ಕ ಹೆಚ್ಚಳ, ನಿಷೇಧಾಜ್ಞೆಯ ಸಮಯ ಮತ್ತು ಡ್ರೆಸ್ ಕೋಡ್ ಇತ್ಯಾದಿ ಹೊಸ ನಿಯಮಗಳಿಗೆ ಅದು ಅವಕಾಶ ಮಾಡಿಕೊಟ್ಟಿದೆ. ಉಪ ಕುಲಪತಿಯವರು ಈ ಹಾಸ್ಟೆಲ್​​ ನಿಯಮಾವಳಿ ವಾಪಸ್ಸು ಪಡೆಯಬೇಕೆಂದು ಜೆಎನ್​​ಯು ಸ್ಟೂಡೆಂಟ್ಸ್​ ಯೂನಿಯನ್​​​​​ ಬೀದಿಗಿಳಿದಿದೆ.

ಬುಧವಾರ(ಇಂದು) ವಿವಿಯ ಎಕ್ಸಿಕ್ಯೂಟಿವ್​​​​​ ಕೌನ್ಸಿಲ್​​​​ ಸಭೆ ನಡೆಯಲಿದೆ. ಇಲ್ಲಿ ಈ ಹೊಸ ನಿಯಮಾವಳಿಗೆ ಅನುಮೋದನೆ ಸಿಕ್ಕರೇ ಕೂಡಲೇ ಜಾರಿಯಾಗಲಿದೆ. ಒಂದು ವೇಳೆ ಹೀಗೆ ಆದಲ್ಲಿ ನಾವು ಓದು ಬಿಟ್ಟು ಕೆಲಸಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾರೆ 19 ವರ್ಷದ ಮತ್ತೋರ್ವ ವಿದ್ಯಾರ್ಥಿ ಅಶುತೋಶ್​​ ಕುಮಾರ್​​.

ನ್ಯೂಸ್​​-18 ಸಂಸ್ಥೆ ದೇಶದ ವಿವಿಧ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಜೆಎನ್​​ಯುಗೆ ಬಂದ ವಿದ್ಯಾರ್ಥಿಗಳನ್ನು ಸಂಪರ್ಕಿಸಿತು. ಈ ವೇಳೆ ಬಹುತೇಕ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದ ಕುರಿತು ಅಸಹಾಯಕತೆ ತೋರಿದ್ದಾರೆ. ಅಲ್ಲದೇ ಇದರಿಂದಾಗಿ ಶಿಕ್ಷಣ ಕೇವಲ ಶ್ರೀಮಂತರಿಗೆ ಮಾತ್ರ ಸಿಗಲಿದೆ, ಜೆಎನ್​​ಯು ವಿವಿಯಲ್ಲಿ ನಮ್ಮಂತ ಬಡವರಿಗೆ ಸಿಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಗವರ್ನರ್​​ ಬಿಜೆಪಿ ಅಪ್ಪಣೆಯಂತೆ ನಡೆಯುತ್ತಿದ್ದಾರೆ: ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ

ಈ ಮೂರು ವರ್ಷಗಳಲ್ಲಿ ಜೆಎನ್​​ಯು ಉಪ ಕುಲಪತಿ ಜಗದೀಶ್​​ ಕುಮಾರ್​ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದನ್ನೇ ನೋಡಿಲ್ಲ. ಇವತ್ತು ಪೊಲೀಸರು ನಮ್ಮ ಮೇಲೆ ಬಲ ಪ್ರಯೋಗ ಮಾಡಿದ್ದಾರೆ. ನನ್ನ ಸಹಪಾಠಿಗಳನ್ನ ಪೊಲೀಸರು ಎಳೆದಾಡಿದ್ದಾರೆ. ನಮಗೆ ಗೆಲುವು ಸಿಗುವವರೆಗೂ ಹೋರಾಡುತ್ತೇವೆ ಎಂದು ಜೆಎನ್​​ಯು ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎನ್​​ ಸಾಯ್​​ ಬಾಲಾಜಿ ಹೇಳಿದ್ದಾರೆ.

ಈಗಾಗಲೇ ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಶುಲ್ಕ ಹೆಚ್ಚಳ ಹಾಗೂ ಹೊಸ ಹಾಸ್ಟೆಲ್ ನಿಯಮಾವಳಿ ಪ್ರಸ್ತಾವವನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

(ವರದಿ: ಎರಾಮ್​​ ಅಘಾ, ಉದಯ್​​ ಸಿಂಗ್​​ ರಾಣಾ)
-----------
First published: November 13, 2019, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading