50 ಲಕ್ಷ ಮುಸ್ಲಿಂ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ; ಬಿಜೆಪಿ ನಾಯಕನಿಂದ ಮತ್ತೆ ವಿವಾದಾತ್ಮಕ ಹೇಳಿಕೆ

ಸಿಎಎ ವಿರೋಧಿಗಳನ್ನು ಉತ್ತರ ಪ್ರದೇಶದಲ್ಲಿ ನಾಯಿಗೆ ಹೊಡೆದಂತೆ ಹೊಡೆದು ಹಾಕಲಾಯಿತು. ಅದೇರೀತಿ ಪಶ್ಚಿಮ ಬಂಗಾಳದ ಪ್ರತಿಭಟನಾಕಾರರನ್ನು ನಾಯಿಗಳಂತೆ ಸುಟ್ಟು ಹಾಕಬೇಕು ಎಂದು ಹೇಳಿಕೆ ನೀಡಿದ್ದ ದಿಲೀಪ್ ಘೋಷ್ ವಿರುದ್ಧ ದೂರು ದಾಖಲಾಗಿತ್ತು.

ದಿಲೀಪ್ ಘೋಷ್

ದಿಲೀಪ್ ಘೋಷ್

  • Share this:
ಕೊಲ್ಕತಾ (ಜ. 20): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 50 ಲಕ್ಷ ಮುಸ್ಲಿಂ ಅಕ್ರಮ ವಲಸಿಗರನ್ನು ಗುರುತಿಸಿ, ಅಗತ್ಯ ಬಿದ್ದರೆ ಅವರನ್ನು ದೇಶದಿಂದ ಹೊರಹಾಕಲಾಗುವುದು ಎನ್ನುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

50 ಲಕ್ಷ ಮುಸ್ಲಿಂ ನುಸುಳುಕೋರರನ್ನು ಗುರುತಿಸಲಾಗಿದೆ. ಒಂದುವೇಳೆ ಅಗತ್ಯ ಬಿದ್ದರೆ ಅವರನ್ನು ದೇಶದಿಂದ ಹೊರಗಟ್ಟಲಾಗುವುದು. ಅದಕ್ಕೂ ಮೊದಲು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಆಗ ಸಿಎಂ ಮಮತಾ ಬ್ಯಾನರ್ಜಿಗೆ ಅವರನ್ನು ಉಳಿಸಿಕೊಳ್ಳಲು ಯಾವ ಕಾರಣವೂ ಇರುವುದಿಲ್ಲ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.ಸಿಎಎ ವಿರೋಧಿಸುವ ಪ್ರತಿಭಟನಾಕಾರರನ್ನು ಉತ್ತರ ಪ್ರದೇಶದಲ್ಲಿ ನಾಯಿಗೆ ಹೊಡೆದಂತೆ ಹೊಡೆದು ಹಾಕಲಾಯಿತು. ಅದೇರೀತಿ ಪಶ್ಚಿಮ ಬಂಗಾಳದ ಪ್ರತಿಭಟನಾಕಾರರನ್ನು ನಾಯಿಗಳಂತೆ ಸುಟ್ಟು ಹಾಕಬೇಕು ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ದಿಲೀಪ್ ಘೋಷ್ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ಕನ್ನಡ ಕಲಿತು ಶಂಕರ್​ನಾಗ್​ ಹಾಡಿಗೆ ದನಿಯಾದ ಲೇಡಿ ಸಿಂಗಂ; ಐಪಿಎಸ್ ಅಧಿಕಾರಿ ಇಶಾ ಪಂತ್ ವಿಡಿಯೋ ವೈರಲ್

ಅದಾದ ನಂತರ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದಿಲೀಪ್ ಘೋಷ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಬುದ್ಧಿಜೀವಿಗಳು ಬೆನ್ನುಮೂಳೆಯಿಲ್ಲದವರು, ದೆವ್ವಗಳು. ನಾವು ಕೊಡುವ ಆಹಾರವನ್ನೇ ನಂಬಿಕೊಂಡು ಜೀವನ ನಡೆಸುವ ಪ್ರತಿಭಟನಾಕಾರರು ಈಗ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರ ತಂದೆ-ತಾಯಿ ಯಾರೆಂಬುದು ಗೊತ್ತಿದ್ದರೆ ಅವರ ಬರ್ತ್​ ಸರ್ಟಿಫಿಕೇಟ್ ನೀಡುತ್ತಿದ್ದರು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದರು.

2 ದಿನಗಳ ಹಿಂದೆ ಮತ್ತೆ ನಾಲಿಗೆ ಹರಿಬಿಟ್ಟಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ದೇಶಾದ್ಯಂತ ಎನ್​ಆರ್​ಸಿ ಜಾರಿಗೆ ತಂದರೆ ಪಶ್ಚಿಮ ಬಂಗಾಳದಲ್ಲಿನ 1 ಕೋಟಿ ಅಕ್ರಮ ಬಾಂಗ್ಲಾದೇಶಿಯರನ್ನು ವಾಪಾಸ್ ಕಳುಹಿಸಬಹುದು. ಬಂಗಾಳದಲ್ಲಿ 1 ಕೋಟಿ ಅಕ್ರಮ ಮುಸ್ಲಿಮರಿಗೆ ಸರ್ಕಾರ ಕೆಜಿಗೆ 2 ರೂ. ನಂತೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡುತ್ತಿದೆ. ಅಂಥವರನ್ನು ಮರಳಿ ಅವರ ರಾಷ್ಟ್ರಕ್ಕೆ ವಾಪಾಸ್ ಕಳುಹಿಸಬಹುದು ಎಂದು ಹೇಳಿದ್ದರು.
First published: