Lok Sabha Elections 2019 - ಇಂದಿರಾ ಗಾಂಧಿ ನಂತರ ಹೊಸ ಇತಿಹಾಸ ಬರೆದ ನರೇಂದ್ರ ಮೋದಿ

1971ರ ನಂತರ ಯಾವ ಪ್ರಧಾನಿ ಕೂಡ ಸತತ ಎರಡನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಮೋದಿ ಈ ಸಾಧನೆ ಮಾಡಿದ್ದಾರೆ.

Vijayasarthy SN | news18
Updated:May 23, 2019, 4:55 PM IST
Lok Sabha Elections 2019 - ಇಂದಿರಾ ಗಾಂಧಿ ನಂತರ ಹೊಸ ಇತಿಹಾಸ ಬರೆದ ನರೇಂದ್ರ ಮೋದಿ
ನರೇಂದ್ರ ಮೋದಿ
Vijayasarthy SN | news18
Updated: May 23, 2019, 4:55 PM IST
ಬೆಂಗಳೂರು(ಮೇ 23): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಪಡೆದುಕೊಳ್ಳುತ್ತಿದೆ. ಬಿಜೆಪಿ ಪಕ್ಷವೇ ಏಕಾಂಗಿಯಾಗಿ ಬಹುಮತ ಗಳಿಸುವಷ್ಟು ಸಂಖ್ಯಾಬಲ ಹೊಂದಿದೆ. 48 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. 1971ರಲ್ಲಿ ಇಂದಿರಾ ಗಾಂಧಿ ಅವರು ಸತತ ಎರಡನೇ ಬಾರಿ ಬಹುಮತದೊಂದಿಗೆ ಪ್ರಧಾನಿಯಾಗಿದ್ದರು. ಈಗ ನರೇಂದ್ರ ಮೋದಿ ಕೂಡ ಅದೇ ಸಾಧನೆ ಮಾಡಿದ್ದಾರೆ.

ನೋಟ್ ಬ್ಯಾನ್, ಜಿಎಸ್​ಟಿ, ನಿರುದ್ಯೋಗ, ಆರ್ಥಿಕ ಹಿನ್ನಡೆ ಇತ್ಯಾದಿ ವೈಫಲ್ಯಗಳನ್ನ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಮೋದಿ ಮತ್ತೊಂದು ಅವಧಿಗೆ ಬರಲು ಒಂಚೂರು ಅವಕಾಶ ನೀಡಬಾರದೆಂದು ಎನ್​ಡಿಎಯೇತರ ಪಕ್ಷಗಳೆಲ್ಲವೂ ಘೋಷಿತ ಮತ್ತು ಅಘೋಷಿತ ಒಪ್ಪಂದ ಅಥವಾ ಹೊಂದಾಣಿಗೆ ಮಾಡಿಕೊಂಡಿದ್ದವು. ಆದರೆ, ಇದ್ಯಾವುದಕ್ಕೂ ಅವಕಾಶವಾಗದಂತೆ ಜನಾದೇಶ ಬಂದಿದೆ. ಬಿಜೆಪಿ ಪಕ್ಷವೇ ಸ್ವತಂತ್ರವಾಗಿ ಅಧಿಕಾರ ನಡೆಸುವಷ್ಟು ಬಹುಮತ ನೀಡಿದೆ. ಎನ್​ಡಿಎ ಮೈತ್ರಿಕೂಟ 350ರ ಗಡಿದಾಟಿದೆ. ಬಿಜೆಪಿಯೊಂದೇ 300ರ ಗಡಿ ಸಮೀಪಿಸಿದೆ. ನರೇಂದ್ರ ಮೋದಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಜನರು ಇನ್ನೂ 5 ವರ್ಷ ಅಧಿಕಾರ ನೀಡಿದ್ದಾರೆ.

ಇದನ್ನೂ ಓದಿ: ತನಗೆ ತಾನೆ ಗುಂಡಿ ತೋಡಿಕೊಂಡ ಜೆಡಿಎಸ್; ಸ್ವಯಂಕೃತ ಅಪರಾಧದಿಂದಾಗಿ ಪಕ್ಷವೇ ನಾಮಾವಶೇಷ; ಇನ್ನು ಚೇತರಿಕೆ ಬಲು ಕಷ್ಟ..!

ಇಂದಿರಾ ಗಾಂಧಿ ನಂತರ ಯಾವ ಪ್ರಧಾನಿಗೂ ಇಂಥ ಜನಾದೇಶ ಸಿಕ್ಕಿರಲಿಲ್ಲ. 1971ರ ನಂತರ ಕಾಂಗ್ರೆಸ್ ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದರೂ ಪ್ರಧಾನಿಗಳು ಬದಲಾಗಿದ್ದರು. ಮನಮೋಹನ್ ಸಿಂಗ್ ಸತತ ಎರಡು ಬಾರಿ ಪ್ರಧಾನಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಮೈತ್ರಿಕೂಟದ ಸಹಾಯದಿಂದ ಸರಕಾರ ರಚನೆ ಮಾಡಿತ್ತು. ಈಗ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಜನರು ಮತ್ತೊಂದು ಅವಧಿಗೆ ಆಡಳಿತ ನಡೆಸಲು ಪೂರ್ಣಾಧಿಕಾರ ನೀಡಿದ್ದಾರೆ.

ಸಂಜೆ 4:30ರವರೆಗಿನ ಟ್ರೆಂಡ್ ಪ್ರಕಾರ 542 ಕ್ಷೇತ್ರಗಳ ಪೈಕಿ ಎನ್​ಡಿಎ ಮೈತ್ರಿಕೂಟ 351 ಸ್ಥಾನಗಳಲ್ಲಿ ಗೆಲುವು ಅಥವಾ ಮುನ್ನಡೆ ಪಡೆದಿದೆ. ಇದರಲ್ಲಿ ಬಿಜೆಪಿಯೊಂದೇ 300 ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದೆ. 2014ರ ಚುನಾವಣೆಯಲ್ಲಿ ಮೋದಿಯ ಭರ್ಜರಿ ಅಲೆಯಲ್ಲಿ ಗಳಿಸಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಈ ಬಾರಿ ಪಡೆದುಕೊಂಡಿರುವುದು ಗಮನಾರ್ಹ.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...