10 ವರ್ಷದಿಂದ ಬ್ಯಾಂಕ್​ ಖಾತೆಯಲ್ಲಿರುವ ಹಣ ಬಳಸದಿದ್ದರೆ, ನಿಮ್ಮ ಹಣ ಬೇರೆಡೆಗೆ ಹೋಗುತ್ತದೆ

Latha CG | news18
Updated:July 2, 2019, 5:30 PM IST
10 ವರ್ಷದಿಂದ ಬ್ಯಾಂಕ್​ ಖಾತೆಯಲ್ಲಿರುವ ಹಣ ಬಳಸದಿದ್ದರೆ, ನಿಮ್ಮ ಹಣ ಬೇರೆಡೆಗೆ ಹೋಗುತ್ತದೆ
ಆರ್​ಬಿಐ
  • News18
  • Last Updated: July 2, 2019, 5:30 PM IST
  • Share this:
ಖಾತೆದಾರರು ತಮ್ಮ ಅಕೌಂಟ್​​ನಲ್ಲಿ ಇಟ್ಟಿರುವ ಹಣವನ್ನು 10 ವರ್ಷಗಳಿಂದ ಬಳಸದೇ ಇದ್ದರೆ, ಆ ಹಣವನ್ನು ಬ್ಯಾಂಕ್​ ಬೇರೆಡೆಗೆ ವರ್ಗಾಯಿಸುತ್ತದೆ. ಬ್ಯಾಂಕ್​ ಖಾತೆಗಳಲ್ಲಿ ಬಳಸದೇ ಇಟ್ಟಿರುವ ಹಣವನ್ನು ಪರಿಗಣಿಸಿರುವ  ಆರ್​ಬಿಐ, ಠೇವಣಿ ಶಿಕ್ಷಣ ಮತ್ತು ಜಾಗೃತಿ ಫಂಡ್​ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಬ್ಯಾಂಕ್​ಗಳು ಮತ್ತು ವಿಮಾ ಕಂಪನಿಗಳಲ್ಲಿ ಕ್ಲೇಮ್​ ಆಗಿಲ್ಲದ ಡೆಪಾಸಿಟ್ ಹಣ​ 32,455 ಕೋಟಿ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಗೆ ತಿಳಿಸಿದ್ದಾರೆ. 

ಕಳೆದ ವರ್ಷ ಬ್ಯಾಂಕ್​ಗಳಲ್ಲಿ ಕ್ಲೇಮ್ ಆಗದ ಡೆಪಾಸಿಟ್​ ಶೇ. 26.8  ರಷ್ಟಿದ್ದು, 14,578 ಕೋಟಿಯಷ್ಟಿತ್ತು. ಹೀಗಾಗಿ ಕ್ಲೇಮ್​ ಆಗದ ಬ್ಯಾಂಕ್ ಡೆಪಾಸಿಟ್​ನ್ನು ಪರಿಗಣಿಸಿ ಆರ್​ಬಿಐ ಒಂದು ಹೊಸ ನಿಯಮ ಜಾರಿ ಮಾಡಿದೆ. ಬ್ಯಾಂಕ್​ ಖಾತೆಗಳಲ್ಲಿ ಕ್ಲೇಮ್​ ಆಗದ ಡೆಪಾಸಿಟ್​​​​ ಬಗ್ಗೆ ನಿರ್ಮಲಾ ಸೀತಾರಾಮನ್​ ಮಹತ್ವದ ಮಾಹಿತಿ ನೀಡಿದ್ದಾರೆ:

ಬ್ಯಾಂಕ್​ ಅಕೌಂಟ್​ನಲ್ಲಿರುವ ಹಣವನ್ನು 10 ವರ್ಷಗಳಿಂದ ಬಳಸದೇ ಇದ್ದರೆ:

ಖಾತೆದಾರರು ತಮ್ಮ ಬ್ಯಾಂಕ್​ ಖಾತೆಗಳಲ್ಲಿ ಬಳಸದೇ ಇಟ್ಟಿರುವ ಹಣವನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ಪರಿಗಣಿಸಿ, 2014 ರಲ್ಲಿ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ(DEAF) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ  ಕ್ಲೇಮ್​ ಆಗದೇ ಇರುವ ಹಣ DEAF ಗೆ ವರ್ಗಾವಣೆಯಾಗುತ್ತದೆ. ಇದರ ಜೊತೆಗೆ ಬಡ್ಡಿಯನ್ನೂ ಸಹ ಸೇರ್ಪಡೆ ಮಾಡಲಾಗುತ್ತದೆ.

ಎಲ್​ಐಸಿ ಪಾಲಿಸಿ ಮೊತ್ತ ಕ್ಲೇಮ್​ ಮಾಡಿಲ್ಲವೇ? ಹಾಗಿದ್ದರೆ ಮನೆಯಲ್ಲೇ ಕೂತು ಮಾಹಿತಿ ಪಡೆಯಿರಿ

ಗ್ರಾಹಕರು ತಮ್ಮ ಖಾತೆಯಿಂದ ಹಣ ಪಡೆಯಲು ಇಚ್ಛಿಸಿದರೆ:ಒಂದು ವೇಳೆ, ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಲು ಇಚ್ಛಿಸಿದರೆ, ಆಗ ಬ್ಯಾಂಕ್​ ಬಡ್ಡಿಯನ್ನು ಸೇರಿಸಿ ಹಣ ನೀಡುತ್ತದೆ. DEAF ಖಾತೆಗೆ ವರ್ಗಾವಣೆಯಾಗಿರುವ ಹಣವನ್ನು ಬ್ಯಾಂಕ್​​ ಕ್ಲೇಮ್​ ಮಾಡುತ್ತದೆ. DEAF ಖಾತೆಯಲ್ಲಿ ಇಡುವ ಹಣಕ್ಕೆ ಶೇ. 4 ರಷ್ಟಿದ್ದ ಬಡ್ಡಿದರವನ್ನು 2018 ರ ಜುಲೈ ತಿಂಗಳಲ್ಲಿ ಶೇ.3.5 ಕ್ಕೆ ಇಳಿಸಲಾಗಿತ್ತು.

ಏನಿದು ಹೊಸ ನಿಯಮ?:

ಬ್ಯಾಂಕ್​ ಖಾತೆಯಲ್ಲಿರುವ ಕ್ಲೇಮ್​ ಆಗದ ಹಣವನ್ನು ಪರಿಗಣಿಸಿ ಬ್ಯಾಂಕಿಂಗ್ ರೆಗ್ಯುಲೇಷನ್​ ಆ್ಯಕ್ಟ್​​ಗೆ ತಿದ್ದುಪಡಿ ತಂದು, 1949 ರಲ್ಲಿ ಸೆಕ್ಷನ್​ 26ಎ ಸೇರಿಸಿ DEAF ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಯಿತು.

ಈ ಯೋಜನೆಯಡಿ, ಯಾವುದೇ ಬ್ಯಾಂಕ್​ ಖಾತೆಯಲ್ಲಿ 10 ವರ್ಷ ಅದಕ್ಕಿಂತ ಹೆಚ್ಚಿನ ವರ್ಷಗಳಿಗಿಂತ ಕ್ಲೇಮ್​ ಆಗದ ಹಣ ಇದ್ದರೆ, ಆ ಹಣಕ್ಕೆ ಬಡ್ಡಿ ಹಣ ಸೇರಿಸಿ DEAF ಯೋಜನೆಗೆ ವರ್ಗಾವಣೆ ಮಾಡಲಾಗುತ್ತದೆ.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ