ಗೌರಿ ಬದುಕಿದ್ದರೆ, ಮೋದಿ ಸರ್ಕಾರ ಅವರಿಗೆ 'ನಗರ ಪ್ರದೇಶದ ನಕ್ಸಲ್​' ಎಂಬ ಹಣೆಪಟ್ಟಿ ಕಟ್ಟುತ್ತಿತ್ತು; ಜಿಗ್ನೇಶ್ ಮೇವಾನಿ

news18
Updated:September 5, 2018, 1:43 PM IST
ಗೌರಿ ಬದುಕಿದ್ದರೆ, ಮೋದಿ ಸರ್ಕಾರ ಅವರಿಗೆ 'ನಗರ ಪ್ರದೇಶದ ನಕ್ಸಲ್​' ಎಂಬ ಹಣೆಪಟ್ಟಿ ಕಟ್ಟುತ್ತಿತ್ತು; ಜಿಗ್ನೇಶ್ ಮೇವಾನಿ
news18
Updated: September 5, 2018, 1:43 PM IST
ವಿಜಯಸಿನ್ಹಾ ಪಾರ್ಮರ್, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.5): ಗೌರಿ ಧೈರ್ಯವಂತ ಹೋರಾಟಗಾರ್ತಿ. ಅವರು ಬದುಕಿದ್ದವರೆಗೂ ಬಡವರ ಪರ ಹಾಗೂ ದಮನಿತರ ಪರವಾಗಿ ಬರೆದರು ಎಂದು ದಲಿತ ಮುಖಂಡ ಹಾಗೂ ಗುಜರಾತ್​ನ ವಡಗಾಮ್ ಕ್ಷೇತ್ರದ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ನ್ಯೂಸ್​ 18ಗೆ ಹೇಳಿದರು.

"ಗೌರಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಯಿತು. ಒಂದು ವೇಳೆ ಗೌರಿ ಬದುಕಿದ್ದರೇ ಸರ್ಕಾರ (ಮೋದಿ ಸರ್ಕಾರ) ಅವರಿಗೆ ನಗರ ಪ್ರದೇಶದ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಿತ್ತು. ಮಹಾರಾಷ್ಟ್ರದಲ್ಲಿ ದಾಬೋಲ್ಕರ್​ರಂತೆ ಕರ್ನಾಟಕದಲ್ಲಿ ಗೌರಿ. ಅವರ ಮೊದಲ ವರ್ಷ ಸ್ಮರಣೋತ್ಸವದಲ್ಲಿ ನಾವೆಲ್ಲ ಒಂದಾಗಿ ಮೋದಿ ತಂತ್ರಗಳು ಮತ್ತು ಕೋಮು ಶಕ್ತಿಗಳ ವಿರುದ್ಧ 'ನಾವೆಲ್ಲ ಗೌರಿ ಲಂಕೇಶ್' ಎಂದು ದನಿಗೂಡಿಸಲಿದ್ದೇವೆ. ಇದೇ ಸಂದರ್ಭದಲ್ಲಿ ಗೌರಿ ಸಾವಿನ ನಂತರ ನಿಲ್ಲಿಸಲಾಗಿದ್ದ 'ಗೌರಿ ಲಂಕೇಶ್' ಪತ್ರಿಕೆಯನ್ನು ಪುನರ್​ಪ್ರಾರಂಭಿಸಲಿದ್ದೇವೆ," ಎಂದು ಮೇವಾನಿ ತಿಳಿಸಿದರು.

ಗೌರಿ ಲಂಕೇಶ್ ಸಾಯುವ 14 ದಿನಗಳ ಹಿಂದೆ ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಬಲಪಂಥೀಯ ಉಗ್ರವಾದಿಗಳು ತಮ್ಮ ಬರವಣಿಗೆಗಳ ಬಗ್ಗೆ ವ್ಯಾಘ್ರವಾಗಿದ್ದರ ಕುರಿತು ಮಾತುಕತೆ ನಡೆಸಿದ್ದೆವು ಎಂದು ಗೌರಿ ಲಂಕೇಶ್​ ಅವರ ನೆನಪು ಮಾಡಿಕೊಂಡ, ಮೇವಾನಿ, ದೇಶದಲ್ಲಿ ನಡೆದ ಪ್ರಗತಿಪರರು ಮತ್ತು ವಿಚಾರವಾದಿಗಳ ಹತ್ಯೆಯಲ್ಲಿ (ದಾಬೋಲ್ಕರ್ ಮತ್ತು ಕಲಬುರ್ಗಿ) ಬಿಜೆಪಿ ಹಿಂಬದಿಯಲ್ಲಿರುವ ಸನಾತನ ಸಂಸ್ಥೆಯ ಕೈವಾಡವಿದೆ. ಗೌರಿ ಲಂಕೇಶ್​ ಹತ್ಯೆ ಪ್ರಕರಣವನ್ನು ಬೇಧಿಸಿರುವ ಕರ್ನಾಟಕ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಮೇವಾನಿ ತಿಳಿಸಿದರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ