ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ; ಸಂಸದ ಶಶಿ ತರೂರ್ ಹೇಳಿಕೆ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಕೋರ್ಟ್!

ಅಲ್ಪ ಸಂಖ್ಯಾತರು ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಕಳದುಕೊಳ್ಳುವ ಪರಿಸ್ಥಿತಿ ಮಹಾತ್ಮಾ ಗಾಂಧಿ, ಜವಹರ್ ಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಕನಸು ಕಂಡಿದ್ದ ಭಾರತದಲ್ಲಿ ಸಾಧ್ಯವಾಗುವುದಾದರೆ ಈ ದೇಶ ಹಿಂದೂ ಪಾಕಿಸ್ತಾನವಾದಂತೆಯೇ ಸರಿ ಸಂಸದ ಶಶಿ ತರೂರ್​ ಕಳೆದ ವರ್ಷ ಬಿಜೆಪಿಯನ್ನು ಕಟುವಾಗಿ ವಿಮರ್ಶಿಸಿದ್ದರು.

MAshok Kumar | news18
Updated:August 13, 2019, 7:00 PM IST
ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ; ಸಂಸದ ಶಶಿ ತರೂರ್ ಹೇಳಿಕೆ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಕೋರ್ಟ್!
ಶಶಿ ತರೂರ್
MAshok Kumar | news18
Updated: August 13, 2019, 7:00 PM IST
ಕೋಲ್ಕತ್ತಾ (ಆಗಸ್ಟ್.13); ಕಳೆದ ವರ್ಷ ಜುಲೈನಲ್ಲಿ ಕೇರಳದ ತಿರುವನಂತಪುರ ಸಂಸದ ಶಶಿ ತರೂರ್ ಬಿಜೆಪಿ ಪಕ್ಷದ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿನ ಹೈಕೋರ್ಟ್ ಅವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದೆ.

2018ರ ಜುಲೈ ತಿಂಗಳಲ್ಲಿ ತಿರುವನಂತಪುರದ ಸಮಾವೇಶವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್, “2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ. ದೇಶದ ಸಂವಿಧಾನವನ್ನು ಬದಲಿಸುವ ಪ್ರಯತ್ನಕ್ಕೆ ಇವರು ಕೈ ಹಾಕಲಿದ್ದಾರೆ. ದೇಶದ ಸಂವಿಧಾನದ ಜಾಗಕ್ಕೆ ಹಿಂದೂ ರಾಷ್ಟ್ರ ಸಂವಿಧಾನ ಬಂದು ಕೂರಲಿದೆ. ಹೀಗಾಗಿ ದೇಶದ ಅಲ್ಪ ಸಂಖ್ಯಾತರು ತಮ್ಮ ಹಕ್ಕಿನ ಜೊತೆಗೆ ಗೌರವಯುತ ಬದುಕನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಆರೋಪಿಸಿದ್ದರು.

ಅಲ್ಲದೆ, “ಅಲ್ಪ ಸಂಖ್ಯಾತರು ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಕಳದುಕೊಳ್ಳುವ ಪರಿಸ್ಥಿತಿ ಮಹಾತ್ಮಾ ಗಾಂಧಿ, ಜವಹರ್ ಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಕನಸು ಕಂಡಿದ್ದ ಭಾರತದಲ್ಲಿ ಸಾಧ್ಯವಾಗುವುದಾದರೆ ಈ ದೇಶ ಹಿಂದೂ ಪಾಕಿಸ್ತಾನವಾದಂತೆಯೇ ಸರಿ” ಎಂದು ಕಟುವಾಗಿ ವಿಮರ್ಶಿಸಿದ್ದರು.

ಶಶಿ ತರೂರ್ ಅವರ ಈ ಹೇಳಿಕೆಯನ್ನು ವಿರೋಧಿಸಿದ್ದ ನ್ಯಾಯವಾದಿ ಸುಮೀತ್ ಚೌಧರಿ ಕೋಲ್ಕತ್ತಾದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಇಲ್ಲಿನ ಮ್ಯಾಜಿಸ್ಟ್ರೇಟ್ ತರೂರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ.

ಇದನ್ನೂ ಓದಿ : ವಿಮಾನ ಅಲ್ಲ, ಸ್ವಾತಂತ್ರ್ಯ ಬೇಕು; ಜಮ್ಮು ಕಾಶ್ಮೀರಕ್ಕೆ ಆಹ್ವಾನಿಸಿದ ರಾಜ್ಯಪಾಲರಿಗೆ ತಿರುಗೇಟು ನೀಡಿದ ರಾಹುಲ್​ ಗಾಂಧಿ

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...