ಆಟೋ ಮೊಬೈಲ್​​ ವಲಯ ಸಂಕಷ್ಟದಲ್ಲಿದ್ದರೆ ಹೇಗೆ ಇಷ್ಟು ಟ್ರಾಫಿಕ್​​​​ ಜಾಮ್​​ ಆಗಲು ಸಾಧ್ಯ; ಬಿಜೆಪಿ ಸಂಸದ ಪ್ರಶ್ನೆ

ಭಾರತದಲ್ಲೀಗ ಆಟೋ ಮೊಬೈಲ್‌ ವಲವ ಸಂಕಷ್ಟದಲ್ಲಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎನ್ನುವ ಮೂಲಕ ಜನರಿಗೆ ಮಸಿ ಬಳಿಯುತ್ತಿವೆ ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್​​ ಮಸ್ತ್ ಹೇಳಿದ್ದಾರೆ.

news18-kannada
Updated:December 5, 2019, 10:20 PM IST
ಆಟೋ ಮೊಬೈಲ್​​ ವಲಯ ಸಂಕಷ್ಟದಲ್ಲಿದ್ದರೆ ಹೇಗೆ ಇಷ್ಟು ಟ್ರಾಫಿಕ್​​​​ ಜಾಮ್​​ ಆಗಲು ಸಾಧ್ಯ; ಬಿಜೆಪಿ ಸಂಸದ ಪ್ರಶ್ನೆ
ಬಿಜೆಪಿ ಸಂಸದ ವೀರೇಂದ್ರ ಸಿಂಗ್​​ ಮಸ್ತ್
  • Share this:
ನವದೆಹಲಿ(ಡಿ.05): ದೇಶದಲ್ಲಿ ಆಟೋ ಮೊಬೈಲ್​​​ ಸಂಕಷ್ಟದಲ್ಲಿದ್ದಾಗ ಹೇಗೆ ಟ್ರಾಫಿಕ್​​ ಜಾಮ್​​ ಆಗಲು ಸಾಧ್ಯ ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್‌ ಮಸ್ತ್ ಹೇಳಿಕೆ ನೀಡಿದ್ಧಾರೆ. ಹೀಗೆ ಸಂಸತ್​​ ಕಲಾಪದಲ್ಲಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಸಂಸದ ವೀರೇಂದ್ರ ಸಿಂಗ್​​ ಮಸ್ತ್​​ ಅಚ್ಚರಿ ಮೂಡಿಸಿದ್ದಾರೆ.

ಭಾರತದಲ್ಲೀಗ ಆಟೋ ಮೊಬೈಲ್‌ ವಲವ ಸಂಕಷ್ಟದಲ್ಲಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎನ್ನುವ ಮೂಲಕ ಜನರಿಗೆ ಮಸಿ ಬಳಿಯುತ್ತಿವೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹೆಸರು ಹಾಳುಮಾಡುವ ಹುನ್ನಾರವಾಗಿದೆ. ಒಂದು ವೇಳೆ ಆಟೋ ಮೊಬೈಲ್​ ವಲಯವೂ​ ಸಂಕಷ್ಟಕ್ಕೆ ಸಿಲುಕಿದ್ದರೆ, ದೇಶದಲ್ಲಿ ಯಾಕೆ ಇಷ್ಟು ಟ್ರಾಫಿಕ್​​ ಆಗುತ್ತಿತ್ತು ಎಂದು ಬಿಜೆಪಿ ಸಂಸದ ವೀರೇಂದ್ರ ಸಿಂಗ್​​ ಮಸ್ತ್ ಕೇಂದ್ರ ವಿರೋಧ ಪಕ್ಷಗಳಿಗೆ ಪ್ರಶ್ನಿಸಿದ್ಧಾರೆ.


ದೇಶದಲ್ಲಿನ ಆರ್ಥಿಕ ಹಿಂಜರಿತದಿಂದಾಗಿ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಕಳೆದ ಎರಡು ವರ್ಷಗಳಿಂದ ವಾಹನಗಳ ಮಾರಾಟ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಇತ್ತೀಚೆಗೆ ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು ತೆರೆದಿಟ್ಟಿತ್ತು. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ವಾಹನಗಳ ಮಾರಾಟ ಶೇ. 35 ಕುಸಿತವಾಗಿದೆ. ಕಳೆದ ಎರಡು ದಶಕಗಳಲ್ಲೇ ಕಂಡಿರುವ ಮಹಾಕುಸಿತ ಇದಾಗಿದೆ.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ; ಸಿವೋಟರ್​​ ಸಮೀಕ್ಷೆ ಪ್ರಕಟ; ಬಿಜೆಪಿಗೆ ಮೇಲುಗೈ, ಕಾಂಗ್ರೆಸ್​​-ಜೆಡಿಎಸ್​​ಗೆ ಭಾರೀ ಮುಖಭಂಗಈ ಹಿಂದೆ 2000ನೇ ಇಸವಿಯಲ್ಲೂ ವಾಹನ ಉದ್ಯಮ ಇದೇ ರೀತಿಯ ಬಿಕ್ಕಟ್ಟಿಗೆ ಸಿಲುಕಿತ್ತಾದರೂ, ಸರ್ಕಾರ ಜಾರಿಗೆ ತಂದ ಕೆಲವು ಕ್ಷಿಪ್ರ ಕ್ರಮಗಳಿಂದ ಚೇತರಿಸಿಕೊಂಡಿತ್ತು. ನಂತರ ಉದ್ಯಮವೂ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲೂ ಹೆಚ್ಚಿನ ಹಾನಿಗೊಳಗಾಗಿರಲಿಲ್ಲ. ಆದರೆ, ಈ ಸಲ ಮಾತ್ರ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿದೆ. ಇದರ ಪರಿಣಾಮ ವಾಹನ ಉದ್ಯಮವೊಂದರಲ್ಲೇ ಸುಮಾರು 2.30 ಲಕ್ಷ ಉದ್ಯೋಗಗಳು ನಷ್ಟವಾಗಿವೆ.
First published: December 5, 2019, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading