ಔರಂಗಜೇಬ್ ಕೆಟ್ಟ ಮುಸಲ್ಮಾನನೆ, ಹಾಗಾದರೆ ಒಳ್ಳೆಯ ಹಿಂದೂ ಯಾರು?; ಜೆಯುಹೆಚ್​ ಮುಖಂಡ ಮಹಮೂದ್​ ಮದನಿ ಪ್ರಶ್ನೆ

ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಹಾಗೂ ಜೆಯುಹೆಚ್ ಪ್ರಧಾನ ಕಾರ್ಯದರ್ಶಿ ಮಹಮೂದ್ ಮದನಿ ಜೊತೆಗೆ ನ್ಯೂಸ್​-18 ನಡೆಸಿರುವ ಸಂದರ್ಶನದ ಆಯ್ದ ಕೆಲವು ಭಾಗಗಳು ಇಲ್ಲಿವೆ.

MAshok Kumar | news18-kannada
Updated:September 13, 2019, 12:52 PM IST
ಔರಂಗಜೇಬ್ ಕೆಟ್ಟ ಮುಸಲ್ಮಾನನೆ, ಹಾಗಾದರೆ ಒಳ್ಳೆಯ ಹಿಂದೂ ಯಾರು?; ಜೆಯುಹೆಚ್​ ಮುಖಂಡ ಮಹಮೂದ್​ ಮದನಿ ಪ್ರಶ್ನೆ
ಮಹಮೂದ್​ ಮದನಿ.
  • Share this:
ನವ ದೆಹಲಿ (ಸೆಪ್ಟೆಂಬರ್.13); ಇತ್ತೀಚೆಗೆ ಆರ್​​ಎಸ್​​ಎಸ್​ ಮುಖಂಡ ಮೋಹನ್ ಭಾಗವತ್ ಜಮಿಯತ್ ಉಲೇಮಾ-ಎ-ಹಿಂದ್ (ಎ) ಮುಖ್ಯಸ್ಥ ಸೈಯದ್ ಅರ್ಷದ್ ಮದನಿ ಅವರನ್ನು ಭೇಟಿ ಎರಡು ಕೋಮುಗಳ ನಡುವಿನ ಸೌಹಾರ್ದತೆಯ ಕುರಿತು ಚರ್ಚೆ ನಡೆಸಿದ್ದರು. ಹೀಗೆ ಎರಡು ಪ್ರಬಲ ಕೋಮಿನ ಪ್ರಬಲ ನಾಯಕರ ಭೇಟಿ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಕುತೂಹಲವನ್ನು ಸೃಷ್ಟಿಸಿತ್ತು. ಈ ಭೇಟಿಯನ್ನು ಮತ್ತೋರ್ವ ನಾಯಕ ಮಹಮೂದ್ ಮದನಿ ಸಹ ಸ್ವಾಗತಿಸಿದ್ದರು.

ಈ ಭೇಟಿಯಾಗಿ ಇದೀಗ ಎರಡು ವಾರಗಳ ನಂತರ ನ್ಯೂಸ್-18 ಗೆ ಸಂದರ್ಶನ ನೀಡಿರುವ ಜೆಯುಹೆಚ್ ಪ್ರಧಾನ ಕಾರ್ಯದರ್ಶಿ ಮಹಮೂದ್ ಮದನಿ ಮುಸ್ಲಿಂ ಸಮುದಾಯದ ಕಡೆಗೆ ಮೃದು ಧೋರಣೆ ತೋರುತ್ತಿರುವ ಆರ್​​​ಎಸ್​​ಎಸ್​ ನಡೆಯನ್ನು ಸ್ವಾಗತಿಸಿದ್ದಾರೆ. ಅಲ್ಲದೆ, ಎರಡು ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಇಂತಹ ಸಂವಹನಗಳು ಆಗಾಗ್ಗೆ ನಡೆಯುತ್ತಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಹಾಗೂ ಜೆಯುಹೆಚ್ ಪ್ರಧಾನ ಕಾರ್ಯದರ್ಶಿ ಮಹಮೂದ್ ಮದನಿ ಜೊತೆಗೆ ನ್ಯೂಸ್​-18 ನಡೆಸಿರುವ ಸಂದರ್ಶನದ ಆಯ್ದ ಕೆಲವು ಭಾಗಗಳು ಇಲ್ಲಿವೆ.

1. ಜಾಮಿಯತ್-ಎ-ಉಲೆಮಾ-ಹಿಂದ್ (ಜೆಯುಹೆಚ್) ಹಾಗೂ ಆರ್​ಎಸ್​​ಎಸ್​ ನಾಯಕರು ಇತ್ತೀಚೆಗೆ ಭೇಟಿಯಾದ ಕುರಿತು ವರದಿಗಳು ಪ್ರಸಾರವಾದವು. ಆದರೆ, ಹೀಗೆ ಆರ್​​​ಎಸ್​ಎಸ್​ ಹಾಗೂ ಮುಸ್ಲಿಂ ನಾಯಕರು ಭೇಟಿಯಾಗುವ ಅವಶ್ಯಕತೆ ಇದೆ ಎಂದು ನೀವು ಭಾವಿಸುತ್ತೀರಾ?

ಯಾವುದೇ ಸಮಸ್ಯೆಗಳು ಎಲ್ಲಾ ಕಾಲಕ್ಕೂ ಒಂದೇ ತೆರನಾಗಿ ಇರುವುದಿಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಸನ್ನಿವೇಶಗಳಲ್ಲಿ ಬದಲಾವಣೆಯಾದಾಗ ಜನರ ಮನೋಭಾವವೂ ಬದಲಾಗುತ್ತದೆ. ಹೀಗಾಗಿ ಆರ್​​ಎಸ್​ಎಸ್​ ತಡವಾಗಿಯಾದರೂ ಮುಸ್ಲಿಂ ಸಮುದಾಯದ ಕುರಿತು ಉದಾರತೆಯನ್ನು ತೋರುತ್ತಿದೆ ಎಂದು ನಾನು ಭಾವಿಸುತ್ತೇನೆ.

ಇದು ಸುವರ್ಣಾವಕಾಶ ಏಕೆಂದರೆ ನಾವು ಸಂವಹನವನ್ನು ಯಾವಾಗಲೂ ಸ್ವಾಗತಿಸಬೇಕು. ಯಾವ ಕಾಲದಲ್ಲೂ ಸಂವಹನ ಪ್ರಿಕ್ರಿಯೆ ಸ್ಥಗಿತವಾಗದೆ ಮುಕ್ತವಾಗಿರಬೇಕು. ಇದೇ ಕಾರಣಕ್ಕೆ ಎರಡು ದೇಶಗಳು ಪರಸ್ಪರ ಯುದ್ಧದಲ್ಲಿದ್ದರೂ ಸಂವಹನವನ್ನು ತ್ಯಜಿಸುವುದಿಲ್ಲ.

2. ಆರ್​​ಎಸ್​​ಎಸ್​ ತನ್ನ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ತೋರಿಸುತ್ತಿದೆ ಎಂದು ನೀವು ಹೇಳುತ್ತಿರುವಿರಿ. ಇದನ್ನು ಇನ್ನಷ್ಟು ವಿಸ್ತಾರವಾಗಿ ಹೇಳಬಹುದೇ?ಮುಸ್ಲಿಮರಲ್ಲದೆ ಹಿಂದುತ್ವ ಎಂಬುದು ಅಪೂರ್ಣ ಎಂದು ಸ್ವತಃ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ಈ ಹೇಳಿಕೆಯನ್ನು ನೀಡಲೆಂದು ಅವರು ಇಲ್ಲಿಗೆ ಆಗಮಿಸಿದ್ದರು. ಹೀಗಾಗಿ ನಿರಂತರ ಸಂವಹನ ಇದ್ದರೆ ಮಾತ್ರ ಇಂತಹ ವಿಚಾರಗಳಲ್ಲಿ ಬದಲಾವಣೆಗಳನ್ನು ನಿರೀಕ್ಷೆ ಮಾಡುವುದು ಸಾಧ್ಯ.

ಎರಡು ಕೋಮುಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಲು ನಮಗೆ ಇಂತಹ ಸಂಭಾಷಣೆಗಳ ಅಗತ್ಯವಿದೆ. ಸಂವಹನ ಇಲ್ಲದೆ ಇಂತಹ ವಿಚಾರಗಳು ಸಂಭವಿಸುವುದಿಲ್ಲ. ನಿರ್ದಿಷ್ಟವಾದ ಹಾಗೂ ಸ್ಪಷ್ಟ ಗುರಿಯನ್ನು ಗಮನದಲ್ಲಿಟ್ಟುಕೊಂಡು ಸಂವಹನ ನಡೆಸಿದಾಗ ಮಾತ್ರ ಇಂತಹ ಸಂಭಾಷಣೆ ಸಾಧ್ಯ.

3. ನೀವು ಇತ್ತೀಚೆಗೆ ಆಎಸ್​​ಎಸ್​ ಮುಖಂಡರನ್ನು ಭೇಟಿ ಮಾಡಿದ್ದೀರಾ?

ಜಾಮೀಯತ್-ಎ-ಉಲೆಮಾ-ಹಿಂದ್ (ಎ) ಈವರೆಗೆ ಆರ್​​ಎಸ್​​ಎಸ್​ ಮುಖಂಡರನ್ನು ಭೇಟಿ ಮಾಡಿಯಾಗಿಲ್ಲ. 2007ರಲ್ಲಿ ಆಂತರಿಕ ಬಿರುಕಿನಿಂದಾಗಿ ಜೆಯುಹೆಚ್ ಒಡೆದು ಎರಡು ವಿಭಾಗವಾಗಿದೆ. ಆದರೂ, ಎರಡೂ ವಿಭಾಗಗಳು ಒಂದೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಸೈಯದ್ ಅರ್ಷದ್ ಮದನಿ ಆರ್​ಎಸ್​​ಎಸ್​ ನಾಯಕ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ನಾವು ಈವರೆಗೆ ಮಾತುಕತೆ ನಡೆಸಿಲ್ಲ. ಆದರೆ, ಭವಿಷ್ಯದಲ್ಲಿ ನಾವು ಮಾತುಕತೆಗೆ ಮುಂದಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 11 ರಂದು ಬಲಪಂಥೀಯ ಶಿಕ್ಷಣ ತಜ್ಞರು ಮೊಘಲ್ ರಾಜಕುಮಾರ ದಾರಾ ಶಿಕೋಹ್ ಅವರ ಕುರಿತು ಒಂದು ವಿಚಾರ ಸಂಕಿರಣವನ್ನು ಆಯೋಜಿಸಿದ್ದರು. ಈ ವಿಚಾರ ಸಂಕಿರಣದಲ್ಲಿ ಆರ್​​ಎಸ್​ಎಸ್​ ನಾಯಕರು ನಿರಂಕುಶ ಅಧಿಕಾರಿ ಔರಂಗಜೇಬ್​ ನನ್ನು ಶ್ಲಾಘಿಸಿದ್ದರು. ದಾರಾ ಶಿಕೋಹ್ ಓರ್ವ ಉತ್ತಮ ಮುಸ್ಲಿಂ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ನಾನು ಮತ್ತೆ ಇತಿಹಾಸವನ್ನು ಕೆದಕಲು ಹೋಗುವುದಿಲ್ಲ.
ಏಕೆಂದರೆ ನಾನು ಇತಿಹಾಸವನ್ನು ಕೆದಕಿದರೆ ಎಂ.ಎಸ್. ಗೋಲ್ವಾಲ್ಕರ್, ವಿ.ಡಿ. ಸಾವರ್ಕರ್ ಅವರ ಕಥೆಗಳನ್ನು ಹೇಳಬೇಕಾಗುತ್ತದೆ. ನೆಹರೂ-ಪಟೇಲ್ ಹಾಗೂ ಗೋಲ್ವಾಲ್ಕರ್-ಸಾವರ್ಕರ್ ಇವರಲ್ಲಿ ಒಳ್ಳೆಯ ಹಿಂದು ಯಾರು? ಎಂದು ನಾನೂ ಸಹ ಪ್ರಶ್ನಿಸಬಹುದು. ಆದರೆ, ಹೀಗೆ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುತ್ತದೆ. ನಾನು ಇಂತಹ ಸಂಘರ್ಷಗಳನ್ನು ಬಯಸುವುದಿಲ್ಲ. ಬದಲಾಗಿ ವರ್ತಮಾನವನ್ನು ನೋಡಲು ಬಯಸುತ್ತೇನೆ.

ವರ್ತಮಾನದಲ್ಲಿ ಉತ್ತಮ ಹಿಂದು ಅಥವಾ ಉತ್ತಮ ಮುಸ್ಲಿಂ ಕುರಿತ ಉದಾಹರಣೆಗಳ ಕುರಿತು ಗಮನವಹಿಸಲು ನಾನು ಇಚ್ಚಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನಾವು ಎಪಿಜೆ ಅಬ್ದುಲ್ ಕಲಾಂ ಅವರನ್ನು ನೋಡಿದ್ದೇವೆ. ಅವರು ಉತ್ತಮ ಮುಸ್ಲಿಂ ಆದ ಕಾರಣ ಎಲ್ಲಾ ಸಮುದಾಯದ ಜನ ಅವರನ್ನು ಆದರ್ಶ ವ್ಯಕ್ತಿಯಾಗಿ ಕಂಡರು.

ಪ್ರಸ್ತುತ ನಾವು ದಾರಾ ಶಿಕೋಹ್ ಯುಗಕ್ಕೆ ಏತಕ್ಕಾಗಿ ಹಿಂತಿರುಗಬೇಕು? ಒಳ್ಳೆಯವನೋ ಅಥವಾ ಕೆಟ್ಟವನೋ? ಒಟ್ಟಲ್ಲಿ ಔರಂಗಜೇಬ್ ಓರ್ವ ಆಡಳಿತಗಾರ. ನಾನು ಆತನನ್ನು ಆಡಳಿತಗಾರನಾಗಿಯಷ್ಟೇ ನೋಡಲು ಬಯಸುತ್ತೇನೆ. ಔರಂಗಜೇಬ್ ಒಳ್ಳೆಯವನೇ? ಅಥವಾ ಛತ್ರಪತಿ ಶಿವಾಜಿ ಒಳ್ಳೆಯವನೇ? ಎಂಬ ತರ್ಕ ಈಗ ಅನವಶ್ಯಕ.

ನಾನು ಆಡಳಿತಗಾರನಾಗಿ ಔರಂಗಜೇಬ್​ಗೆ 8/10 ಅಂಕ ನೀಡಿದರೆ, ಶಿವಾಜಿಗೆ 10/10 ಅಂಕ ನೀಡುತ್ತೇನೆ. ಶಿವಾಜಿ ಮಹಾರಾಜರನ್ನು ನಾನು ಹಿಂದೂ ಅಥವಾ ಮುಸ್ಲಿಂ ಎಂದು ನೋಡುತ್ತಿಲ್ಲ. ರಾಜಿ ಮಾಡಿಕೊಳ್ಳಲು ನಿರಾಕರಿಸಿದ ಧೀರನಾಗಿ  ಅವರನ್ನು ನೋಡುತ್ತೇನೆ.

4. ದೇಶದಲ್ಲಿರುವ ಮಸ್ಲಿಮರ ಪ್ರಸ್ತುತ ಸ್ಥಿತಿಯ ಕುರಿತು ನಮ್ಮ ಬಳಿ ಕೆಲವು ವರದಿಗಳಿವೆ. ಈ ವರದಿಯ ಪ್ರಕಾರ ಬದಲಾವಣೆ ಅಥವಾ ಸುಧಾರಣೆ ಕುರಿತು ನೀವು ಏನನ್ನು ಹೇಳಲು ಬಯಸುವಿರಿ?

ನಾವು ಎಲ್ಲರೂ ಒಟ್ಟಾಗಿ ದೇಶದಲ್ಲಿ ಶಾಂತಿಯುವ ವಾತಾವರಣವನ್ನು ನಿರ್ಮಿಸಿದರೆ, ಮುಸ್ಲಿಂ ಸಮಾಜದವರು ಕಠಿಣ ಪರಿಶ್ರಮದಿಂದ ಮತ್ತಷ್ಟು ಅಭಿವೃದ್ಧಿ ಹೊಂದಲಿದ್ದಾರೆ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading