Biden on ISIS: ಸೈನ್ಯ ಮರಳಿರಬಹುದು, ಯುದ್ಧ ನಿಂತಿಲ್ಲ; ಅಗತ್ಯ ಬಿದ್ದಾಗ ಅಫ್ಘನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸುತ್ತೇವೆ: ಅಮೇರಿಕಾ ಗುಡುಗು

Biden on ISIS: ನಾವು ಅಫ್ಘಾನಿಸ್ತಾನದಿಂದ ಹೊರಬಂದಿದ್ದೇವೆ ಎಂದ ಮಾತ್ರಕ್ಕೆ ನಮ್ಮ ಮತ್ತು ಐಸಿಸ್ ನಡುವಿನ ವೈರತ್ವ ಮುಗಿದಿಲ್ಲ. ನಾವಿನ್ನೂ ಐಸಿಸ್ ಗೆ ಬಹಳಷ್ಟು ಪಾಠ ಕಳೀಸಬೇಕಿದೆ. ಅವರು ಯಾರೇ ಆಗಿದ್ದರೂ ಸರಿ, ಅಮೇರಿಕಾಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದರೆ ಅವರನ್ನು ಹುಡುಕಿ ಹುಡುಕಿ ನಾಶ ಮಾಡುತ್ತೇವೆ ಎಂದು ಬಿಡೆನ್ ಗುಡುಗಿದ್ದಾರೆ.

ಜೋ ಬೈಡನ್.

ಜೋ ಬೈಡನ್.

  • Share this:
ಕಾಬುಲ್: ತನ್ನ ಅತ್ಯಂತ ದೀರ್ಘಕಾಲದ ಯುದ್ಧಕ್ಕೆ ಅಂತ್ಯ ಹಾಡಿ ಅಮೇರಿಕಾ ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನೇನೋ ವಾಪಸ್ ಕರೆದುಕೊಂಡಿದೆ. ಆದರೆ ಯುದ್ಧವಿನ್ನೂ ಮುಗಿದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ಬಾರಿ ಅಮೇರಿಕಾ ಯುದ್ಧ ಸಾರಿರುವುದು ಐಸಿಸ್-ಕೆ(ISIS-K) ಸಂಘನೆ ಮೇಲೆ. ನಾವು ಸೈನ್ಯವನ್ನು ಹಿಂಪಡೆದಿದ್ದೇವೆ ಎಂದ ಮಾತ್ರಕ್ಕೆ ಐಸಿಸ್ ಮತ್ತಿತರ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟದಿಂದ ಹಿಂದೆ ಸರಿದಿದ್ದೇವೆ ಎಂದು ಅರ್ಥವಲ್ಲ. ಅಗತ್ಯ ಬಿದ್ದಾಗ ಖಂಡಿತಾ ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿ (Drone Strike) ಮಾಡುವುದಾಗಿ ಅಮೇರಿಕಾ ಅಧ್ಯಕ್ಷ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ಕಾಬುಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಕಾರು ಬಾಂಬ್ ದಾಳಿ ನಡೆದಿದ್ದಕ್ಕೆ ತಾನೇ ಕಾರಣ ಎಂದು ಐಸಿಸ್ ಹೇಳಿಕೊಂಡಿತ್ತು. ಈ ದಾಳಿಯಲ್ಲಿ ಅಮೇರಿಕಾದ 13 ಸೇನಾ ಸಿಬ್ಬಂದಿ ಸೇರಿದಂತೆ ಅನೇಕ ಅಫ್ಘನ್ ಪ್ರಜೆಗಳೂ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಅಮೇರಿಕಾ ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸಿತ್ತು.

ಸದ್ಯ ಅಫ್ಘಾನಿಸ್ತಾನದ ತಾಲಿಬಾನ್ ವಶದಲ್ಲಿದೆ. ತನ್ನ ಕೊನೆಯ ಸೈನಿಕನನ್ನೂ ಯುದ್ಧ ಭೂಮಿಯಿಂದ ಮರಳಿ ಕರೆಸಿಕೊಂಡಿದ್ದರ ಬಗ್ಗೆ ಅಮೇರಿಕಾ ಸ್ಪಷ್ಟಪಡಿಸಿದೆ. ನಂತರ ಈ ಬಗ್ಗೆ ಮಾತನಾಡಿದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, “ಇದು ಸಣ್ಣ ಯುದ್ಧವಲ್ಲ, ಅಮೇರಿಕಾ ಸೇನೆ ಕಳೆದ 2 ದಶಕಗಳವರಗೆ ಸುಮಾರು 1400 ಯೋಧರನ್ನು ಅಫ್ಘನ್ ನೆಲದಲ್ಲಿ ಕಳೆದುಕೊಂಡಿದೆ. ನಮ್ಮ 44 ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಈಗಾಗಲೇ ಅಮೇರಿಕಾ ಅಫ್ಘಾನಿಸ್ತಾನಕ್ಕಾಗಿ ಭಾರೀ ಪ್ರಮಾಣದ ಹಣ ಖರ್ಚು ಮಾಡಿದೆ. ಇನ್ನು ನಾವು ನಮ್ಮ ದೇಶದ ಸುರಕ್ಷತೆ ಮತ್ತು ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಿದೆ. ಸೇನೆ ಮರಳಿ ಕರೆದಿರುವ ನಿರ್ಧಅರದ ಹೊಣೆಯನ್ನು ನಾನೇ ಹೊರುತ್ತಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Afghanistan Crisis: ನಮ್ಮ ಕತೆ ಏನಾದ್ರೂ ಆಗ್ಲಿ, ಮಕ್ಕಳಾದರೂ ಬದುಕಲಿ ಎಂದು ತಂತಿ ಬೇಲಿಯಾಚೆ ಮಕ್ಕಳನ್ನು ಎಸೆಯುತ್ತಿದ್ದಾರೆ ಅಫ್ಘನ್ ಜನ

ತಾಲಿಬಾನ್ ಖಂಡಿತವಾಗಿಯೂ ಬಲಿಷ್ಟವಾಗಿದೆ. ಭಯೋತ್ಪಾದನೆಗೆ ಅಫ್ಘಾನಿಸ್ತಾನವನ್ನು ಬಳಸದೇ ಇರಲಿ ಎಂದು ನಾನು ಆಶಿಸುತ್ತೇನೆ. 2001ರಿಂದಲೇ ತಾಲಿಬಾನ್ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದೆ. ನಾವು ಅಫ್ಘಾನಿಸ್ತಾನದಿಂದ ಹೊರಬಂದಿದ್ದೇವೆ ಎಂದ ಮಾತ್ರಕ್ಕೆ ನಮ್ಮ ಮತ್ತು ಐಸಿಸ್ ನಡುವಿನ ವೈರತ್ವ ಮುಗಿದಿಲ್ಲ. ನಾವಿನ್ನೂ ಐಸಿಸ್ ಗೆ ಬಹಳಷ್ಟು ಪಾಠ ಕಳೀಸಬೇಕಿದೆ. ಅವರು ಯಾರೇ ಆಗಿದ್ದರೂ ಸರಿ, ಅಮೇರಿಕಾಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದರೆ ಅವರನ್ನು ಹುಡುಕಿ ಹುಡುಕಿ ನಾಶ ಮಾಡುತ್ತೇವೆ ಎಂದು ಬಿಡೆನ್ ಗುಡುಗಿದ್ದಾರೆ. ಅಮೇರಿಕಾವನ್ನು ಕೆಣಕಿದರೆ ಅದಕ್ಕೆ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಆಗಸ್ಟ್ 31ರೊಳಗೆ ಅಮೇರಿಕಾ ಸೈನ್ಯ ಅಫ್ಘಾನಿಸ್ತಾನದ ನೆಲದಿಂದ ದೂರವಾಗುವ ಗಡುವು ನೀಡಲಾಗಿತ್ತು. ಅದರಂತೆ ಅಮೇರಿಕಾ ತೆರಳಿದೆ ಕೂಡಾ. ಆದ್ರೆ ಆ ಕೊನೆಯ ಘಳಿಗೆಗಳಲ್ಲಿ ನಡೆದ ಐಸಿಸ್ ಆತ್ಮಾಹುತಿ ದಾಳಿಯಂಥಹ ಕೆಲವು ದುಷ್ಕೃತ್ಯಗಳು ಅಮೇರಿಕಾವನ್ನು ಕೆರಳಿಸಿರುವುದಂತೂ ಸತ್ಯ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಕರಾಳ ಮುಖಗಳು ಪ್ರಪಂಚಕ್ಕೇ ತಿಳಿದಿದೆ. ಮುಂದಿನ ದಿನಗಳಲ್ಲಿ ಉಗ್ರರ ನೆಚ್ಚಿನ ತಾಣವಾಗಿ ಅಫ್ಘಾನಿಸ್ತಾನ ಬೆಳೆಯುವುದಕ್ಕೆ ತಾಲಿಬಾನ್ ಬೆಂಬಲ ನೀಡಿದಲ್ಲಿ ತಾವು ಯಾವಾಗ ಬೇಕಿದ್ದರೂ ಆಕ್ರಮಣ ಮಾಡಲು ಹಿಂಜರಿಯುವುದಿಲ್ಲ ಎಂದು ಅಮೇರಿಕಾ ಎಚ್ಚರಿಕೆ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: