50:50 ಸೂತ್ರದ ಬಗ್ಗೆ ಅಮಿತ್ ಶಾ ಪ್ರಧಾನಿಗೆ ತಿಳಿಸಿದಿದ್ದರೆ ಈ ಸ್ಥಿತಿಯೇ ಉದ್ಭವವಾಗುತ್ತಿರಲಿಲ್ಲ; ಸಂಜಯ್ ರಾವತ್

ಪ್ರಚಾರದ ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಅವರು ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ಆದರೆ, ನಾವು ಸಭ್ಯತೆಯನ್ನು ಕಾಯ್ದುಕೊಂಡಿದ್ದೆವು. ಆ ಹೇಳಿಕೆಯನ್ನು ನಾವು ರಾಜಕೀಯ ಸಂದೇಶ ಎಂದು ನೋಡದ ಕಾರಣ ಅಂದು ಅವರ ಹೇಳಿಕೆಗೆ ನಾವು ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ರಾವತ್ ಪ್ರತ್ಯುತ್ತರ ನೀಡಿದ್ದಾರೆ.

HR Ramesh | news18-kannada
Updated:November 14, 2019, 5:02 PM IST
50:50 ಸೂತ್ರದ ಬಗ್ಗೆ ಅಮಿತ್ ಶಾ ಪ್ರಧಾನಿಗೆ ತಿಳಿಸಿದಿದ್ದರೆ ಈ ಸ್ಥಿತಿಯೇ ಉದ್ಭವವಾಗುತ್ತಿರಲಿಲ್ಲ; ಸಂಜಯ್ ರಾವತ್
ಸಂಜಯ್​ ರಾವತ್
  • Share this:
ಮುಂಬೈ: ಶಿವಸೇನೆಯೊಂದಿಗೆ ತಾವು ಚರ್ಚಿಸಿದ್ದ 50:50 ಅಧಿಕಾರ ಹಂಚಿಕೆ ಸೂತ್ರವನ್ನು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿಯೇ ಇಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್ ಅವರು, 50:50 ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರಿಗೆ ಸರಿಯಾದ ಸಮಯದಲ್ಲಿ ತಿಳಿಸಿದಿದ್ದರೆ ಇಂದು ಮಹಾರಾಷ್ಟ್ರದಲ್ಲಿ ಈ ರಾಜಕೀಯ ಅನಿಶ್ಚಿತತೆಯೇ ಉದ್ಭವವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬುಧವಾರ ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಅವರು, ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಶಿವಸೇನೆಯ ಬೇಡಿಕೆ ನಮಗೆ ಸ್ವೀಕಾರಾರ್ಹವಾಗಿರಲಿಲ್ಲ. ಅಲ್ಲದೇ, ಚುನಾವಣೆಗೂ ಮುನ್ನ ಶಿವಸೇನೆ ಮತ್ತು ಬಿಜೆಪಿ ನಡುವೆ 50:50 ಅಧಿಕಾರ ಹಂಚಿಕೆಯ ಮಾತುಕತೆಯೇ ನಡೆದಿರಲಿಲ್ಲ.  ಎಂದು ಹೇಳಿದ್ದರು. ಅಲ್ಲದೇ, ಮುಖ್ಯಮಂತ್ರಿ ಸ್ಥಾನ ನೀಡಲು ಬಿಜೆಪಿ ಒಪ್ಪಿಕೊಂಡಿತ್ತು ಎಂಬ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆಯನ್ನು ನಿರಾಕರಿಸಿದ ಶಾ, ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಸ್ಥಾನ ಬಿಜೆಪಿಗೆ ಎಂದು ಹಲವಾರು ಪ್ರಚಾರದ ಸಮಾವೇಶದಲ್ಲಿ ಕನಿಷ್ಠ ನೂರು ಬಾರಿ  ಹೇಳಿದ್ದೇವೆ ಎಂದು ಹೇಳಿದ್ದರು.

ಅಮಿತ್ ಶಾ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, 50:50 ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಅಮಿತ್ ಶಾ ಅವರು ಸರಿಯಾದ ಸಮಯದಲ್ಲಿ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದರೆ ಇಂದು ಮಹಾರಾಷ್ಟ್ರದಲ್ಲಿ ಈ ರಾಜಕೀಯ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಶಿವಸೇನೆ ಹೊಸ ಬೇಡಿಕೆ ನಮಗೆ ಒಪ್ಪಿಗೆ ಇರಲಿಲ್ಲ; ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರಚಾರದ ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಅವರು ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ಆದರೆ, ನಾವು ಸಭ್ಯತೆಯನ್ನು ಕಾಯ್ದುಕೊಂಡಿದ್ದೆವು. ಆ ಹೇಳಿಕೆಯನ್ನು ನಾವು ರಾಜಕೀಯ ಸಂದೇಶ ಎಂದು ನೋಡದ ಕಾರಣ ಅಂದು ಅವರ ಹೇಳಿಕೆಗೆ ನಾವು ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ರಾವತ್ ಪ್ರತ್ಯುತ್ತರ ನೀಡಿದ್ದಾರೆ.

ಅಮಿತ್ ಶಾ ಮತ್ತು ಠಾಕ್ರೆ ಮುಂಬೈನ ತಮ್ಮ ನಿವಾಸದಲ್ಲಿ ಫೆಬ್ರವರಿಯಂದು ಭೇಟಿಯಾಗಿದ್ದರು. (ಲೋಕಸಭಾ ಚುನಾವಣೆಗೂ ಮುನ್ನ). ಬಾಳಾಸಾಹೇಬ್ ಠಾಕ್ರೆ ಅವರ ಡ್ರಾಯಿಂಗ್ ರೂಂನಲ್ಲಿ ಇಬ್ಬರು ಸೇರಿದ್ದರು. ಈ ಕೊಠಡಿ ನಮಗೆ ದೇವಸ್ಥಾನವಿದ್ದಂತೆ. ಆ ದೇವಸ್ಥಾನದಲ್ಲಿಯೇ ಮಾತುಕತೆ ನಡೆದಿತ್ತು. ಪ್ರಮಾಣ ಮಾಡಿಲ್ಲ ಎಂದು ಯಾರಾದರೂ ಹೇಳಿದರೆ ಅದು ದೇವಸ್ಥಾನಕ್ಕೆ, ಬಾಳಸಾಹೇಬ್ ಠಾಕ್ರೆಗೆ ಮತ್ತು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ರಾವತ್ ಹೇಳಿದ್ದಾರೆ.
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ