HOME » NEWS » National-international » IDENTIFICATION OF CORONAVIRUS IN 8 ASIATIC LIONS IN NEHRU ZOOLOGICAL PARK SESR

ಮೂಕಪ್ರಾಣಿಗಳನ್ನು ಬಿಡದ ಕೋವಿಡ್​​; ಹೈದ್ರಾಬಾದ್​ ಮೃಗಾಲಯದ 8 ಸಿಂಹಗಳಲ್ಲಿ ಸೋಂಕು ಪತ್ತೆ

ಸಿಂಹಗಳನ್ನು ಈಗ ಐಸೋಲೇಷನ್​ಗೆ ಒಳಪಡಿಸಲಾಗಿದ್ದು, ಇತರೆ ಪ್ರಾಣಿಗಳ ಸಂಪರ್ಕಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ.

news18-kannada
Updated:May 4, 2021, 8:03 PM IST
ಮೂಕಪ್ರಾಣಿಗಳನ್ನು ಬಿಡದ ಕೋವಿಡ್​​; ಹೈದ್ರಾಬಾದ್​ ಮೃಗಾಲಯದ 8 ಸಿಂಹಗಳಲ್ಲಿ ಸೋಂಕು ಪತ್ತೆ
ಸಿಂಹ
  • Share this:
ಭಾರತದಲ್ಲಿ ಕೊರೋನಾ ವೈರಸ್​ ಸೋಂಕು ಮೊದಲ ಬಾರಿಗೆ ಪ್ರಾಣಿಗಳ ಸಂಕುಲದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿತ್ತು. ಹೈದ್ರಾಬಾದ್​ನ ನೆಹರು ಜೂಲಾಜಿಕಲ್​ ಪಾರ್ಕ್​ನ 8 ಏಷ್ಯಾನ್​ ಸಿಂಹಗಳಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ಪ್ರಾಣಿಗಳನ್ನು ಆರ್​ಟಿಪಿಸಿಆರ್​ ಪರೀಕ್ಷೆಗೆ ಒಳಪಡಿಸಿತ್ತು. ಸಿಂಹದ ಮೂಗು ಮತ್ತು ಗಂಟಲಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಕಳೆದ ವಾರ ಸಿಂಹಗಳು ಒಣ ಕೆಮ್ಮು ಮತ್ತು ಮೂಗು ಸೋರಿಕೆಯಿಂದ ಬಳಲುತ್ತಿದ್ದವು ಎಂದು ಮೃಗಾಲಯದ ನಿರ್ವಹಣೆ ವಹಿಸಿರುವ ಸುಭದ್ರಾ ದೇವಿ ತಿಳಿಸಿದ್ದಾರೆ.

ಸಿಂಹಗಳನ್ನು ಈಗ ಐಸೋಲೇಷನ್​ಗೆ ಒಳಪಡಿಸಲಾಗಿದ್ದು, ಇತರೆ ಪ್ರಾಣಿಗಳ ಸಂಪರ್ಕಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ. ಸಿಂಹಗಳ ಆರೋಗ್ಯದ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸಿಂಹಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೀವೆ ಎಂಸು ಮೃಗಾಲಯದ ನಿರ್ದೇಶಕ ಡಾ ಎಸ್​ ಕುಕ್ರೇಟಿ ತಿಳಿಸಿದ್ದಾರೆ.

ಸೋಂಕಿನ ಪಿಡುಗು ಆರಂಭವಾದಾಗಿನಿಂದಲೂ ಹಲವು ಮೃಗಾಲಯಗಳಲ್ಲಿ ಪ್ರಾಣಿಗಳು ಮನುಷ್ಯರಿಂದಾಗಿ ಸೋಂಕಿಗೆ ತುತ್ತಾಗುತ್ತಿರುವುದು ಕಂಡು ಬಂದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಾಣಿಗಳಿಗೆ ಸೋಂಕು ಹರಡದಂತೆ ತಡೆಯಲಿರುವ ಏಕೈಕ ಮಾರ್ಗ ಎಂದರೇ ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸುವುದಾಗಿದೆ. ಕೊರೋನಾ ವೈರಸ್ ಸೋಂಕು ಮಾಡುವ ವಿವಿಧ ರೀತಿಯ ಲಕ್ಷಣಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಕೊರೋನಾ ವೈರಸ್​ ಸೋಂಕು ಪ್ರಾಣಿಗಳ ಮೇಲೂ ವಿವಿಧ ರೀತಿ ಲಕ್ಷಣಗಳನ್ನು ಉಂಟು ಮಾಡುತ್ತವೆ. ಅಲ್ಲದೇ ಪ್ರಾಣಿಗಳ ಸ್ವಾಬ್​ ಮಾದರಿಯನ್ನು ಪಡೆಯುವುದು ತುಂಬಾ ಕಷ್ಟವಾಗಿದೆ ಎಂದಿದ್ದಾರೆ ಲಾಕೊನ್ಸ್​-ಸಿಸಿಎಂಬಿ ವಿಜ್ಞಾನಿ ಡಾ. ಕಾರ್ತಿಕೇಯನ್​ ವಾಸುದೇವನ್​ ತಿಳಿಸಿದ್ದಾರೆ.

ಪ್ರಾಣಿಗಳ ಕೊರೋನಾ ವೈರಸ್​ ಮಾದರಿ ಪರೀಕ್ಷಿಸುವ ನಾಲ್ಕು ಪರೀಕ್ಷಾ ಕೇಂದ್ರಗಳನ್ನು ಭಾರತ ಹೊಂದಿದೆ. ಅದರಲ್ಲಿ ಒಂದು ಲಾಕೊನ್ಸ್​ ಸಿಸಿಎಂಬಿ ಒಂದಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಾಣಿಗಳಲ್ಲಿ ಕೊರೋನಾ ವೈರಸ್​ ಸೋಂಕು ಕಂಡು ಬಂದಿರುವ ಘಟನೆ ಇದಾಗಿದೆ. ಈ ಹಿನ್ನಲೆ ಮೃಗಾಲಯವನ್ನು ಮುಚ್ಚಲಾಗಿದೆ.

ಪ್ರಪಂಚದ ಮೊದಲ ಪ್ರಕರಣವಲ್ಲ.

ಭಾರತದಲ್ಲಿ ಈ ಪ್ರಕರಣ ಮೊದಲಾದರೂ ಇದು ವಿಶ್ವದ ಮೊದಲ ಪ್ರಕರಣವಲ್ಲ. ಕಳೆದ ವರ್ಷ ಏಪ್ರಿಲ್​ನಲ್ಲಿ ನ್ಯೂ ಯಾರ್ಕ್​​ ನಗರದ ಬ್ರಾಂಕ್ಸ್​ ಮೃಗಾಲಯದಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿಯಲ್ಲಿ ಸೋಂಕು ಪತ್ತೆಯಾಗಿತ್ತು
Published by: Seema R
First published: May 4, 2021, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories