ಟ್ರೆಂಡ್​ ಆಯ್ತು ವಿಂಗ್​ ಕಮಾಂಡರ್​​ ಹೆಸರು; ಮಕ್ಕಳಿಗೆ ಅಭಿನಂದನ್​ ಹೆಸರಿಟ್ಟು ಸಂಭ್ರಮಿಸುತ್ತಿದ್ದಾರೆ ಪೋಷಕರು

ಸಾಮಾಜಿಕ ಜಾಲತಾಣದಲ್ಲಿ ಈಗ ಅಭಿನಂದನ್​ ಹೆಸರು ಟ್ರೆಂಡ್​ ಆಗಿದ್ದು, ಪುಟ್ಟ ಮಕ್ಕಳಿಗೆ ಹೆಸರಿಟ್ಟು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ ಪೋಷಕರು.

ಅಭಿನಂದನ್​

ಅಭಿನಂದನ್​

  • News18
  • Last Updated :
  • Share this:
ಭಾರತದ ವೀರಯೋಧ  ಅಭಿನಂದನ್ ವರ್ಧಮಾನ್​ ​ ಶುಕ್ರವಾರ ರಾತ್ರಿ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪಾಕ್​ ವಶದಲ್ಲಿದ್ದಾಗ ಅವರು ತೋರಿದ ದಿಟ್ಟ ಹೇಳಿಕೆಗೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ದೇಶದ ನಿಜವಾದ ಹೀರೋ ಎಂಬುದನ್ನು ಅವರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೊಗಳುತ್ತಿದ್ದಾರೆ. ಇನ್ನು ಕೆಲವರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ತಮ್ಮ ಮಕ್ಕಳಿಗೆ ಅವರ ಹೆಸರನ್ನೇ ಇಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈಗ ಅಭಿನಂದನ್​ ಹೆಸರು ಟ್ರೆಂಡ್​ ಆಗಿದ್ದು, ಪುಟ್ಟ ಮಕ್ಕಳಿಗೆ ಹೆಸರಿಟ್ಟು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ ಪೋಷಕರು.

ಇಂದು ವಿಗ್ಯಾನ್​ ಭವನ್​ನಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನ್​​ ಎಂಬ ಹೆಸರಿಗೆ ಹೊಸ ಅರ್ಥ ಸಿಗಲಿದೆ. ಅಭಿನಂದನ್​ ಎಂದರೆ ಸಂಸ್ಕೃತದಲ್ಲಿ ಶುಭಾಶಯ ಎಂದು ಈಗ ಅದಕ್ಕೆ ಹೊಸ ಅರ್ಥ ಬದಲಾಗಿದೆ ಎಂದು ವಿಂಗ್​ ಕಮಾಂಡರ್​ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು.First published: