HOME » NEWS » National-international » IDBI BANK RECRUITMENT NOTIFICATION OUT FOR SPECIALIST CADRE OFFICER OUT HG

IDBI Bank Recruitment 2020: ವಿಶೇಷ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪದವಿ, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಎಂಬಿಎ/ಪಿಜಿಡಿಎಂ/ಪಿಜಿಡಿಬಿಎ, ಬಿಎಸ್ಸಿ, ಬಿ.ಕಾಂ ಮತ್ತು ಎಂಸಿಎ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

news18-kannada
Updated:December 23, 2020, 9:28 PM IST
IDBI Bank Recruitment 2020: ವಿಶೇಷ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
  • Share this:
ಇಂಡಸ್ಟ್ರೀಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯದಲ್ಲಿ (ಐಡಿಬಿಐ) ಖಾಲಿ ಇರುವ 134 ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಆರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ.

ವಿದ್ಯಾರ್ಹತೆ:

ಪದವಿ, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಎಂಬಿಎ/ಪಿಜಿಡಿಎಂ/ಪಿಜಿಡಿಬಿಎ, ಬಿಎಸ್ಸಿ, ಬಿ.ಕಾಂ ಮತ್ತು ಎಂಸಿಎ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:  

ಡಿಜಿಎಂ ಹುದ್ದೆಗಳಿಗೆ ಕನಿಷ್ಟ 35 ರಿಂದ ಗರಿಷ್ಟ 40 ವರ್ಷ, ಎಜಿಎಂ ಹುದ್ದೆಗಳಿಗೆ ಕನಿಷ್ಟ 28 ರಿಂದ ಗರಿಷ್ಟ 40 ವರ್ಷ, ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಟ 25 ರಿಂದ ಗರಿಷ್ಟ 35 ವರ್ಷ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ:

- ಡಿಜಿಎಂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,030 ರಿಂದ 59,170 ರೂ ನೀಡಲಿದೆ- ಎಜಿಎಂ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 42,020 ರಿಂದ 51,490 ರೂ ನೀಡಲಿದೆ

- ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 31,705 ರಿಂದ 45,950 ರೂ ನೀಡಲಿದೆ

- ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,700 ರಿಂದ 42,020 ರೂ ವೇತನವನ್ನು ನೀಡಲಿದೆ.

ಆಯ್ಕೆ ಪ್ರಕ್ರಿಯೆ:

ನೇರ ಸಂದರ್ಶನ ಮತ್ತು ಗುಂಪು ಚರ್ಚೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.

-ಸಾಮಾನ್ಯ ಅಭ್ಯರ್ಥಿಗಳು 700ರೂ

-ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳು 150 ರೂ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?:

ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ https://www.idbibank.in/index.asp ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನನ್ನು ಓದಿ ನಂತರ ಮಾಹಿತಿಯನ್ನು ಭರ್ತಿ ಅರ್ಜಿ ಸಲ್ಲಿಸಬೇಕು. ಜನವರಿ 7,2021 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
Published by: Harshith AS
First published: December 23, 2020, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories