ICSE, ISC Board Results: ನಾಳೆ 10 ಮತ್ತು 12ನೇ ತರಗತಿ ಬೋರ್ಡ್ ಫಲಿತಾಂಶ

ಎರಡನೇ ಅಲೆ ಕೋವಿಡ್ ಸೋಂಕು ಉಲ್ಬಣಗೊಂಡ ಕಾರಣ ಈ ಬಾರಿ ಐಸಿಎಸ್​ಇ ಮತ್ತು ಐಎಸ್​ಸಿ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಿದ್ದವು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಜು. 23):  ಐಸಿಎಸ್​ಇ (ICSE) ಮತ್ತು ಐಎಸ್​ಸಿ (ISE) 10 ಮತ್ತು 12ನೇ ತರಗತಿ ಫಲಿತಾಂಶ ನಾಳೆ ಪ್ರಕಟವಾಗಿದೆ ಎಂದು ಕೌನ್ಸಿಲ್​ ಫಾರ್​ ಇಂಡಿಯನ್ ಸ್ಕೂಲ್​ ಸರ್ಟಿಫಿಕೇಟ್​ ಎಕ್ಸಾಮಿನೇಷನ್ಸ್ (CISCE)​ ಪ್ರಕಟಣೆ ಹೊರಡಿಸಿದೆ. ನಾಳೆ ಮಧ್ಯಾಹ್ನ ಮೂರು ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು cisce.org ಮತ್ತು results.cisce.orgನಲ್ಲಿ ಪಡೆಯಬಹುದಾಗಿದೆ, ಅಲ್ಲದೇ ಮೊಬೈಲ್​ ಸಂದೇಶd ಮೂಲಕ ಕೂಡ ಪಡೆಯಬಹುದಾಗಿದೆ. ಐಸಿಎಸ್​ಇಯ 10ನೇ ತರಗತಿ ಮತ್ತು ಐಎಸ್​ಸಿಯ 12ನೇ ತರಗತಿಯ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ನಲ್ಲಿ ಪಡೆಯಬಹುದಾಗಿದೆ ಎಂದು ಮಂಡಳಿ ತಿಳಿಸಿದೆ. 

    ಶಾಲೆಗಳಲ್ಲಿ ಪ್ರಾಂಶುಪಾಲರ ಲಾಗಿನ್​ ಐಡಿ ಮತ್ತು ಪಾಸ್​ವರ್ಡ್​ ಬಳಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕೆರಿಯರ್​ ಪೊರ್ಟಲ್​ ಅಲ್ಲಿ ಕೂಡ ಪಡೆಯಬಹುದಾಗಿದೆ.
    ವಿದ್ಯಾರ್ಥಿಗಳು ತಮ್ಮ ಐಸಿಎಸ್‌ಇ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕವೂ ಪಡೆಯಬಹುದು. ಎಸ್​ಎಂಎಸ್​ ಮೂಲಕ ಫಲಿತಾಂಶಗಳನ್ನು ಪಡೆಯಲು, ವಿದ್ಯಾರ್ಥಿಗಳು ತಮ್ಮ ಐಡಿ ನಂಬರ್​ ಅನ್ನು ಈ ಸಂಖ್ಯೆ 09248082883 ಗೆ ಕಳುಹಿಸಬೇಕಾಗುತ್ತದೆ.

    ಎರಡನೇ ಅಲೆ ಕೋವಿಡ್ ಸೋಂಕು ಉಲ್ಬಣಗೊಂಡ ಕಾರಣ ಈ ಬಾರಿ ಐಸಿಎಸ್​ಇ ಮತ್ತು ಐಎಸ್​ಸಿ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಿದ್ದವು. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುವುದು ಎಂದು ಈ ಹಿಂದೆಯೇ ಮಂಡಳಿ ಪ್ರಕಟಿಸಿತ್ತು.

    ಇದನ್ನು ಓದಿ: ಹಳ್ಳಿಗಳಲ್ಲೇ ಇನ್ಮುಂದೆ ಆಧಾರ್ ಕಾರ್ಡ್ ನೊಂದಣಿ, ಅಪ್​ಡೇಟ್ ಕಾರ್ಯ

    ಇನ್ನು ಈ ಬಾರಿ ಪರೀಕ್ಷೆ ನಡೆಯದ ಕಾರಣ ಐಸಿಎಸ್​ಇ ಮತ್ತು ಐಎಸ್ಸಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಸಾಧ್ಯವಿಲ್ಲ. ಒಂದು ವೇಳೆ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶದ ಕುರಿತು ಆಕ್ಷೇಪಣೆ ಇದ್ದರೆ ಅದನ್ನು ಯಾವ ಕಾರಣದಿಂದ ಮರು ಮೌಲ್ಯಮಾಪನ ನಡೆಸಬೇಕು ಎಂಬ ಸವಿವವರದೊಂದಿಗೆ ತಮ್ಮ ಶಾಲೆಗೆ ಅರ್ಜಿ ಹಾಕಬೇಕು ಎಂದಿದೆ.

    ಶಾಲೆಗಳು ಮೊದಲು ಈ ಅರ್ಜಿ ಪರಿಶೀಲಿಸಿ, ವಿದ್ಯಾರ್ಥಿಗಳು ನೀಡಿದ ಕಾರಣ ಸರಿಯಿದ್ದಲಿ ಮಾತ್ರ ಅದಕ್ಕೆ ಪೂರಕ ದಾಖಲೆಗಳೊಂದಿಗೆ ಸಿಐಎಸ್​ಸಿಇಗೆ ಕಳುಹಿಸಲಾಗುತ್ತದೆ.

    ಈ ವರ್ಷ ಪರೀಕ್ಷೆ ನಡೆಸದ ಹಿನ್ನಲೆ ವಿದ್ಯಾರ್ಥಿಗಳಿ 9, 10, 11ನೇ ತರಗತಿಯ ಬೋರ್ಡ್​ ಪರೀಕ್ಷೆ ವೇಳೆ ಪಡೆದ ಅಂಕಗಳ ಆಧಾರದ ಮೇಲೆ ವ  ಈ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ತೋರಿದ ಸಾಧನೆ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ಪ್ರಕಟಿಸಲಾಗಿದೆ. ಇನ್ನು 10ನೇ ತರಗತಿ ಫಲಿತಾಂಶ ಕೂ ಇದೇ ಮಾರ್ಗ ಅನುಸರಿಸಿದ್ದು, 8 ಮತ್ತು 9ನೇ ತರಗತಿ ಫಲಿತಾಂಶ ಹಾಗೂ 10ನೇ ತರಗತಿಯ ಆತಂರಿಕ ಪರೀಕ್ಷೆಗಳ ಆಧಾರದ ಮೇಲೆ ಅಂಕ ಪ್ರಕಟಿಸಲಾಗುತ್ತಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: