ಏಪ್ರಿಲ್ ತಿಂಗಳು ಎಂದರೆ ಸಾಮಾನ್ಯವಾಗಿ ಈ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಮಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಬಹುತೇಕ ರಾಜ್ಯದವರು ಅವರವರ ರಾಜ್ಯಕ್ಕೆ ಸೀಮಿತವಾಗಿರುವ 10ನೇ ತರಗತಿ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮಾರ್ಚ್ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ನಿಗದಿಪಡಿಸಿರುತ್ತಾರೆ. ಆದರೆ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ICSE Board) ಬೋರ್ಡ್ನವರು ಏಪ್ರಿಲ್ (April) ಕೊನೆಯ ವಾರದಲ್ಲಿ ಪರೀಕ್ಷೆ ಶುರು ಮಾಡಲಿದ್ದಾರೆ. ಪರೀಕ್ಷೆಗಳ ಸಮಯದಲ್ಲಿ ಸಾಮಾನ್ಯವಾಗಿ ಅನೇಕ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಪತ್ರಿಕೆಗಳು ಹೇಗೆ, ಯಾವ ಮಾದರಿಯಲ್ಲಿ ಇರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ ಮತ್ತು ಇದು ಸಹಜ ಕೂಡ.
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಏಪ್ರಿಲ್ 25, 2022 ರಿಂದ ಮೇ 23, 2022 ರವರೆಗೆ ಐಸಿಎಸ್ಇ ಬೋರ್ಡ್ನ 10ನೇ ತರಗತಿಯ 2ನೇ ಸೆಮಿಸ್ಟರ್ ಪರೀಕ್ಷೆಯನ್ನು ನಿಗದಿಪಡಿಸಿದೆ.
ಪರೀಕ್ಷೆ ಮತ್ತು ಅಧ್ಯಯನ ಸಾಮಗ್ರಿಗಳ ಬಗ್ಗೆ ವಿವರಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. ಐಸಿಎಸ್ಇ ಅಥವಾ 10ನೇ ತರಗತಿಯ 2ನೇ ಸೆಮಿಸ್ಟರ್ ಇಂಗ್ಲೀಷ್ ಭಾಷಾ ಪರೀಕ್ಷೆಯನ್ನು ಏಪ್ರಿಲ್ 25 ರಂದು ಬೆಳಗ್ಗೆ 11 ರಿಂದ ನಡೆಸಲಾಗುತ್ತದೆ. ಪರೀಕ್ಷೆಯು ಸೂಚಿಸಿದ ಸಮಯದಿಂದ ಒಂದೂವರೆ ಗಂಟೆಗಳವರೆಗೆ ಮುಂದುವರಿಯುತ್ತದೆ.
ಐಸಿಎಸ್ಇಗಾಗಿ ಸೆಮಿಸ್ಟರ್ 2 ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ನಾಲ್ಕು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಪ್ರಯತ್ನಿಸಬೇಕು, ಅದನ್ನು ಪತ್ರಿಕೆಯಲ್ಲಿ ನಮೂದಿಸಲಾಗುತ್ತದೆ. ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಅಥವಾ ಪ್ರಶ್ನೆಗಳ ಭಾಗಗಳಿಗೆ ಉದ್ದೇಶಿತ ಅಂಕಗಳನ್ನು ಬ್ರಾಕೆಟ್ಗಳಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪ್ರಶ್ನೆ ಸಂಖ್ಯೆ 1 ಕ್ಕೆ ಉತ್ತರಿಸಲು 35 ನಿಮಿಷಗಳಿಗಿಂತ ಹೆಚ್ಚು ಮತ್ತು ಪ್ರಶ್ನೆ ಸಂಖ್ಯೆ 2 ಕ್ಕೆ ಉತ್ತರಿಸಲು 20 ನಿಮಿಷಗಳನ್ನು ಕಳೆಯಲು ಸೂಚಿಸಲಾಗಿದೆ.
ಈ ಮಧ್ಯೆ, ಸಿಐಎಸ್ಸಿಇ ಏಪ್ರಿಲ್ 26, 2022 ರಿಂದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ) ಅಥವಾ 12ನೇ ತರಗತಿಯ ಸೆಮಿಸ್ಟರ್ 2ರ ಪರೀಕ್ಷೆಗಳನ್ನು ಪ್ರಾರಂಭಿಸಲಿದೆ. ಐಸಿಎಸ್ಇ 10ನೇ ತರಗತಿ ಸೆಮಿಸ್ಟರ್ 2 ಮೇ 23 ರಂದು ಕೊನೆಗೊಳ್ಳುತ್ತಿದ್ದರೆ, ಐಎಸ್ಸಿ ಅಥವಾ 12ನೇ ತರಗತಿ ಪರೀಕ್ಷೆಯನ್ನು ಜೂನ್ 13 ರವರೆಗೆ ಮುಂದುವರಿಸಲಾಗುವುದು.
10ನೇ ತರಗತಿ ಮತ್ತು 12ನೇ ತರಗತಿ ಸೆಮಿಸ್ಟರ್ 2ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ ಸಿಐಎಸ್ಸಿಇ, ಪರೀಕ್ಷೆಯ ವೇಳಾಪಟ್ಟಿಯ ಮೇಲೆ ಸೂಚಿಸಲಾದ ಸಮಯದ ಜೊತೆಗೆ, ಪ್ರಶ್ನೆ ಪತ್ರಿಕೆಯನ್ನು ಓದಲು ಹೆಚ್ಚುವರಿ 10 ನಿಮಿಷಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. "ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ" ಎಂದು ಸಿಐಎಸ್ಸಿಇ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ