ICSE, ISC Result 2020: ಇಂದು ಮಧ್ಯಾಹ್ನ 3 ಗಂಟೆಗೆ ICSE, ISC 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಸಿಐಎಸ್​ಸಿಇ) 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.

news18-kannada
Updated:July 10, 2020, 9:13 AM IST
ICSE, ISC Result 2020: ಇಂದು ಮಧ್ಯಾಹ್ನ 3 ಗಂಟೆಗೆ ICSE, ISC 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜು. 10): ಇಂದು ಮಧ್ಯಾಹ್ನ ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್​ಇ) 10ನೇ ತರಗತಿ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ (ಐಎಸ್​ಸಿ)ಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಸಿಐಎಸ್​ಸಿಇ) 10 ಮತ್ತು 12ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ಆನ್​ಲೈನ್ ಮೂಲಕ ಫರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು. ಮಾರ್ಚ್​ 19ರಿಂದ ನಡೆಯಬೇಕಾಗಿದ್ದ ಸಿಬಿಎಸ್​ಇ ಪರೀಕ್ಷೆಗಳನ್ನು ಲಾಕ್​ಡೌನ್​ನಿಂದಾಗಿ ರದ್ದುಗೊಳಿಸಲಾಗಿತ್ತು. ಹೀಗಾಗಿ, ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಈ ಬಾರಿ ಗ್ರೇಡ್​ಗಳನ್ನು ನಿರ್ಧರಿಸಲಾಗಿದೆ.

ಮಧ್ಯಾಹ್ನ 3 ಗಂಟೆ ಬಳಿಕ ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ...

  •  ಐಸಿಎಸ್​ಇ/ ಐಎಸ್​ಸಿ ಫಲಿತಾಂಶವನ್ನು ವೀಕ್ಷಿಸಲು cisce.org ವೆಬ್​ಸೈಟ್​ಗೆ ಭೇಟಿ ನೀಡಿ.

  • ಬಳಿಕ, ಐಸಿಎಸ್‌ಇ ಅಥವಾ ಐಎಸ್ಸಿ ಕೋರ್ಸ್ ಆಯ್ಕೆ ಮಾಡಿ. ನಂತರ ಫಲಿತಾಂಶ 2020ರ ಮೇಲೆ ಕ್ಲಿಕ್ ಮಾಡಿ.

  • ನಿಮಗೆ ನೀಡಿರುವ ಯುಐಡಿ, ಪ್ರವೇಶ ಸಂಖ್ಯೆ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
  • ನಂತರ Submit ಎಂಬಲ್ಲಿ ಕ್ಲಿಕ್ ಮಾಡಿದರೆ ಫಲಿತಾಂಶ ಸಿಗುತ್ತದೆ.

Published by: Sushma Chakre
First published: July 10, 2020, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading