ಪ್ರಾಥಮಿಕ ಶಾಲಾ ಮಕ್ಕಳು ಸೋಂಕನ್ನು ನಿಭಾಯಿಸುವಲ್ಲಿ ಜಾಣರು, ಶಾಲೆ ತೆರೆಯಿರಿ : ಐಸಿಎಂಆರ್ ವರದಿ

ಸಿಬ್ಬಂದಿಗೆ ಲಸಿಕೆ ಹಾಕಿದ ನಂತರ ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ವಿವೇಕಯುತವಾಗಿದೆ' ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಇತ್ತೀಚಿನ ಆರೋಗ್ಯ ಸಚಿವಾಲಯದ ಬ್ರೀಫಿಂಗ್‌ನಲ್ಲಿ ಸೂಚನೆಯೊಂದನ್ನು ತಿಳಿಸಿದೆ. ಪ್ರಾಥಮಿಕ ಶಾಲೆಗಳನ್ನು ಮೊದಲು ತೆರೆಯುವುದು ಉತ್ತಮ. ಏಕೆಂದರೆ ಮಕ್ಕಳು ಕೋವಿಡ್ 19 ಸೋಂಕನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎನ್ನುವ ಅಚ್ಚರಿಯ ಹೇಳಿಕೆ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು, 'ವಯಸ್ಕರಿಗಿಂತ ಮಕ್ಕಳು ವೈರಲ್ ಸೋಂಕುಗಳನ್ನು ನಿಭಾಯಿಸುವಲ್ಲಿ ಗಣನೀಯವಾಗಿ ಉತ್ತಮರು ಎನ್ನುವುದು ನಮಗೆ ಅರ್ಥವಾಗಿದೆ. ಮಕ್ಕಳು ಮತ್ತು ವಯಸ್ಕರಲ್ಲಿ ಪ್ರತಿಕಾಯದ ಶಕ್ತಿ ಒಂದೇ ರೀತಿಯಾಗಿದೆ. ಒಂದು ಅಂಶವನ್ನು ಇಲ್ಲಿ ಗಮನಿಸಬೇಕು.


  ಕೊರೊನಾದ ಯಾವುದೇ ಅಲೆಗಳು ಬಂದಾಗಲೂ ಕೆಲವು ಸ್ಕ್ಯಾಂಡಿನೇವಿಯನ್ ದೇಶಗಳು ತಮ್ಮ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಿಲ್ಲ ಎನ್ನುವುದು ಈ ಆಯಾಮಕ್ಕೆ ಹೊಸ ನೋಟವನ್ನು ನೀಡುತ್ತದೆ' ಎಂದಿದ್ದಾರೆ. ವಯಸ್ಕರಿಗಿಂತ ಮಕ್ಕಳು ವೈರಲ್ ಸೋಂಕನ್ನು ನಿಯಂತ್ರಿಸುವಲ್ಲಿ ಉತ್ತಮರು, ಐಸಿಎಂಆರ್ ಪ್ರಕಾರ, ಮಕ್ಕಳ ವ್ಯವಸ್ಥೆಗಳಲ್ಲಿ ಕಡಿಮೆ ಪ್ರಮಾಣದ ಏಸ್ ಗ್ರಾಹಕಗಳನ್ನು ಹೊಂದಿರುವುದು ಇದಕ್ಕೆ ಕಾರಣವಾಗಿದೆ. 'ಈ ಹಿನ್ನೆಲೆಯಲ್ಲಿ ಒಮ್ಮೆ ನಿರ್ಧಾರ ಕೈಗೊಂಡು ಪ್ರಾಥಮಿಕ ಸಿಬ್ಬಂದಿಗೆ ಲಸಿಕೆ ಹಾಕಿದ ನಂತರ ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ವಿವೇಕಯುತವಾಗಿದೆ' ಎಂದು ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.


  ಮತ್ತೊಂದೆಡೆ ಶಿಕ್ಷಕರು ಮತ್ತು ಇನ್ನಿತರ ಸಿಬ್ಬಂದಿ ವರ್ಗ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಐಸಿಎಂಆರ್ ತಿಳಿಸಿದೆ. ಐಸಿಎಂಆರ್ ತನ್ನ ನಾಲ್ಕನೇ ರಾಷ್ಟ್ರವ್ಯಾಪಿ ಸಿರೊ ಸರ್ವೇಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಆರು ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು (67.6%) ಕೋವಿಡ್​ 19 ಪ್ರತಿಕಾಯಗಳನ್ನು ಹೊಂದಿದೆ. ಮತ್ತೊಂದೆಡೆ, ಸುಮಾರು 40 ಕೋಟಿ ಭಾರತೀಯರು ಇನ್ನೂ ವೈರಸ್ ಸೋಂಕಿನ ಅಪಾಯದಲ್ಲಿದ್ದಾರೆ ಎಂದು ಅದು ಬಹಿರಂಗಪಡಿಸಿದೆ.


  ಸಿರೊ ಸರ್ವೇಯ ಆವಿಷ್ಕಾರಗಳು ಆಶಾವಾದವಾಗಿದ್ದರೂ, ಸರ್ಕಾರಕ್ಕೆ ಈ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಅಗತ್ಯವಿದೆ. ಅಲ್ಲದೇ ಕೋವಿಡ್ 19 ಸೂಕ್ತವಾದ ನಡವಳಿಕೆಯನ್ನು ಅನುಸರಿಸಬೇಕು ಎಂದು ಸರ್ಕಾರ ಹೇಳಿದೆ.


  ಜೂನ್ ಮತ್ತು ಜುಲೈನಲ್ಲಿ, ಐಸಿಎಂಆರ್ 4 ನೇ ರಾಷ್ಟ್ರವ್ಯಾಪಿ ಸಿರೊ ಸರ್ವೇ ನಡೆಸಿತು.


  ಸಮೀಕ್ಷೆ ನಡೆಸಿದ ಆರೋಗ್ಯ ಕಾರ್ಯಕರ್ತರಲ್ಲಿ ಎಂಭತ್ತೈದು ಪ್ರತಿಶತದಷ್ಟು ಜನರು ಪ್ರತಿಕಾಯಗಳನ್ನು ಹೊಂದಿದ್ದರೆ, ಹತ್ತು ಪ್ರತಿಶತದಷ್ಟು ಜನರು ಇನ್ನೂ ಲಸಿಕೆ ತೆಗೆದುಕೊಂಡಿಲ್ಲ.


  ಇದಿಷ್ಟೇ ಅಲ್ಲದೇ ಸಂಪೂರ್ಣವಾಗಿ ಲಸಿಕೆ ತೆಗೆದುಕೊಂಡಿರುವವರು ಮಾತ್ರ ಪ್ರಯಾಣಗಳನ್ನು ಕೈಗೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಜನರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕೂಟಗಳಿಂದ ದೂರವಿರಲು ಮತ್ತು ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಪ್ರಯಾಣಿಸಲು ಸಲಹೆ ನೀಡಿದೆ.


  ಜುಲೈ 19, ಸೋಮವಾರ, ಭಾರತವು 125 ದಿನಗಳಲ್ಲಿ ಕಡಿಮೆ ಹೊಸ ಪ್ರಕರಣಗಳ ದಾಖಲೆಯನ್ನು ದಾಖಲಿಸಿದೆ. 30,093 ಹೊಸ ಸೋಂಕುಗಳು ಕಂಡು ಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,06,130 ಕ್ಕೆ ಇಳಿದಿದೆ, ಇದು 117 ದಿನಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ.


  ಒಟ್ಟಿನಲ್ಲಿ ಪ್ರತಿನಿತ್ಯ ಹೊಸದೊಂದು ವರದಿಗಳು ಮಕ್ಕಳ ಶಿಕ್ಷಣದ ನಿರ್ಧಾರಗಳಲ್ಲಿ ಸವಾಲನ್ನು ಒಡ್ಡುತ್ತಿದೆ. 3 ನೇ ಅಲೆಯ ಒತ್ತಡದ ನಡುವೆಯೂ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ. ಆ ಮೂಲಕ ಶಿಕ್ಷಣ ವ್ಯವಸ್ಥೆಯ ತಳಮಳವನ್ನು ನಿವಾರಿಸಲು ತಜ್ಞರು ಹೇಗೆ ಚಿಂತಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  First published: