Viral Video: ಈ ಬೇಸಿಗೆಯಲ್ಲೂ ಆಕಾಶದಿಂದ ಉದುರಿತು 10 ಕೆಜಿ ಮಂಜುಗಡ್ಡೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

10 ಕೆ.ಜಿ ತೂಕದ ಬೃಹತ್ ಮಂಜುಗಡ್ಡೆ ಏಕಾಏಕಿ ಆಕಾಶದಿಂದ ವ್ಯಕ್ತಿಯೊಬ್ಬರ ಮನೆ ಮುಂದೆ ಬಿದ್ದಿದೆ. ಈ ಬೇಸಿಗೆಯಲ್ಲೂ ಹಿಮಪಾತವಾಗಿರೋದನ್ನ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.

  • Local18
  • 2-MIN READ
  • Last Updated :
  • Share this:

ಕೋಲ್ಕತ್ತಾ: ಎಲ್ಲೆಲ್ಲೂ ಸೆಖೆ, ಮೈತುಂಬಾ ಬೆವರು, ಏನಪ್ಪಾ ಈ ವಾತಾವರಣ ಎಂದು ನಾವೆಲ್ಲ ಅಂದ್ಕೊತಿದ್ದೀವಿ. ಆದ್ರೆ ಎಲ್ಲಿತ್ತೋ ಏನೋ, ಇಲ್ಲಿ ಮಾತ್ರ ಧೊಪ್ ಎಂದು 10 ಕೆಜಿ ಮಂಜುಗಡ್ಡೆ ಆಕಾಶದಿಂದ ಉದುರಿ ಬಿದ್ದಿದೆ. ಪಶ್ಚಿಮ ಬಂಗಾಳದ (West Bengal) ಪಶ್ಚಿಮ ಮಿಡ್ನಾಪುರದ ಡೆಬ್ರಾ ಎಂಬ ಪ್ರದೇಶದಲ್ಲಿ ಆಕಾಶದಿಂದ ಸುಮಾರು 10 ಕೆಜಿ ಹಿಮ ಬಿದ್ದಿದೆ. ಈ ಐಸ್ ಕ್ಯೂಬ್ (Ice Cube) ಎಲ್ಲಿಂದ ಬಂತು ಎಂಬ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.


ಬೆಚ್ಚಿಬಿದ್ದ ಮನೆಯವರು
10 ಕೆ.ಜಿ ತೂಕದ ಬೃಹತ್ ಮಂಜುಗಡ್ಡೆ ಏಕಾಏಕಿ ಆಕಾಶದಿಂದ ವ್ಯಕ್ತಿಯೊಬ್ಬರ ಮನೆ ಮುಂದೆ ಬಿದ್ದಿದೆ. ಈ ಬೇಸಿಗೆಯಲ್ಲೂ ಹಿಮಪಾತವಾಗಿರೋದನ್ನ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.


ಇದನ್ನೂ ಓದಿ: Shocking News: 31 ದಿನಗಳ ಕಾಲ ಕೀಟ ತಿಂದು ಬದುಕಿದ ಪುಣ್ಯಾತ್ಮ, ಕಥೆ ಕೇಳಿದ್ರೆ ಮೈ ಜುಮ್ಮೆನ್ನುತ್ತೆ


ಪಶ್ಚಿಮ ಮಿಡ್ನಾಪುರ ಜಿಲ್ಲೆಯ ದೇಬ್ರಾ ಬ್ಲಾಕ್​ನ ಮೊಲಿಹಾಟಿ ಪ್ರದೇಶದ ನಂ. 7 ರ ಬಾಲಚಕ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 8:30 ರ ಸುಮಾರಿಗೆ ಈ ಘಟನೆ ನಡೆದಿದೆ.


ಅದೃಷ್ಟವಷಾತ್ ಯಾರಿಗೂ ಗಾಯಗಳಾಗಿಲ್ಲ
ಸ್ಥಳೀಯ ನಿವಾಸಿ ನಕುಲ್ ಜಾನ್ ಎಂಬುವವರ ಮನೆ ಮುಂದೆ ಭಾರೀ ಸದ್ದಿಗೆ ಮಂಜುಗಡ್ಡೆ ನೆಲಕ್ಕೆ ಬಿದ್ದಿದೆ. ಇದರ ತೂಕ 10-12 ಕೆಜಿ ಎಂದು ಅಂದಾಜಿಸಲಾಗಿದೆ. ಅದೃಷ್ಟವಷಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.




ಇದನ್ನೂ ಓದಿ: Hotel Food: ಬೇಕಂತಲೇ ಕೆಟ್ಟ ರಿವ್ಯೂ ಇರೋ ಹೋಟೆಲ್‌ನ ಊಟ ಆರ್ಡರ್ ಮಾಡಿದ ವಿದೇಶಿ ಪ್ರಜೆ, ಆಮೇಲಾಗಿದ್ದು ಸಖತ್ ಸುದ್ದಿ!


ಬೇಸಿಗೆಯಲ್ಲಿ ಆಕಾಶದಲ್ಲಿ ಮೋಡಗಳು ಕೇಂದ್ರೀಕೃಗೊಂಡು ಮಂಜುಗಡ್ಡೆ ಸೃಷ್ಟಿಯಾಗುತ್ತದೆ. ರಾಸಾಯನಿಕ ಕ್ರಿಯೆಯ ಪರಿಣಾಮವಾಗಿ ನೀರಿನ ಹನಿಗಳ ಶೇಖರಣೆಯಾಗಿ ಮಂಜುಗಡ್ಡೆಯ ಸಾಂದ್ರತೆಯು ಹೆಚ್ಚಾಗಿ ಹೀಗೆ ಬೃಹತ್ ಮಂಜುಗಡ್ಡೆ ಆಕಾಶದಿಂದ ಉದುರಿದೆ ಎಂದು ಅಂದಾಜಿಸಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: