ಬ್ಯಾಂಕಿಂಗ್ ವೈಯಕ್ತಿಕ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕೇಡರ್ ವರ್ಗದ ತಜ್ಞ ಅಧಿಕಾರಿಗಳ ಆಯ್ಕೆಗೆ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (ಸಿಆರ್ಪಿ) ನೋಟಿಫಿಕೇಷನ್ ಹೊರಡಿಸಿದೆ. ನವೆಂಬರ್ 2ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 26 ಮತ್ತು 27ರಂದು ಪ್ರಿಲಿಮಿನರಿ ಪರೀಕ್ಷೆ ನಡೆಯಲಿದ್ದು, ಜನವರಿ 24ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ.
ಐಟಿ ಅಧಿಕಾರಿ (ಸ್ಕೇಲ್ 1), ಅಗ್ರಿಕಲ್ಚರ್ ಫೀಲ್ಡ್ ಆಫೀಸರ್ (ಸ್ಕೇಲ್ 1), ರಾಜ್ ಭಾಷಾ ಅಧಿಕಾರಿ (ಸ್ಕೇಲ್ 1), ಕಾನೂನು ಅಧಿಕಾರಿ (ಸ್ಕೇಲ್ 1), ಎಚ್.ಆರ್./ ಪರ್ಸನಲ್ ಆಫೀಸರ್ (ಸ್ಕೇಲ್ 1), ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ 1) ಹುದ್ದೆಗಳ ನೇಮಕಾನತಿಗೆ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ- ನವೆಂಬರ್ 2
ಕೊನೇ ದಿನಾಂಕ- ನವೆಂಬರ್ 23
ಪ್ರಿಲಿಮಿನರಿ ಆನ್ಲೈನ್ ಪರೀಕ್ಷೆ - ಡಿಸೆಂಬರ್ 26, 27
ಮುಖ್ಯ ಪರೀಕ್ಷೆ - ಜನವರಿ 24
ಅರ್ಹತೆ:
ಅಭ್ಯರ್ಥಿಗೆ 20 ವರ್ಷ ತುಂಬಿರಬೇಕು ಮತ್ತು 30 ವರ್ಷ ಮೀರಿರಬಾರದು
ಆಯಾ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು
ಇದನ್ನು ಓದಿ: ಕಮಲನಾಥ್ ಸ್ಟಾರ್ ಪ್ರಚಾರಕ ಸ್ಥಾನ ಹಿಂಪಡೆದಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ; ಆಯೋಗಕ್ಕೆ ಆ ಅಧಿಕಾರ ಇಲ್ಲ ಎಂದ ಕೋರ್ಟ್
ಸಿಲಬಸ್:
ಇಂಗ್ಲಿಷ್ ಭಾಷೆ; ವ್ಯಾಕರಣ, ವಾಕ್ಯ ರಚನೆ, ಪ್ರಸಕ್ತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಅದರ ಇತಿಹಾಸ, ಹಣಕಾಸು ನೀತಿ, ಆರ್ಬಿಐ ಸಂಬಂಧಿತ ಸುದ್ದಿಗಳು, ಎಸ್ಬಿಐ ಮತ್ತು ಇತರೆ ಬ್ಯಾಂಕುಗಳು, ಭಾರತೀಯ ಹಣಕಾಸು ವ್ಯವಸ್ಥೆಯ ನೋಟ, ಸರ್ಕಾರದ ಯೋಜನೆಗಳು ಮತ್ತು ಹಣಕಾಸು ಮಾರುಕಟ್ಟೆ.
ಗಣಿತಶಾಸ್ತ್ರ; ಅನುಪಾತ ಮತ್ತು ಸರಾಸರಿ, ಸಮಯ ಮತ್ತು ಕೆಲಸ, ವೇಗ, ಅಂತರ ಮತ್ತು ಸಮಯ, ಎತ್ತರ ಮತ್ತು ಅಂತರ, ಕ್ರಮಪಲ್ಲಟನೆ ಮತ್ತು ಸಂಯೋಜನೆಗಳು, ಸರಳ ಮತ್ತು ಸಂಯುಕ್ತ ಆಸಕ್ತಿ, ಶೇಕಡಾವಾರು, ಸಹಭಾಗಿತ್ವ, ಪರಿಮಾಣ ಮತ್ತು ಮೇಲ್ಮೈ ವಿಸ್ತೀರ್ಣ, ಬಾರ್ ಮತ್ತು ಗ್ರಾಫ್ಗಳು, ಲೈನ್ ಚಾರ್ಟ್ಗಳು, ಟೇಬಲ್ಸ್, ಸಮೀಕರಣಗಳು, ತ್ರಿಕೋನ ಮಿತಿ, ಪೈ ಚಾರ್ಟ್ಗಳು.
ಪೇಪರ್ ಪ್ಯಾರ್ಟನ್:
ಎರಡು ಗಂಟೆ ಸಮಯದಲ್ಲಿ ಮೂರುವಿಭಾಗದಲ್ಲಿ ತಲಾ 50 ಪ್ರಶ್ನೆಗಳಿರುತ್ತವೆ. ಇಂಗ್ಲಿಷ್ ಭಾಷೆ (25 ಅಂಕ), ತರ್ಕ (50 ಅಂಕ), ಸಾಮಾನ್ಯ ಜ್ಞಾನ (50 ಅಂಕ) ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದ ವಿಶೇಷ ಉಲ್ಲೇಖ.
ಆಯ್ಕೆ ಪ್ರಕ್ರಿಯೆ:
ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಪರೀಕ್ಷೆಯಲ್ಲಿ 150 ಪ್ರಶ್ನೆಗಳಿಗೆ 125 ಅಂಕಗಳಿರುತ್ತವೆ. ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ