IBPS Jobs 2019: ಐಬಿಪಿಎಸ್‌ನ 1163 ಸ್ಪೆಷಲಿಸ್ಟ್‌ ಆಫೀಸರ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ

IBPS Jobs 2019: ಐಬಿಪಿಎಸ್​ ಸ್ಪೆಷಲಿಸ್ಟ್​ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಎರಡು ಹಂತದ ಆನ್​ಲೈನ್​ ಪರೀಕ್ಷೆ ನಡೆಸಲಾಗುತ್ತದೆ. ಮೊದಲಿಗೆ ಆನ್​ಲೈನ್​ ಪ್ರಿಲಿಮಿನರಿ ಪರೀಕ್ಷೆ ನಡೆಸಲಾಗುತ್ತದೆ.

news18-kannada
Updated:November 12, 2019, 9:47 PM IST
IBPS Jobs 2019: ಐಬಿಪಿಎಸ್‌ನ 1163 ಸ್ಪೆಷಲಿಸ್ಟ್‌ ಆಫೀಸರ್​​ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs (Google)
  • Share this:
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್​) 1163 ಸ್ಟೆಷಲಿಸ್ಟ್​​ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ನವೆಂಬರ್​ 26, 2019ರೊಳಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಐಬಿಪಿಎಸ್ಸಂಸ್ಥೆ ದೇಶಾದ್ಯಂತ ನೇಮಕಾತಿ ಮಾಡಿಕೊಳ್ಳಲಿದ್ದು, ಖಾಲಿ ಹುದ್ದೆಯ ಸಂಪೂರ್ಣ ವಿವರಗಳನ್ನು ಅಧಿಕೃತ ವೆಬ್ಸೈಟ್ ibps.in ನಲ್ಲಿ ನೀಡಿದೆ.

ಹುದ್ದೆಗಳ ವಿವರ:

ಐಟಿ ಆಫೀಸರ್ (ಸ್ಕೇಲ್ - 1) : 76

ಅಗ್ರಿಕಲ್ಚರಲ್ ಫೀಲ್ಡ್‌ ಆಫಿಸರ್(ಸ್ಕೇಲ್-1) : 670

ರಾಜ್ಯಭಾಷಾ ಅಧಿಕಾರಿ (ಸ್ಕೇಲ್-1) : 27

ಕಾನೂನು ಅಧಿಕಾರಿ (ಸ್ಕೇಲ್-1) : 60

HR/ಪರ್ಸೊನೆಲ್ ಆಫೀಸರ್ (ಸ್ಕೇಲ್-1) : 20
Loading...

ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) : 310

ಒಟ್ಟು ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಸಂಖ್ಯೆ : 1163

ವಿದ್ಯಾರ್ಹತೆ:

ಸ್ಟೆಷಲಿಸ್ಟ್​​​ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ ಮತ್ತು ಕಾನೂನು ಪದವಿಯನ್ನು ಪಡೆದಿರಬೇಕು.

ವಯೋಮಿತಿ:
20 ರಿಂದ 30 ವರ್ಷದ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೇಮಕಾತಿಯ ಅನುಸಾರವಾಗಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಆಯ್ಕೆ  ಪ್ರಕ್ರಿಯೆ:

ಐಬಿಪಿಎಸ್​ ಸ್ಪೆಷಲಿಸ್ಟ್​ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಎರಡು ಹಂತದ ಆನ್​ಲೈನ್​ ಪರೀಕ್ಷೆ ನಡೆಸಲಾಗುತ್ತದೆ. ಮೊದಲಿಗೆ ಆನ್​ಲೈನ್​ ಪ್ರಿಲಿಮಿನರಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಆನ್​ಲೈನ್​ ಮುಖ್ಯ ಪರೀಕ್ಷೆ ಇರುತ್ತದೆ.

ಅರ್ಜಿ ಶುಲ್ಕದ ವಿವರ:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು 100 ರೂ. ಮತ್ತು ಸಾಮಾನ್ಯ ಅಭ್ಯರ್ಥಿಗಳು 600 ರೂ. ಆರ್ಜಿ ಶುಲ್ಕವನ್ನು ಆನ್​ಲೈನ್​ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಸುವುದು ಹೇಗೆ?:

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ibps.in ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಆನ್​ಲೈನ್​​ನಲ್ಲೇ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ನವೆಂಬರ್​​​ 6 ರಿಂದ 26 ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Railway Jobs: ಎಸ್ಎಸ್ಎಲ್​ಸಿ ಪಾಸಾದ ಅಭ್ಯರ್ಥಿಗಳಿಗೆ ದಕ್ಷಿಣ ರೈಲ್ವೆ ಇಲಾಖೆಯಲ್ಲಿ 4103 ಖಾಲಿ ಹುದ್ದೆಗಳು

ಇದನ್ನೂ ಓದಿ: Bigg Boss Kannada 7 Updates: ಈ ವಾರ 11 ಸ್ಪರ್ಧಿಗಳು ನಾಮಿನೇಟ್​; ಇಬ್ಬರು ಸ್ಪರ್ಧಿಗಳು ಮನೆಯಿಂದ ಔಟ್​?

ಇದನ್ನೂ ಓದಿ:  Vodafone; ವೊಡಾಫೋನ್ ಹೊಸ ಪ್ರಿಪೇಯ್ಡ್ ಪ್ಲಾನ್; 252GB ಡೇಟಾ ಆಫರ್!

First published:November 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...