ಗುಪ್ತಚರ ಸಿಬ್ಬಂದಿ ಕೊಲೆ ಆರೋಪ: ತಾಹಿರ್ ಹುಸೇನ್ ಶರಣಾಗತಿ, ಬಂಧನ

ಫೆ. 24ರ ಮಧ್ಯರಾತ್ರಿ ಗಲಭೆಕೋರರು ತಾಹಿರ್ ಹುಸೇನ್ ಅವರ ಮನೆಯನ್ನ ಸುತ್ತುವರಿದಿದ್ದರು. ಪೊಲೀಸರು ಹೋಗಿ ರಕ್ಷಣೆ ಮಾಡಿದರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಅಂದು ತಾಹಿರ್ ಅವರಿಗೆ ಯಾವುದೇ ಪ್ರಾಣಾಪಾಯ ಇರಲಿಲ್ಲ ಎಂದು ಪೊಲೀಸರು ಇದೀಗ ಸ್ಪಷ್ಟಪಡಿಸಿದ್ದಾರೆ.

ತಾಹೀರ್​​ ಹುಸೇನ್​​

ತಾಹೀರ್​​ ಹುಸೇನ್​​

  • News18
  • Last Updated :
  • Share this:
ನವದೆಹಲಿ(ಮಾ. 05): ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ಅಂಕಿತ್ ಶರ್ಮಾ ಅವರನ್ನು ಹತ್ಯೆಗೈದ ಆರೋಪ ಹೊತ್ತಿರುವ ಉಚ್ಛಾಟಿತ ಆಮ್ ಆದ್ಮಿ ಕಾರ್ಪೊರೇಟರ್ ತಾಹಿರ್ ಹುಸೇನ್ ಅವರನ್ನು ಬಂಧಿಸಲಾಗಿದೆ. ಫೆಬ್ರುವರಿ 26ರಿಂದ ನಾಪತ್ತೆಯಾಗಿದ್ದ ತಾಹಿರ್ ಹುಸೇನ್ ಇಂದು ರೋಸ್ ಅವೆನ್ಯೂ ಕೋರ್ಟ್​ಗೆ ಆಗಮಿಸಿ ಶರಣಾದರು. ಆ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಅಂಕಿತ್ ಶರ್ಮಾ ಮೃತದೇಹ ಫೆ. 26ರಂದು ಪತ್ತೆಯಾಗಿತ್ತು. ತಾಹೀರ್ ಹುಸೇನ್ ಅವರೇ ಶರ್ಮಾರನ್ನು ಕೊಲೆ ಮಾಡಿದರೆಂಬ ಆರೋಪ ಆಗಲೇ ಕೇಳಿಬಂದಿತ್ತು. ತಾಹಿರ್ ಮನೆಗೆ ಪೊಲೀಸರು ತೆರಳಿದಾಗ ಅವರು ಅಲ್ಲಿರಲಿಲ್ಲ. ಶರ್ಮಾ ತಂದೆ ನೀಡಿದ ದೂರಿನ ಮೇರೆಗೆ ಹುಸೇನ್ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿ ಪ್ರಕರಣ ಹಾಕಿದ್ದಾರೆ.

ನಾಪತ್ತೆಯಾಗಿದ್ದ ತಾಹೀರ್ ಹುಸೇನ್ ತಮ್ಮ ವಕೀಲರ ಮೂಲಕ ದೆಹಲಿ ಹೈಕೋರ್ಟ್​​ನಲ್ಲಿ ಮಂಗಳವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆಯನ್ನು ಕೋರ್ಟ್ ಇವತ್ತಿಗೆ ಮುಂದೂಡಿತ್ತು. ಇಂದು ನ್ಯಾಯಾಲಯಕ್ಕೆ ಬಂದ ತಾಹೀರ್ ಅವರನ್ನು ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ದ್ವೇಷ, ಹಿಂಸೆ ಅಭಿವೃದ್ಧಿಯ ಶತ್ರುಗಳು, ಇದರಿಂದ ಭಾರತ ಮಾತೆಗೆ ಪ್ರಯೋಜನವಿಲ್ಲ; ದೆಹಲಿ ಹಿಂಸಾಚಾರದ ಸ್ಥಳಗಳ ವೀಕ್ಷಣೆ ಬಳಿಕ ರಾಹುಲ್ ಗಾಂಧಿ ಹೇಳಿಕೆ

ಫೆ. 24ರ ಮಧ್ಯರಾತ್ರಿ ಗಲಭೆಕೋರರು ತಾಹಿರ್ ಹುಸೇನ್ ಅವರ ಮನೆಯನ್ನ ಸುತ್ತುವರಿದಿದ್ದರು. ಪೊಲೀಸರು ಹೋಗಿ ರಕ್ಷಣೆ ಮಾಡಿದರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಅಂದು ತಾಹಿರ್ ಅವರಿಗೆ ಯಾವುದೇ ಪ್ರಾಣಾಪಾಯ ಇರಲಿಲ್ಲ ಎಂದು ಪೊಲೀಸರು ಇದೀಗ ಸ್ಪಷ್ಟಪಡಿಸಿದ್ದಾರೆ.

ದೆಹಲಿ ನಗರಪಾಲಿಕೆ ಸದಸ್ಯರಾದ ತಾಹಿರ್ ಹುಸೇನ್ ಅವರ ಮನೆಯನ್ನು ಫೆಬ್ರುವರಿ 24ರ ಮಧ್ಯರಾತ್ರಿಯಂದು ಗಲಭೆಕೋರರು ಸುತ್ತುವರಿದ್ದಾರೆ ಎಂಬ ಮಾಹಿತಿ ತಮಗೆ ಸಿಕ್ಕಿತು. ತಾವು ಸ್ಥಳಕ್ಕೆ ಹೋಗಿ ನೋಡಿದಾಗ ಅಂಥದ್ದೇನೂ ಆಗಿರಲಿಲ್ಲ. ಅವರು ಸುರಕ್ಷಿತವಾಗಿದ್ದರು ಎಂದು ಮೊನ್ನೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ದೆಹಲಿ ಗಲಭೆ ಸಂದರ್ಭದಲ್ಲಿ ತಾಹಿರ್ ಹುಸೇನ್ ತಮ್ಮ ಅಕ್ಕಪಕ್ಕದ ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲುಗಳನ್ನ ಎಸೆದ ಆರೋಪ ಕೂಡ ಇದೆ. ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದರು ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದರು.

ಇದನ್ನೂ ಓದಿ: ಸೆಕ್ಸ್ ಮಾಡಿದರೆ ಸೋಂಕು ತಗುಲುತ್ತಾ? ಸೋಂಕಿತರ ಬಳಿ ಇದ್ದರೆ ಹರಡುತ್ತಾ? ಇಲ್ಲಿವೆ ಕೊರೊನಾ ವೈರಸ್ ಬಗ್ಗೆ ಸಾಮಾನ್ಯ ಅನುಮಾನಗಳು

ತನಿಖೆ ನಡೆಸಿದಾಗ ಹುಸೇನ್ ಮನೆಯ ಮಹಡಿಯ ಮೇಲೆ ಕಲ್ಲು, ಇಟ್ಟಿಗೆ ಮತ್ತು ಪೆಟ್ರೋಲ್ ಬಾಂಬ್​ಗಳು ಪತ್ತೆಯಾಗಿದ್ದವು. ಆದರೆ, ತಾಹಿರ್ ಹುಸೇನ್ ಇದೆಲ್ಲಾ ವಿರೋಧಿಗಳ ಚಿತಾವಣೆಯಾಗಿದ್ದು, ತಾವು ಅಮಾಯಕ ಎಂದು ಹೇಳುತ್ತಾ ಬಂದಿದ್ದರು.

ಅದೇ ವೇಳೆ, ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ಗಲಭೆಯಲ್ಲಿ ತಮ್ಮ ಪಕ್ಷದವರು ಭಾಗಿಯಾಗಿದ್ದೇ ಆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ತಾಹಿರ್ ಹುಸೇನ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: