Tina Dabi: ವಿಚ್ಛೇದನದಲ್ಲಿ ಅಂತ್ಯವಾಯಿತು ಐಎಎಸ್​ ಅಧಿಕಾರಿಗಳ ವೈವಾಹಿಕ ಜೀವನ

2015ರಲ್ಲಿ ಕಿರಿಯ ವಯಸ್ಸಿನಲ್ಲಿಯೇ ಐಎಎಸ್​ ಟಾಪರ್​ ಆಗಿ ಹೊರಹೊಮ್ಮಿದ ಟೀನಾ ಡಾಬಿ ಇಡೀ ದೇಶದ ಗಮನ ಸೆಳೆದಿದ್ದರು

ಟೀನಾ ಡಾಬಿ ಹಾಗೂ ಅಥರ್​ ಅಮರ್​ ಉಲ್​ ಶಫಿ ಖಾನ್

ಟೀನಾ ಡಾಬಿ ಹಾಗೂ ಅಥರ್​ ಅಮರ್​ ಉಲ್​ ಶಫಿ ಖಾನ್

  • Share this:
    ​ ಐಎಎಸ್​ ಅಧಿಕಾರಿ ಟೀನಾ ಡಾಬಿ ಹಾಗೂ ಅಥರ್​ ಅಮರ್​ ಉಲ್​ ಶಫಿ ಖಾನ್​ ಅವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಅಂತಿಮ ಗೊಂಡಿದೆ. ಜೈಪುರ್ ನ್ಯಾಯಾಲಯ ಈ ಇಬ್ಬರಿಗೆ ವಿಚ್ಛೇದನ ನೀಡಿದೆ. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗಳು ಪರಸ್ಪರ ಒಪ್ಪಿ ಕಳೆದ ನವೆಂಬರ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರಲ್ಲಿ ಕಿರಿಯ ವಯಸ್ಸಿನಲ್ಲಿಯೇ ಐಎಎಸ್​ ಟಾಪರ್​ ಆಗಿ ಹೊರಹೊಮ್ಮಿದ ಟೀನಾ ಡಾಬಿ ಇಡೀ ದೇಶದ ಗಮನ ಸೆಳೆದಿದ್ದರು. ಐಎಎಸ್​ ಟಾಪರ್​ ಆದ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಟೀನಾ ಅವರಾದಗಿದೆ. ಇದಾದ ಬಳಿಕ ಮದುವೆ ತಮ್ಮ ಬ್ಯಾಚಿನ ಎರಡನೇ ಟಾಪರ್​ ಆಗಿದ್ದ ಕಾಶ್ಮೀರಿ ಮುಸ್ಲಿಂ ಅಥರ್​ ಅಮರ್​ ಉಲ್​ ಶಫಿ ಖಾನ್​ ಅವರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು.

    2018ರಲ್ಲಿ ಮದುವೆಯಾದ ಈ ಜೋಡಿಯ ವಿವಾಹ ಭಾರೀ ಸುದ್ದಿಯಾಗಿತ್ತು.ಮೂರು ಆರತಕ್ಷತೆ ಮೂಲಕ ಅದ್ಧೂರಿ ವಿವಾಹವಾಗಿದ್ದ ಈ ಜೋಡಿಯ ಮದುವೆಗೆ ರಾಜಕೀಯ ಗಣ್ಯರಾದ ವೆಂಕಯ್ಯ ನಾಯ್ಡು, ಸುಮಿತ್ರಾ ಮಹಾಜನ್​, ರವಿಶಂಕರ್​ ಸೇರಿ ಅನೇಕರು ಭಾಗಿಯಾಗಿದ್ದರು. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಇವರ ಹೊಸ ಜೀವನಕ್ಕೆ ಟ್ವೀಟ್​ ಮೂಲಕ ಶುಭ ಕೋರಿದ್ದರು.

    ಇದನ್ನು ಓದಿ: ಆನಂದ್​ ಸಿಂಗ್​ ಓಲೈಕೆಗೆ ಮುಂದಾದ ಸಿಎಂ; ಖಾತೆ ಮರು ಹಂಚಿಕೆ ಸಾಧ್ಯತೆ!

    ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜೋಡಿ ಜೈಪುರದಲ್ಲಿ ಮೊದಲು ಸರಳವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಬಳಿಕ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಬಳಿಕ ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆ ನಡೆದಿತ್ತು. ಈ ಮದುವೆ ಕೋಮು ಸೌಹರ್ದತೆಯ ಸಂಕೇತ ಎಂದು ಅನೇಕರು ಪ್ರಶಂಸಿದ್ದರು. ಇದರ ಜೊತೆಗೆ ಇದೊಂದು ಲವ್​ ಜಿಹಾದ್​ ಎಂಬ ಟೀಕೆಕೂಡ ವ್ಯಕ್ತವಾಗಿತ್ತು.

    ಟೀನಾ ಅಂತರ್​ಧರ್ಮೀಯ ಮದುವೆಯಾದ ಕುರಿತು ಅನೇಕ ಬಲಪಂಥೀಯ ಸಂಘಟನೆಗಳು ಅಲ್ಲದೇ ಭಾರತೀಯ ಹಿಂದೂ ಮಹಾಸಭಾ ಟೀಕಿಸಿತ್ತು. ಇದೊಂದು ಲವ್​ ಜಿಹಾದ್​ ಆಗಿದ್ದು, ಈ ಮದುವೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರವನ್ನು ಬರೆದಿತ್ತು. ಆದರೆ, ಈ ನಿರ್ಧಾರ ನಮ್ಮ ಮಗಳದು. ಆಕೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರಳು ಎಂದು ಟೀನಾ ಪೋಷಕರು ಸ್ಪಷ್ಟಪಡಿಸಿದ್ದರು

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: