HOME » NEWS » National-international » IAS OFFICER WHO QUIT OVER KASHMIR HAS SOME ADVICE BUY WASHING MACHINE BEFORE LEAVING JOB VS

ಕೆಲಸ ಬಿಡುವ ಮುನ್ನ ಏನನ್ನು ಖರೀದಿಸಬೇಕು? ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕಿವಿಮಾತು

ಕಾಶ್ಮೀರ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ದೊಡ್ಡ ಸುದ್ದಿಯಾಗಿದ್ದ ಕಣ್ಣನ್ ಗೋಪಿನಾಥನ್ ಇದೀಗ ಬಟ್ಟೆ ಒಗೆಯುವುದರಲ್ಲಿ ಹೈರಾಣಾಗಿ ಹೋಗಿದ್ದಂತಿದೆ. ಐಎಎಸ್ ಹುದ್ದೆ ಹೋದಾಗ ನನ್ನನ್ನು ಬಾಧಿಸುತ್ತಿರುವುದು ಬಟ್ಟೆ ಒಗೆಯುವ ಕಾಯಕ ಮಾತ್ರ ಎಂದು ಅವರು ಹೇಳಿಕೊಂಡಿದ್ದಾರೆ.

news18
Updated:October 24, 2019, 12:42 PM IST
ಕೆಲಸ ಬಿಡುವ ಮುನ್ನ ಏನನ್ನು ಖರೀದಿಸಬೇಕು? ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಕಿವಿಮಾತು
ಕಣ್ಣನ್ ಗೋಪಿನಾಥನ್
  • News18
  • Last Updated: October 24, 2019, 12:42 PM IST
  • Share this:
ಬೆಂಗಳೂರು(ಅ. 24): ಕೆಲಸ ಬಿಡುವುದು ಪ್ರಪಂಚದ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದು. ಕೆಲಸ ಬಿಟ್ಟು ಮನೆಯಲ್ಲಿ ಕೂರುತ್ತೇನೆಂದು ನೀವು ಯಾರನ್ನಾದರೂ ಕೇಳಿದರೆ ನಿಮಗೆ ಒಂದಷ್ಟು ಸಾಮಾನ್ಯ ಸಲಹೆಗಳು ಕಿವಿಗೆ ರಾಚಬಹುದು:

"ಇನ್ನೊಂದು ಕೆಲಸ ಸಿಗುವವರೆಗೂ ಕೆಲಸ ಬಿಡಬೇಡಿ”

"ಜೀವನೋಪಾಯಕ್ಕೆ ಏನಾದರೂ ಸೇವಿಂಗ್ಸ್ ಮಾಡಿದ್ದೀರಾ?”
"ಮನೆಯಲ್ಲಿ ಕೂತು ಏನು ಮಾಡುತ್ತೀರಿ? ಬಟ್ಟೆ ಒಗೆದುಕೊಂಡು ಇರುತ್ತೀರಾ?”

ಆದರೆ, ಮಾಜಿ ಐಎಎಸ್ ಅಧಿಕಾರಿಯೊಬ್ಬರು ಇವೆಲ್ಲಕ್ಕಿಂತ ಬಹಳ ವಿಭಿನ್ನವಾದ ಸಲಹೆ ನೀಡಿದ್ದಾರೆ. “ವಾಷಿಂಗ್ ಮೆಷೀನ್ ಖರೀದಿ ಮಾಡುವವರೆಗೂ ಕೆಲಸ ಬಿಡಬೇಡಿ” ಎಂದು ಕಣ್ಣನ್ ಗೋಪಿನಾಥನ್ ಟ್ವೀಟ್ ಮಾಡಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿ ಘಟಕದ ಅಧ್ಯಕ್ಷರಾಗಿ ಸುಭಾಷ್ ಛೋಪ್ರಾ, ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಕೀರ್ತಿ ಆಜಾದ್ ಆಯ್ಕೆ ಮಾಡಿದ ಕಾಂಗ್ರೆಸ್

ಕಾಶ್ಮೀರ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ದೊಡ್ಡ ಸುದ್ದಿಯಾಗಿದ್ದ ಕಣ್ಣನ್ ಗೋಪಿನಾಥನ್ ಇದೀಗ ಬಟ್ಟೆ ಒಗೆಯುವುದರಲ್ಲಿ ಹೈರಾಣಾಗಿ ಹೋಗಿದ್ದಂತಿದೆ. ಐಎಎಸ್ ಹುದ್ದೆ ಹೋದಾಗ ನನ್ನನ್ನು ಬಾಧಿಸುತ್ತಿರುವುದು ಬಟ್ಟೆ ಒಗೆಯುವ ಕಾಯಕ ಮಾತ್ರ ಎಂದು ಅವರು ಹೇಳಿಕೊಂಡಿದ್ದಾರೆ.


“ಕೆಲಸ ಬಿಡುವ ಯೋಚನೆ ಯಾರಿಗಾದರೂ ಇದ್ದರೆ, ವಾಷಿಂಗ್ ಮೆಷೀನ್ ಖರೀದಿಸುವ ಮುನ್ನ ಕೆಲಸ ಬಿಡಬೇಡಿ. ಇದನ್ನು ಒತ್ತಿ ಹೇಳುತ್ತೇನೆ. ನೀವು ವಾಷಿಂಗ್ ಮೆಷೀನ್ ಖರೀದಿಸುವವರೆಗೂ ಕೆಲಸ ಬಿಡಲು ಹೋಗಬೇಡಿ” ಎಂದು ತಮ್ಮ ಬಟ್ಟೆಗಳ ಫೋಟೋ ಸಮೇತ ಟ್ವೀಟ್ ಪೋಸ್ಟ್ ಮಾಡಿದ್ದಾರೆ.

ಪ್ರಾಮಾಣಿಕ ಐಎಎಸ್ ಅಧಿಕಾರಿ ಎನಿಸಿದ್ದ ಕಣ್ಣನ್ ಗೋಪಿನಾಥನ್ ಅವರಿಗೆ ಒಂದು ವಾಷಿಂಗ್ ಮೆಷೀನ್ ಕೊಳ್ಳುವಷ್ಟು ಸೇವಿಂಗ್ಸ್ ಇಲ್ಲವಾ ಎಂದು ಅಚ್ಚರಿ ಪಡುತ್ತಿರುವವರು ಅನೇಕ. ಸೋಷಿಯಲ್ ಮೀಡಿಯಾದಲ್ಲಿ ಹಲವರು ವಾಷಿಂಗ್ ಮೆಷೀನ್ ಕೊಡುವ ಆಫರ್ ಮುಂದಿಟ್ಟಿದ್ದಾರೆ. ಆದರೆ, ಮಾಜಿ ಐಎಎಸ್ ಅಧಿಕಾರಿ ಈ ಆಫರ್​ಗಳನ್ನು ನಸುನಗುತ್ತಲೇ ನಯವಾಗಿ ತಿರಸ್ಕರಿಸಿದ್ದಾರೆ.ಯಾರೇ ಆದರೂ ಒಂದು ಸುದೀರ್ಘ ಪ್ರವಾಸಕ್ಕೆ ಹೋಗಿ ಬಂದರೆ ಒಗೆಯಲು ರಾಶಿ ಬಟ್ಟೆಗಳಿರುತ್ತವೆ. ಕಣ್ಣನ್ ಗೋಪಿನಾಥನ್​ಗೂ ಅದೇ ಪರಿಸ್ಥಿತಿ. ಇವರೇ ಬಟ್ಟೆ ಒಗೆದುಕೊಳ್ಳಬೇಕು. ಒಗೆಯುವ ಕಷ್ಟ ಇಷ್ಟು ಎಂದು ಕಣ್ಣನ್​ಗೆ ಗೊತ್ತಿರಲಿಲ್ಲವೆನಿಸುತ್ತದೆ.

ಇದನ್ನೂ ಓದಿ: ಭಾರತದ ಆರ್ಥಿಕ ಕುಸಿತ ಒಂದು ಅಚ್ಚರಿ: ಮುಂದಿನ ವರ್ಷ ಚೇತರಿಕೆ ಸಾಧ್ಯತೆ: ಐಎಂಎಫ್

ಕಣ್ಣನ್ ಅಷ್ಟೇ ಅಲ್ಲ ಬಹುತೇಕ ಗಂಡಸರಿಗೂ ಬಟ್ಟೆ ಒಗೆಯುವ ಕಾಯಕದ ಕಷ್ಟ ಅನುಭವಕ್ಕೆ ಬಂದಿರುವುದಿಲ್ಲ. ಮನೆಯಲ್ಲಿ ಅಮ್ಮಳೋ, ಅಕ್ಕಳೋ, ಹೆಂಡತಿಯೋ ಒಗೆದು ಒಗೆದು ಗಂಡಸರನ್ನು ಶುಭ್ರ ಮಾಡಿಟ್ಟಿರುತ್ತಾರೆ. ಅವರವರ ಕೆಲಸ ಅವರವರೇ ಮಾಡಿಕೊಂಡರೆ ಪ್ರತಿಯೊಂದು ಕಾಯಕದ ಮಹತ್ವ ಎಲ್ಲರಿಗೂ ಗೊತ್ತಾಗುತ್ತದೆ.

ಕೇರಳ ಮೂಲದ 33 ವರ್ಷದ ಕಣ್ಣನ್ ಗೋಪಿನಾಥನ್ ಅವರು ಆಗಸ್ಟ್ ತಿಂಗಳಲ್ಲಿ ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ದಾಮನ್ ಅಂಡ್ ಡಿಯು ಮತ್ತು ದಾದ್ರ ನಾಗರ್ ಹವೇಲಿ ಕೇಂದ್ರಾಡಳಿತ ಪ್ರದೇಶಗಳ ಇಂಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವರು, ಕಾಶ್ಮೀರದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ತಮ್ಮ ಉನ್ನತ ಹುದ್ದೆಯನ್ನು ತ್ಯಜಿಸಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 24, 2019, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading