ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು; ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ

ಬೇರೆಯವರಿಗೆ ಧ್ವನಿಯಾಗಬೇಕು ಎಂಬ ಹಂಬಲದಿಂದ ನಾನು ಈ ಹುದ್ದೆ ಆಯ್ಕೆ ಮಾಡಿಕೊಂಡೆ. ಆದರೆ, ಇದರಲ್ಲಿ ನಾನು ವಿಫಲನಾಗಿದ್ದೇನೆ. ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಇದೇ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Seema.R | news18-kannada
Updated:August 24, 2019, 4:36 PM IST
ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು; ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ
ಐಎಎಸ್​​ ಅಧಿಕಾರಿ ಕಣ್ಣನ್​ ಗೋಪಿನಾಥ್​
  • Share this:
ಕೇರಳ ಪ್ರವಾಹದ ವೇಳೆ ನಿಸ್ವಾರ್ಥ ಸೇವೆ ಸಲ್ಲಿಸಿ ಜನರ ಮನಗೆದ್ದ ಐಎಎಫ್​ ಅಧಿಕಾರಿ ಕಣ್ಣನ್​ ಗೋಪಿನಾಥ್​ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್​ ಹವೇಲಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಕಣ್ಣನ್​ ಕೇರಳ ಪ್ರವಾಹ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಪರಿಹಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯಾವ ಮಟ್ಟಿಗೆ ಸರಳ ವ್ಯಕ್ತಿ ಎಂದರೆ, ಅವರೊಬ್ಬ ಜಿಲ್ಲಾಧಿಕಾರಿ ಎಂದು ತಿಳಿಯದಂತೆ ಸಾಮಾನ್ಯ ವ್ಯಕ್ತಿಯಂತೆ ಶ್ರಮವಹಿಸಿದ್ದರು. ಬೇರೊಬ್ಬ ಐಎಎಸ್​ ಅಧಿಕಾರಿಯೊಬ್ಬರು ಇವರನ್ನು ಪತ್ತೆ ಹಚ್ಚುವವರೆಗೂ ಇವರು ಅಧಿಕಾರಿ ಎಂಬುದು ಯಾರಿಗೂ ತಿಳಿದಿರಲಿಲ್ಲ.

ಎಜಿಎಂಯುಟಿ ಕೇಡರ್​ನ ಐಎಎಸ್​ ಅಧಿಕಾರಿ ಪ್ರಸ್ತುತ ದಾದ್ರ ಮತ್ತು ನಗರ ಹವೇಲಿಯಲ್ಲಿ ಇಂಧನ, ನಗರಾಭಿವೃದ್ಧಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆಗಸ್ಟ್​​ 21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ನೀಡಿರುವ ಕಾರಣ ಇಂತಿದೆ.

"ಬೇರೆಯವರಿಗೆ ಧ್ವನಿಯಾಗಬೇಕು ಎಂಬ ಹಂಬಲದಿಂದ ನಾನು ಈ ಹುದ್ದೆ ಆಯ್ಕೆ ಮಾಡಿಕೊಂಡೆ. ಆದರೆ, ಇದರಲ್ಲಿ ನಾನು ವಿಫಲನಾಗಿದ್ದೇನೆ. ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಇದೇ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

"ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂಬುದು ನನಗೆ ತಿಳಿದಿದೆ. ಇದು ಅರ್ಧ ದಿನದ ಸುದ್ದಿಯಾಗಬಹುದು. ಆದರೆ, ನಾನು ಪೂರ್ಣ ಪ್ರಜ್ಞೆಯಿಂದಲೇ ರಾಜೀನಾಮೆ ನೀಡುತ್ತಿದ್ದೇನೆ" ಎಂದಿದ್ದಾರೆ.

2018 ಪ್ರವಾಹ ಸಂತ್ರಸ್ತರ ಹೀರೋಕಳೆದ ವರ್ಷ ಕೇರಳದಲ್ಲಿ ಕಂಡರಿಯದ ಪ್ರವಾಹ ಉಂಟಾದಾಗ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿದು ಬಂದಿತ್ತು. ಈ ವೇಳೆ ಪರಿಹಾರದ ವಸ್ತುಗಳನ್ನು ಇಳಿಸಿಕೊಳ್ಳುವುದು ತುಂಬುವ ಕೆಸಲವನ್ನು ಯಾವುದೇ ಹಮ್ಮು ಬಿಮ್ಮು ಇಲ್ಲದೇ 32 ವರ್ಷದ ಈ ಅಧಿಕಾರಿ ನಿರ್ವಹಿಸಿದ್ದರು.

ಇದನ್ನು ಓದಿ: ಐಷಾರಾಮಿ ಪಂಚತಾರ ಹೋಟೆಲ್​ ತಿಂಡಿಯಲ್ಲಿ ಹುಳು; ಬಾಲಿವುಡ್​ ನಟಿ ಶಾಕ್

ಸಾಮಾನ್ಯ ವ್ಯಕ್ತಿಯಂತೆ ಪ್ರವಾಹ ಸಂದರ್ಭದಲ್ಲಿ ಕೆಲಸ ಮಾಡಿದ್ದ ಇವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದರು.

First published: August 24, 2019, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading