ಕಾಶ್ಮೀರಿ ರಾಜಕಾರಣಿ ಶಾ ಫೈಸಲ್ ವಿದೇಶಕ್ಕೆ ಹೋಗದಂತೆ ತಡೆ; ದೆಹಲಿಯಲ್ಲಿ ಬಂಧನ

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಂದ ಬೇಸತ್ತು ಶಾ ಫೈಸಲ್ ಅವರು ಐಎಎಸ್ ಹುದ್ದೆ ತ್ಯಜಿಸಿ ಇದೇ ವರ್ಷದಂದು ರಾಜಕೀಯಕ್ಕೆ ಧುಮುಕಿದ್ದರು.

ಷಾ ಫೈಸಲ್

ಷಾ ಫೈಸಲ್

 • News18
 • Last Updated :
 • Share this:
  ನವದೆಹಲಿ(ಆ. 14): ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ ಫೈಸಲ್ ಶಾ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ವಿದೇಶಕ್ಕೆ ಹೋಗಲು ಬಂದಿದ್ದ ಅವರನ್ನ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಡೆದು ಬಂಧಿಸಲಾಗಿದೆ. ಅವರನ್ನು ಗೃಹ ಬಂಧನಕ್ಕೆ ಒಳಪಡಿಸಿ ಸ್ವಲ್ಪ ಹೊತ್ತಿನ ಬಳಿಕ ಕಾಶ್ಮೀರಕ್ಕೆ ವಾಪಸ್ ಕಳುಹಿಸಲಾಗಿದೆ.

  ಮಾಜಿ ಐಎಎಸ್ ಅಧಿಕಾರಿಯಾದ ಶಾ ಫೈಸಲ್ ಅವರು ಪಕ್ಷೇತರ ರಾಜಕಾರಣಿಯಾಗಿದ್ದಾರೆ. 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರದ ಕ್ರಮದ ಬಗ್ಗೆ ಅವರು ನಿನ್ನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. 370ನೇ ವಿಧಿ ರದ್ದಾಗುವ ಮೂಲಕ ಕಾಶ್ಮೀರದ ಮುಖ್ಯವಾಹಿನಿಯೇ ಮುಕ್ತಾಯವಾದಂತಾಗಿದೆ. ಇಲ್ಲಿ ನೀವು ಗುಮಾಸ್ತರಾಗಿರಬೇಕು ಅಥವಾ ಪ್ರತ್ಯೇಕತಾವಾದಿ ಈ ಎರಡೇ ಆಯ್ಕೆ ಇರುವುದು ಎಂದು ಹೇಳಿ ಅವರು ನಿನ್ನೆ ಟ್ವೀಟ್ ಮಾಡಿದ್ದರು.

  ಇದನ್ನೂ ಓದಿ: ಜಮ್ಮು-ಕಾಶ್ಮೀರ ಸಂಬಂಧ ಚರ್ಚಿಸಲು ತುರ್ತುಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಪತ್ರ ಬರೆದ ಪಾಕ್

  ಶಾ ಫೈಸಲ್ ಅವರು ಟರ್ಕಿ ದೇಶದ ಇಸ್ತಾನ್​ಬುಲ್​ಗೆ ಹೋಗಲು ಇವತ್ತು ದೆಹಲಿ ಏರ್​ಪೋರ್ಟ್​ಗೆ ಬಂದಿದ್ದರೆನ್ನಲಾಗಿದೆ. ಮತ್ತೊಂದು ವರದಿ ಪ್ರಕಾರ ಅವರು ಅಮೆರಿಕದ ಬೋಸ್ಟನ್​ಗೆ ಹೊರಟಿದ್ದರೆನ್ನಲಾಗಿದೆ.

  36 ವರ್ಷದ ಶಾ ಫೈಸಲ್ ಅವರು 2009ರ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಐಎಎಸ್ ಟಾಪರ್ ಆದ ಮೊದಲ ಕಾಶ್ಮೀರಿ ಅವರಾಗಿದ್ದಾರೆ. 10 ವರ್ಷಗಳ ಬಳಿಕ ಅವರು ಐಎಎಸ್ ಹುದ್ದೆ ತ್ಯಜಿಸಿ ರಾಜಕಾರಣಕ್ಕೆ ಧುಮುಕಿದ್ದರು. ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆಯುತ್ತಿದೆ ಎಂದು ಆರೋಪಿಸಿ ಅವರು ರಾಜಕಾರಣ ಮೂಲಕ ಹೋರಾಟ ಮಾಡಲು ರಾಜಕೀಯ ರಂಗ ಪ್ರವೇಶ ಮಾಡಿದ್ದರು. ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಎಂಬ ಹೊಸ ರಾಜಕೀಯ ಪಕ್ಷ ಹುಟ್ಟುಹಾಕುವುದಾಗಿಯೂ ಅವರು ಇದೇ ಮಾರ್ಚ್ ತಿಂಗಳಲ್ಲಿ ಘೋಷಣೆ ಮಾಡಿದ್ದರು.

  ಇದನ್ನೂ ಓದಿ: ಜಮ್ಮು ಮೇಲಿದ್ದ ನಿರ್ಬಂಧ ತೆರವು, ಕಾಶ್ಮೀರದಲ್ಲಿ ಮುಂದುವರಿಕೆ

  ಕುಪ್ವಾರ ಜಿಲ್ಲಿಯಲ್ಲಿ ಜನರಿಸಿದ ಶಾ ಫೈಸಲ್ ಅವರ ತಂದೆಯನ್ನು 2002ರಲ್ಲಿ ಉಗ್ರಗಾಮಿಗಳು ಕೊಂದು ಹಾಕಿದ್ದರು. ಎಂಬಿಬಿಎಸ್ ಓದಿದ ಅವರು ಉರ್ದು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಮಾಡಿದ್ದಾರೆ.

  ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
  First published: