COVID-19: ಕೊರೋನಾ ಭೀತಿ ಲೆಕ್ಕಿಸದೇ ಒಂದು ತಿಂಗಳ ಮಗು ಜತೆ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೃಜನಾರ ಫೋಟೋಗಳು ಭಾರೀ ವೈರಲ್ ಆಗಿವೆ. ಸಾರ್ವಜನಿಕರು ಸೃಜನಾರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಎಎಸ್​​ ಅಧಿಕಾರಿ ಸೃಜನಾ ಗುಮ್ಮಲ

ಐಎಎಸ್​​ ಅಧಿಕಾರಿ ಸೃಜನಾ ಗುಮ್ಮಲ

 • Share this:
  ಅಮರಾವತಿ(ಏ.12): ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​​ ಭಾರತಕ್ಕೆ ಕಾಲಿಟ್ಟ ಪರಿಣಾಮ ಇಡೀ ದೇಶದ ಜನ ಜೀವ ಭಯದಲ್ಲಿ ಬದುಕುತ್ತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್​​-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗ ಇಡೀ ದೇಶವನ್ನು ಕೊರೋನಾದಿಂದ ಕಾಪಾಡಲು ವೈದ್ಯರು, ಪೊಲೀಸರು, ಸರ್ಕಾರಿ ಅಧಿಕಾರಿಗಳು ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ.  ಈ ಮಧ್ಯೆಯೇ ಆಂಧ್ರಪ್ರದೇಶದಲ್ಲಿ ಎಐಎಸ್​​ ಅಧಿಕಾರಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  ಹೌದು, ಸೃಜನಾ ಗುಮ್ಮಲ್ಲ ಎಂಬ ಐಎಎಸ್​ ಅಧಿಕಾರಿ ವಿಶಾಖಪಟ್ಟಣಂ ಮುನಿಪಲ್ ಕಮೀಷನರ್. ಕೊರೋನಾ ವೈರಸ್​ ಹೀಗೆ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ತನ್ನ ಮಗುವಿನೊಂದಿಗೆ ಈ ಅಧಿಕಾರಿ ಕೆಲಸಕ್ಕೆ ಹಾಜರಾಗಿದ್ದಾರೆ. ಕಾನೂನಿಕ ಪ್ರಕಾರ .ಇವರಿಗೆ ರಜೆ ಪಡೆಯಲು ಅವಕಾಶವಿದ್ದರೂ ಐಎಎಸ್​ ಅಧಿಕಾರಿ ಹೀಗೆ ಕೆಲಸಕ್ಕೆ ತನ್ನ ಕರ್ತವ್ಯ ನಿಷ್ಠೆ ತೋರಿದ್ದಾರೆ. ಕೊರೋನಾ ಪರಿಸ್ಥಿತಿ ನಿಭಾಯಿಸಲು ತನ್ನ ಪುಟ್ಟ ಮುಗುವನ್ನು ಕರೆದುಕೊಂಡು ಬಂದು ಇತರರಿಗೆ ಮಾದರಿಯಾಗಿದ್ದಾರೆ.

  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೃಜನಾರ ಫೋಟೋಗಳು ಭಾರೀ ವೈರಲ್ ಆಗಿವೆ. ಸಾರ್ವಜನಿಕರು ಸೃಜನಾರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ನಾನು ಜವಾಬ್ದಾರಿಯುತ ಅಧಿಕಾರಿ. ಈಗ ಕೆಲಸ ಮಾಡುವುದು ನನ್ನ ಕರ್ತವ್ಯ. ಬದ್ಧತೆಯಿಂದ ಕೆಲಸ ಮಾಡಲು ನನ್ನ ಇಡೀ ಕುಟುಂಬ ನನಗೆ ನೆರವು ನೀಡುತ್ತಿದೆ. ನನ್ನ ಪತಿ ವಕೀಲರು. ಪತಿ ಮತ್ತು ತಾಯಿಯ ಬೆಂಬಲದಿಂದ ಕರ್ತವ್ಯ ನಿರ್ಹವಣೆ ಮಾಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ ಐಎಎಸ್​ ಅಧಿಕಾರಿ ಸೃಜನಾ.

  ಇದನ್ನೂ ಓದಿ: ಕೊರೋನಾ ವಿರುದ್ಧ ಹೋರಾಟ: ‘ಸಾಧ್ಯವಾದರೆ ಸಹಾಯ ಮಾಡಿ ಹೊರತು ರಾಜಕೀಯ ಮಾಡಬೇಡಿ‘ - ಡಿಸಿಎಂ ಗೋವಿಂದ ಕಾರಜೋಳ
  First published: