HOME » NEWS » National-international » IAS OFFICER A K SHARMA JOINED THE BJP SESR

AK Sharma: ಕುತೂಹಲಕ್ಕೆ ತೆರೆ; ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಮೋದಿ ಆಪ್ತ ಎ.ಕೆ ಶರ್ಮಾ ನೇಮಕ

ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿಯಾಗಿರುವ ಶರ್ಮಾ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದರು. ಬಳಿಕ ಅವರು ಬಿಜೆಪಿ ಸೇರ್ಪಡನೆಯಾಗಿದ್ದರು

news18-kannada
Updated:June 19, 2021, 6:58 PM IST
AK Sharma: ಕುತೂಹಲಕ್ಕೆ ತೆರೆ; ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಮೋದಿ ಆಪ್ತ ಎ.ಕೆ ಶರ್ಮಾ ನೇಮಕ
ಮೋದಿ-ಎಕೆ ಶರ್ಮಾ
  • Share this:
ಮಾಜಿ ಅಧಿಕಾರಿ, ಪ್ರಧಾನಿ ಮೋದಿ ಆಪ್ತರಾಗಿರುವ ಎಕೆ ಶರ್ಮಾ ಅವರನ್ನು ಉತ್ತರ ಪ್ರದೇಶ ಬಿಜೆಪಿಯ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಎಂಎಲ್​ಸಿಯಾಗಿರುವ ಎಕೆ ಶರ್ಮಾ ಅವರನ್ನು ಉತ್ತರ ಪ್ರದೇಶ ಬಿಜೆಪಿ ಪಕ್ಷದ ಉಪಾಧ್ಯಕ್ಷನಾಗಿ ನೇಮಕ ಮಾಡಿ ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ಘೋಷಿಸಿದ್ದಾರೆ. ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಭಾರೀ ಬದಲಾವಣೆ ನಡೆಯಲಿದೆ. ಸಂಪುಟ ಪುನರ್ ರಚನೆ ನಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತು. ಉತ್ತರ ಪ್ರದೇಶದ ಶಾಸಕಾಂಗ ಪರಿಷತ್ ಸದಸ್ಯ ಮತ್ತು ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದ ಶರ್ಮಾ ಅವರು ಸಂಪುಟ ಸೇರಲಿದ್ದಾರೆ ಎಂಬ ಊಹಾ ಪೋಹಾಗಳು ಹರಿದಾಡಿದ್ದವು. ಇವಕ್ಕೆಲ್ಲಾ ಈಗ ತೆರೆ ಬಿದ್ದಿದೆ.

ರಾಜ್ಯ ಉಪಾಧ್ಯಕ್ಷರಾಗಿ ಪಕ್ಷ ಆಯ್ಕೆ ಮಾಡಿದ ಕಾರಣಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಶರ್ಮಾ ಧನ್ಯವಾದವನ್ನು ತಿಳಿಸಿದ್ದಾರೆ. ಶರ್ಮಾ ಅವರನ್ನು ಪ್ರಧಾನಿ ಮೋದಿ ಕಳೆದ ವರ್ಷ ಕೋವಿಡ್​ ಪರಿಸ್ಥಿತಿ ನಿರ್ವಹಣೆ ಕುರಿತ ಮೇಲ್ವಿಚಾರಣೆಗಾಗಿ ತಮ್ಮ ಕ್ಷೇತ್ರ ವಾರಾಣಾಸಿಗೆ ನೇಮಿಸಿದ್ದರು.

ಗುಜರಾತ್​ ಕೇಡರ್​ ಐಎಎಸ್​ ಅಧಿಕಾರಿಯಾಗಿರುವ ಶರ್ಮಾ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದರು. ಬಳಿಕ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿ ಸೇರ್ಪಡನೆಯಾಗಿದ್ದರು. 1988 ಬ್ಯಾಚ್​ ಅಧಿಕಾರಿಯಾಗಿರುವ ಇವರು ಮೂಲತಃ ಉತ್ತರ ಪ್ರದೇಶದ ಮೌ ನವರಾಗಿದ್ದಾರೆ. ಗುಜರಾತ್​ನಲ್ಲಿ ನರೇಂದ್ರ ಮೋದಿ ಸರ್ಕಾರದೊಂದಿಗೆ ಅವರು ಕಾರ್ಯ ನಿರ್ವಹಿಸಿದ್ದು, ಅವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದರು.

ಇದನ್ನು ಓದಿ: ರಾಹುಲ್​ ಗಾಂಧಿ ಜನ್ಮದಿನವನ್ನು ಸೇವಾದಿನವಾಗಿ ಆಚರಿಸಿದ ಕಾಂಗ್ರೆಸ್​ ನಾಯಕರು

ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ದೆಹಲಿಗೆ ಹೋಗಿ ಹೈ ಕಮಾಂಡ್​ ಭೇಟಿಯಾದ ಬಳಿಕ ಶರ್ಮಾ ಅವರನ್ನು ನೇಮಕ ಮಾಡಿ ಪಕ್ಷ ಆದೇಶಿಸಿದೆ.
2022ಕ್ಕೆ ವಿಧಾನಸಭಾ ಚುನಾವಣೆಗೆ ಉತ್ತರ ಪ್ರದೇಶ ಸಿದ್ದವಾಗುತ್ತಿರುವ ಹಿನ್ನಲೆ ಪಕ್ಷದಲ್ಲಿ ಬಿರುಸಿನ ಕಾರ್ಯಚಟುವಟಿಕೆ ನಡೆದಿದೆ. ಇನ್ನು ಇದೇ ಜೂನ್​ 21 ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಎಲ್​ ಸಂತೋಷ್​ ಲಕ್ನೋಗೆ ಭೇಟಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಚುನಾವಣೆ ಕಾರ್ಯತಂತ್ರ ರೂಪಿಸಲು ಮಂತ್ರಿಗಳು ಮತ್ತು ಪಕ್ಷದ ಪಾದಾಧಿಕಾರಿಗಳೊಂದಿಗೆ ಚರ್ಚಿಸಲು ಅವರು ಮುಂದಾಗಿದ್ದಾರೆ.

ಕಳೆದೊಂದು ವಾರದ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​  ಕೂಡ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ಭೇಟಿಗೂ ಮೊದಲು ಅವರು  ಗೃಹ ಸಚಿವ ಅಮಿತ್​ಶಾ ಅವರನ್ನು ಹಾಗೂ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದರು. ಭೇಟಿ ಬಳಿಕ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ, ಪಕ್ಷದ ಸಂಘಟನೆ ಮತ್ತು ಸುಸೂತ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ದಿನನಿತ್ಯ ನಡೆಯುವ ಭೇಟಿ ಇದಾಗಿದೆ ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 19, 2021, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories