IAS couple: ಸ್ಟೇಡಿಯಂನಲ್ಲಿ ನಾಯಿ ವಾಕಿಂಗ್ ಮಾಡಿಸ್ತಿದ್ದ IAS ದಂಪತಿಗೆ ಶಿಕ್ಷೆ! ಇದು ಬೇಕಿತ್ತಾ?

ನಾಯಿ ಜೊತೆ ವಾಕಿಂಗ್‌ಗಾಗಿ ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆ ಐಎಎಸ್‌ ಅಧಿಕಾರಿಗಳ ದಂಪತಿಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಷ್ಟ್ರ ರಾಜಧಾನಿ ದೆಹಲಿಯಿಂದ ಎತ್ತಂಗಡಿ ಮಾಡಿದೆ.

ನಾಯಿಯೊಂದಿಗೆ ವಾಕಿಂಗ್ ಮಾಡುವ ದೃಶ್ಯ

ನಾಯಿಯೊಂದಿಗೆ ವಾಕಿಂಗ್ ಮಾಡುವ ದೃಶ್ಯ

  • Share this:
ದೆಹಲಿ: ನಾಯಿ (Dog) ಜೊತೆ ವಾಕಿಂಗ್‌ಗಾಗಿ (Walking) ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡ (Abused the stadium) ಆರೋಪದ ಹಿನ್ನೆಲೆ ಐಎಎಸ್‌ ಅಧಿಕಾರಿಗಳ (IAS officer) ದಂಪತಿಯನ್ನು (Couple) ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಎತ್ತಂಗಡಿ ಮಾಡಿದೆ. ಸಂಜೀವ್‌ ಖಿರ್ವಾರ್‌ ಮತ್ತು ರಿಂಕು ದಿಗ್ಗಾ (Sanjeev Khirwar and Rinku Dugga) ಅವರನ್ನು ವರ್ಗಾವಣೆ ಮಾಡಿ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ. ಸಂಜೀವ್‌ ಖಿರ್ವಾರ್ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ (Ladakh) ವರ್ಗಾಯಿಸಿದ್ದರೆ, ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ (Arunachal Pradesh) ನಿಯೋಜಿಸಲಾಗಿದೆ.

ನಾಯಿ ಜೊತೆ ವಾಕಿಂಗ್ ಮಾಡೋಕೆ 7 ಗಂಟೆಗೆ ಕ್ರೀಡಾಂಗಣ ಕ್ಲೋಸ್
ಪ್ರತಿದಿನ ಐಎಎಸ್‌ ದಂಪತಿ ತಮ್ಮ ನಾಯಿ ಜೊತೆ ವಾಕಿಂಗ್‌ ಮಾಡಲು ಸಂಜೆ 7 ಗಂಟೆಯ ಹೊತ್ತಿಗೆ ಕ್ರೀಡಾಂಗಣವನ್ನು ಮುಚ್ಚುತ್ತಿದ್ದರು. ಹಾಗೂ ತಮ್ಮ ತರಬೇತಿಯನ್ನು ಬೇಗ ಮುಗಿಸಲು ಕ್ರೀಡಾಪಟುಗಳಿಗೆ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಅದಲ್ಲದೇ ಕ್ರೀಡಾಂಗಣದಲ್ಲಿನ ಸೌಲಭ್ಯಗಳ ದುರುಪಯೋಗದ ಕುರಿತು ಗೃಹ ವ್ಯವಹಾರಗಳ ಸಚಿವಾಲಯವು ದೆಹಲಿಯ ಮುಖ್ಯ ಕಾರ್ಯದರ್ಶಿಯಿಂದ ವರದಿಯನ್ನು ಕೇಳಿದೆ.

ಇದನ್ನೂ ಓದಿ:   Dowry Torcher: ಬಾಣಲೆಯಲ್ಲಿ ಕುದಿಯುತ್ತಿದ್ದ ಎಣ್ಣೆ ತೆಗೆದು ಅಡುಗೆ ಮಾಡ್ತಿದ್ದ ಹೆಂಡ್ತಿ ಮೇಲೆ ಸುರಿದ

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ವರದಿಯನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಇನ್ನು, ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್‌ಗೆ ಸೇರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಐಎಎಸ್‌ ಅಧಿಕಾರಿಗಳ ಕೇಡರ್‌ ನಿಯಂತ್ರಣ ಪ್ರಾಧಿಕಾರವಾದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಂಎಚ್‌ಎಗೆ ಪತ್ರ ಬರೆದಿತ್ತು.

ಇನ್ಮುಂದೆ 10 ಗಂಟೆವರೆಗೆ ತೆರೆದಿರುತ್ತದೆ ಕ್ರೀಡಾಂಗಣ
ಸಂಜೀವ್‌ ಖಿರ್ವಾರ್ ಅವರು ದೆಹಲಿ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ರಿಂಕು ದುಗ್ಗಾ ಅವರು ದೆಹಲಿ ಸರ್ಕಾರದ ಭೂಮಿ ಮತ್ತು ಕಟ್ಟಡದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವಿವಾದದ ಬಳಿಕ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕ್ರೀಡಾಪಟುಗಳಿಗೆ ದೆಹಲಿ ಸರ್ಕಾರದಿಂದ ನಿರ್ವಹಿಸಲ್ಪಡುವ ಎಲ್ಲಾ ಕ್ರೀಡಾ ಸೌಲಭ್ಯಗಳು ರಾತ್ರಿ 10 ಗಂಟೆವರೆಗೆ ತೆರೆದಿರುತ್ತವೆ ಎಂದು ಘೋಷಿಸಿದ್ದಾರೆ.ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಸೋಡಿಯಾ, ಕೆಲವು ಕ್ರೀಡಾಂಗಣಗಳನ್ನು ಮುಂಚಿತವಾಗಿಯೇ ಮುಚ್ಚಲಾಗುತ್ತಿದೆ ಎಂಬ ಸುದ್ದಿಗಳು ನಮ್ಮ ಗಮನಕ್ಕೆ ಬಂದಿವೆ. ಇದು ತಡರಾತ್ರಿಯವರೆಗೆ ಅಭ್ಯಾಸ ಮಾಡಲು ಬಯಸುವ ಕ್ರೀಡಾಪಟುಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ದೆಹಲಿ ಸರ್ಕಾರದ ಎಲ್ಲಾ ಕ್ರೀಡಾ ಸೌಲಭ್ಯಗಳು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಮುಕ್ತವಾಗಿರುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಎಎಪಿ ಮೇಲೆ ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್‌!
ನಾಯಿಯ ವಾಕಿಂಗ್‌ಗಾಗಿ ಐಎಎಸ್‌ ದಂಪತಿಗಳು ಕ್ರೀಡಾಂಗಣವನ್ನು ದುರುಪಯೋಗಪಡಿಸಿಕೊಂಡ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ, ಕಾಂಗ್ರೆಸ್‌ ವಾಗ್ದಾಳಿ ನಡೆಸಿವೆ. ಈ ಬಗ್ಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಅವರಿಗೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಪತ್ರ ಬರೆದಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಅಧಿಕಾರಿ ಸಂಜೀವ್‌ ಖಿರ್ವಾರ್‌ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

ತ್ಯಾಗರಾಜ್ ಕ್ರೀಡಾಂಗಣದಲ್ಲಿ ನಡೆದ ನಾಚಿಕೆಗೇಡಿನ ಘಟನೆಯು ಕ್ರೀಡೆಯ ಬಗ್ಗೆ ದೆಹಲಿ ಸರ್ಕಾರ ಹೊಂದಿರುವ ಗಂಭೀರತೆಯನ್ನು ಬಹಿರಂಗಪಡಿಸಿದೆ. ದೆಹಲಿಯಲ್ಲಿರುವ ಕ್ರೀಡಾಂಗಣಗಳು ಕೆಟ್ಟ ಸ್ಥಿತಿಯಲ್ಲಿದ್ದು, ಅವುಗಳ ಸ್ಥಿತಿಯನ್ನು ಸುಧಾರಿಸುವ ಬದಲು ಕ್ರೀಡಾಪಟುಗಳನ್ನು ನಿರುತ್ಸಾಹಗೊಳಿಸುವ ಕೆಲಸವನ್ನು ದಿಲ್ಲಿ ಸರ್ಕಾರ ಮಾಡುತ್ತಿದೆ ಎಂದು ಆದೇಶ್‌ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ:  Cream Bun: ಬನ್​ನಲ್ಲಿ ಕ್ರೀಂ ಇಲ್ಲ ಎಂದು ಬೇಕರಿ ಮಾಲೀಕನ ಕೈ ಮುರಿದ ಪುಂಡರು

ಇನ್ನು, ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅನಿಲ್ ಚೌಧರಿ ಕೂಡ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕಿಡಿಕಾರಿದ್ದು, ದೆಹಲಿ ಸರ್ಕಾರಕ್ಕೆ ಕ್ರೀಡಾಪಟುಗಳಿಗಿಂತ ಅವರ ಅಧಿಕಾರಿಗಳ ಪ್ರಾಣಿಗಳು ಹೆಚ್ಚು ಮುಖ್ಯವಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಬಂಗಲೆ, ಕಚೇರಿಯನ್ನು ತಮಗೆ ಬೇಕಾದ ರೀತಿಯಲ್ಲಿ ನವೀಕರಿಸಿದ ಬಳಿಕ, 35 ಲಕ್ಷ ರೂ. ಮೌಲ್ಯದ ಹೊಸ ಕಾರನ್ನು ಖರೀದಿಸಿದ ಆಮ್‌ ಆದ್ಮಿಯ ಮುಖ್ಯಮಂತ್ರಿ ಸ್ವತಃ 64 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ತೆಗೆದುಕೊಳ್ಳುವಾಗ, ಅವರ ಸರ್ಕಾರದ ಅಧಿಕಾರಿಗಳಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ? ಇದು ಜನಸಾಮಾನ್ಯರ ಸರ್ಕಾರವೇ? ಎಂದು ಅನಿಲ್‌ ಚೌಧರಿ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
Published by:Ashwini Prabhu
First published: