ಸರ್ಕಾರ ಸೂಚಿಸಿದರೆ ಯಾವುದೇ ಗುರಿಯನ್ನಾದರೂ ನಾಶ ಮಾಡಲು ಸಿದ್ಧ: ಭಾರತೀಯ ವಾಯುಪಡೆ

“ಎಂಥ ಸಂದರ್ಭಕ್ಕೂ ವಾಯು ಪಡೆ ಸಜ್ಜಾಗಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ಯೋಜನೆ ಅಲ್ಲ, ಪ್ರತಿಯೊಂದಕ್ಕೂ ನಮ್ಮಲ್ಲಿ ಪ್ಲಾನ್ ಸಿದ್ಧವಿದೆ” ಎಂದು ಐಎಎಫ್ ಮುಖ್ಯಸ್ಥ ತಿಳಿಸಿದ್ದಾರೆ.

Vijayasarthy SN | news18
Updated:October 4, 2019, 7:30 PM IST
ಸರ್ಕಾರ ಸೂಚಿಸಿದರೆ ಯಾವುದೇ ಗುರಿಯನ್ನಾದರೂ ನಾಶ ಮಾಡಲು ಸಿದ್ಧ: ಭಾರತೀಯ ವಾಯುಪಡೆ
ಬಾಲಾಕೋಟ್​​ ವಾಯುದಾಳಿ
Vijayasarthy SN | news18
Updated: October 4, 2019, 7:30 PM IST
ನವದೆಹಲಿ(ಅ. 04): ಭಾರತ-ಪಾಕ್ ವೈಮಾನಿಕ ಸಂಘರ್ಷದ ವೇಳೆ ಭಾರತೀಯ ಹೆಲಿಕಾಪ್ಟರನ್ನು ತಮ್ಮ ಕ್ಷಿಪಣಿಯೇ ಹೊಡೆದುರುಳಿಸಿತು ಎಂದು ಒಪ್ಪಿಕೊಂಡ ಭಾರತೀಯ ವಾಯು ಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭಡೂರಿಯಾ ಇದೀಗ ತಮ್ಮ ಪಡೆ ಎಂಥ ಪರಿಸ್ಥಿಗೂ ಸಿದ್ಧ ಎಂದು ತಿಳಿಸಿದ್ದಾರೆ. ಸರ್ಕಾರ ಸೂಚಿಸಿದರೆ ಯಾವುದೇ ಗುರಿಯನ್ನೂ ಹೊಡೆದು ನಾಶ ಪಡಿಸಲು ವಾಯು ಪಡೆ ಸನ್ನದ್ಧವಾಗಿದೆ ಎಂದು ಭಡೂರಿಯಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

“ನಾನು ಕೇವಲ ಥಿಯೋರೆಟಿಕಲ್ ಆಗಿ ಮಾತನಾಡುತ್ತಿದ್ದೇನೆ. ನಾವು ಮೊದಲು ದಾಳಿ ಮಾಡುವುದಿಲ್ಲ. ಅಂಥ ಯೋಜನೆ ನಮ್ಮ ತಲೆಯಲ್ಲಿರುವುದಿಲ್ಲ. ಪಾಕಿಸ್ತಾನವೇನಾದರೂ ಮಾಡಿದರೆ ಮಾತ್ರ ಸರ್ಕಾರದ ಆದೇಶದ ಪ್ರಕಾರ ನಾವು ಪ್ರತಿಕ್ರಿಯೆ ಕೊಡುತ್ತೇವೆ. ಸರ್ಕಾರ ನಮಗೆ ಏನೇ ಗುರಿ ನೀಡಿದರೂ ಅದನ್ನು ನಾವು ನಿಭಾಯಿಸುತ್ತೇವೆ. ನನ್ನ ಕೆಳಗಿರುವ ವ್ಯಕ್ತಿಗಳು ಯಾವುದೇ ದಾಳಿಗೂ ಸಜ್ಜಾಗಿದ್ಧಾರೆ” ಎಂದು ಭಾರತೀಯ ವಾಯು ಪಡೆ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದೆ ಎಂಬುದು ರಹಸ್ಯವೇನಲ್ಲ, ಬಹಿರಂಗ ಸತ್ಯ- ರಾಹುಲ್​​ ಗಾಂಧಿ

ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 40 ಉಗ್ರ ಶಿಬಿರಗಳನ್ನು ಏಕಕಾಲದಲ್ಲಿ ನಾಶ ಮಾಡಬಲ್ಲಷ್ಟು ಶಕ್ತಿ ವಾಯು ಪಡೆಗೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಕೇಶ್ ಕುಮಾರ್ ಭಡೂರಿಯಾ ಅವರು ಈ ಮೇಲಿನಂತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಎಂಥ ಸಂದರ್ಭಕ್ಕೂ ವಾಯು ಪಡೆ ಸಜ್ಜಾಗಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಪ್ರತ್ಯೇಕ ಯೋಜನೆ ಅಲ್ಲ, ಪ್ರತಿಯೊಂದಕ್ಕೂ ನಮ್ಮಲ್ಲಿ ಪ್ಲಾನ್ ಸಿದ್ಧವಿದೆ” ಎಂದು ಐಎಎಫ್ ಮುಖ್ಯಸ್ಥ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಗೂ ಮುನ್ನ ವಾಯು ಪಡೆ ಮುಖ್ಯಸ್ಥರು ಬಾಲಾಕೋಟ್ ಏರ್ ಸ್ಟ್ರೈಕ್​ನ ಪ್ರೊಮೋಷನ್ ವಿಡಿಯೋ ಬಿಡುಗಡೆ ಮಾಡಿದರು. ಇದೇ ಫೆ. 26ರಂದು ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಜೈಷ್ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯು ಪಡೆಯ ಮಿರೇಜ್-2000 ಯುದ್ಧವಿಮಾನಗಳು ದಾಳಿ ನಡೆಸಿ ನಾಶ ಮಾಡಿದ ಘಟನೆಗೆ ಸಂಬಂಧಿಸಿದ ವಿಡಿಯೋ ಇದಾಗಿದೆ. ಸುಮಾರು ಒಂದೂಕಾಲು ನಿಮಿಷವಿರುವ ಈ ಟ್ರೇಲರ್​ನಲ್ಲಿ ಪುಲ್ವಾಮದಲ್ಲಿ ಉಗ್ರ ದಾಳಿಗೆ 40 ಮಂದಿ ಬಲಿಯಾದ ಘಟನೆ ವಿರುದ್ಧ ಜನರ ಪ್ರತಿಭಟನೆಯಿಂದ ಪ್ರಾರಂಭಗೊಂಡು ಬಾಲಾಕೋಟ್ ವೈಮಾನಿಕ ದಾಳಿಗೆ ಸಿದ್ಧತೆ ನಡೆಸುತ್ತಿರುವ ದೃಶ್ಯಗಳಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Loading...

First published:October 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...